ಶ್ರೀ ಕಮಲ್‌ ಮತ್ತು ಶಿವಾನಿ ರಾಜಶೇಖರ್‌ ನಟನೆಯ ‘ಜಿಲೇಬಿ’ ತೆಲುಗು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಕೆ ಇದು ಕಾಲೇಜ್‌ ಹಾಸ್ಟೆಲ್‌ನಲ್ಲಿ ನಡೆಯುವ ಕತೆ. ವಿಜಯ ಭಾಸ್ಕರ್‌ ನಿರ್ದೇಶನದ ಸಿನಿಮಾ ಆಗಸ್ಟ್‌ 18ರಂದು ತೆರೆಕಾಣಲಿದೆ.

ಕೆ ವಿಜಯ ಭಾಸ್ಕರ್ ನಿರ್ದೇಶನದ ‘ಜಿಲೇಬಿ’ ತೆಲುಗು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಶ್ರೀ ಕಮಲ್‌ ಮತ್ತು ಶಿವಾನಿ ರಾಜಶೇಖರ್‌ ಕಾಣಿಸಿಕೊಂಡಿದ್ದಾರೆ. ಕತೆಯು ಕಾಲೇಜ್‌ ಕ್ಯಾಂಪಸ್, ಹಾಸ್ಟೆಲ್‌, ಕಾಲೇಜ್‌ ಹುಡುಗರ ಗುಂಪು, ಅವರ ತಲೆಹರಟೆ, ಕಾಮಿಡಿ ಇವೆಲ್ಲವನ್ನು ಒಳಗೊಂಡಿದೆ. ಚಿತ್ರವು ಇದೇ ಆಗಸ್ಟ್‌ 18ರಂದು ಬಿಡುಗಡೆಯಾಗಲಿದೆ. ‘Just Have Fun’ ಅಡಿಬರಹವನ್ನು ಹೊಂದಿರುವ ಚಿತ್ರಕಥೆಯು ಕಮಲ್‌ನ ಸುತ್ತ ಸುತ್ತುತ್ತದೆ, ತನ್ನ ಕಾಲೇಜಿನ ಹುಡುಗಿಯೊಂದಿಗೆ ಪ್ರೀತಿಯಲ್ಲಿ ಬೀಳುವ ಕಮಲ್ ಆಕೆಯೊಂದಿಗೆ ಸಮಯ ಕಳೆಯಲು ಹುಡುಗರ ಹಾಸ್ಟೆಲ್‌ಗೆ ಕರೆ ತರುತ್ತಾನೆ. ಇವಳ ತಂದೆ ಮಾಜಿ MLA! ಅವನನ್ನು ಭೇಟಿಯಾದಾಗಲೂ ಕೆಲವು ಹಾಸ್ಯ ಸಂಭಾಷಣೆಗಳು ಜರುಗುತ್ತವೆ ತನ್ನ ಗರ್ಲ್‌ಫ್ರೆಂಡ್‌ ಅನ್ನು ಹಾಸ್ಟೆಲ್‌ ಒಳಗೆ ಕರೆತಂದು ಪೇಚಿಗೆ ಬೀಳುವ ಹಾಸ್ಯ ಸಂಗತಿಗಳನ್ನು, ಕ್ಲಾಸ್‌ ರೂಮ್‌, ಪರೀಕ್ಷೆ ಈ ಎಲ್ಲವನ್ನು ಟ್ರೈಲರ್‌ ಒಳಗೊಂಡಿದೆ.

SRK ಆರ್ಟ್ಸ್, ಅಂಜು ಅಸ್ರಾಣಿ ಕ್ರಿಯೇಷನ್ಸ್ ಬ್ಯಾನರ್‌ನ ಅಡಿಯಲ್ಲಿ ರಾಮಕೃಷ್ಣ ಗುಂಟೂರು, ಅಂಜು ಅಸ್ರಾಣಿ ಜಂಟಿಯಾಗಿ ನಿರ್ಮಿಸಿರುವ ಚಿತ್ರಕ್ಕೆ ಮಣಿ ಶರ್ಮ ಸಂಗೀತವಿದೆ. ಅಂಕಿತ್ ಕೊಯ್ಯ, ಸನ್ನಿ, ಬಮ್ಚಿಕ್ ಬಬ್ಲೂ, ರಾಜೇಂದ್ರ ಪ್ರಸಾದ್, ಮುರಳಿ ಶರ್ಮಾ ಮತ್ತು ಗೆಟಪ್ ಶ್ರೀನು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಮಲ್ಲೇಶ್ವರಿ’, ‘ನುವ್ವೇ ಕಾವಲಿ’, ‘ಮನ್ಮತುಡು’, ‘ನುವ್ವು ನಾಕು ನಚ್ಚಾವ್’ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಕೆ ವಿಜಯ ಭಾಸ್ಕರ್ ಅವರು ತಮ್ಮ ಮಗ ಶ್ರೀ ಕಮಲ್ ಅವರನ್ನು ಈ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ. 2013ರಲ್ಲಿ ಬಿಡುಗಡೆಯಾದ ‘ಮಸಾಲಾ’ ಚಿತ್ರದ ನಂತರ ನಿರ್ದೇಶನದಿಂದ ದೂರ ಸರಿದಿದ್ದ ವಿಜಯ ಭಾಸ್ಕರ್‌ ಈ ಚಿತ್ರದ ಮೂಲಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಜನಪ್ರಿಯ ನಟರಾದ ರಿತೇಶ್ ದೇಶ್‌ಮುಖ್, ಜೆನಿಲಿಯಾ, ರಿಚಾ, ತರುಣ್, ಆರತಿ ಅಗರ್‌ವಾಲ್‌ ಮುಂತಾದವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

Previous articleಈ ಬಾರಿ ದುಬೈನಲ್ಲಿ SIIMA | ಸೆಪ್ಟೆಂಬರ್‌ 15, 16ರಂದು ಸಮಾರಂಭ
Next article‘ಬಾಯ್ಸ್ ಹಾಸ್ಟೆಲ್’ನಲ್ಲಿ ತೆಲುಗು ನಟಿ | ರಮ್ಯಾ ಪಾತ್ರಕ್ಕೆ ರಶ್ಮಿ ಗೌತಮ್

LEAVE A REPLY

Connect with

Please enter your comment!
Please enter your name here