ಭಾರತೀಯ ಸಿನಿಮಾರಂಗದಲ್ಲಿ ಸಂಗೀತ ಸಂಯೋಜಕ ಇಳಯರಾಜ ಬಹುದೊಡ್ಡ ಹೆಸರು. ಇದೀಗ ಅವರ ಬಯೋಪಿಕ್‌ ತಮಿಳು ಸಿನಿಮಾಗೆ ಸಿದ್ಧತೆ ನಡೆದಿದೆ. ಇಳಯರಾಜ ಅವರ ಪಾತ್ರದಲ್ಲಿ ಧನುಷ್‌ ನಟಿಸಲಿದ್ದಾರೆ. Connekkt media ನಿರ್ಮಿಸಲಿರುವ ಚಿತ್ರವನ್ನು ಆರ್‌ ಬಾಲ್ಕಿ ನಿರ್ದೇಶಿಸಲಿದ್ದಾರೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಮೇರು ಸಂಗೀತ ಸಂಯೋಜಕ ಇಳಯರಾಜ ಅವರ ಜೀವನಚರಿತ್ರೆಯಲ್ಲಿ ಧನುಷ್‌ ಕಾಣಿಸಿಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ ಇಳಯರಾಜ ಅವರ ಜೀವನಚರಿತ್ರೆಯ ಸಿನಿಮಾ Pan India ಯೋಜನೆಯಾಗಿದ್ದು, ಈ ಚಿತ್ರವನ್ನು R ಬಾಲ್ಕಿ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಯುವನ್ ಶಂಕರ್ ರಾಜಾ ಅವರು ತಮ್ಮ ತಂದೆ ಇಳಯರಾಜ ಅವರ ಜೀವನಚರಿತ್ರೆಯಲ್ಲಿ ಧನುಷ್ ಅವರನ್ನು ನೋಡಲು ಇಷ್ಟಪಡುವುದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಧನುಷ್ ಬಯೋಪಿಕ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು ಅಲ್ಲದೇ ಧನುಷ್ ಸ್ವತಃ ಇಳಯರಾಜ ಅವರ ದೊಡ್ಡ ಅಭಿಮಾನಿ. ಹೀಗಾಗಿ ನಟನಿಗೆ ಈ ಅವಕಾಶ ಸಿಕ್ಕಿರುವುದು ಅವರ ಬಹುದೊಡ್ಡ ಕನಸೊಂದು ನನಸಾಗಲಿದೆ.

ಈ ಸಿನಿಮಾದ ಚಿತ್ರೀಕರಣ ಮುಂದಿನ ವರ್ಷ ಆರಂಭವಾಗಲಿದೆ. ಸೌತ್ ಸ್ಟಾರ್ ಮೋಹನ್‌ಲಾಲ್‌ ಅವರ ‘ವೃಷಭ’ ಸಿನಿಮಾವನ್ನು ನಿರ್ಮಿಸುತ್ತಿರುವ Connekkt media ಈ ಚಿತ್ರವನ್ನು ನಿರ್ಮಿಸಲಿದೆ. ಇಳಯರಾಜರು ಭಾರತ ಸೇರಿದಂತೆ ಜಾಗತಿಕ ಮಟ್ಟದ ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರೊಬ್ಬ ಅದ್ಭುತ ಪ್ರತಿಭೆ. ಇವರು ಸುಮಾರು ಹತ್ತು ಸಾವಿರಕ್ಕಿಂತ ಅಧಿಕ ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಲಂಡನ್ ಮೂಲದ ಪ್ರತಿಷ್ಠಿತ ರಾಯಲ್ ಫಿಲೊಮಾನಿಕ್ ಆರ್ಕೆಸ್ಟ್ರಾಗಾಗಿ (Royal Philharmonic Orchestra) ಸ್ವರಮೇಳವನ್ನು ಸಂಯೋಜಿಸಿದ ಪ್ರಥಮ ಭಾರತೀಯ ಸಂಗೀತ ಸಂಯೋಜಕರು ಎಂಬ ಕೀರ್ತಿ ಇವರದು.

LEAVE A REPLY

Connect with

Please enter your comment!
Please enter your name here