‘ಲಿಗರ್‌’ ತೆಲುಗು ಮತ್ತು ಹಿಂದಿ ದ್ವಿಭಾಷಾ ಸಿನಿಮಾದಲ್ಲಿನ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಫಸ್ಟ್‌ ಲುಕ್‌ ರಿವೀಲ್ ಆಗಿದೆ. ಪುರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದ ಮೂಲಕ ದಕ್ಷಿಣ ನಟ ವಿಜಯ್ ದೇವರಕೊಂಡ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ.

ಪುರಿ ಜಗನ್ನಾಥ್ ನಿರ್ದೇಶನದ ‘ಲಿಗರ್‌’ ತೆಲುಗು – ಹಿಂದಿ ಸಿನಿಮಾದಲ್ಲಿ ಬಾಕ್ಸರ್ ಮೈಕ್ ಟೈಸನ್ ನಟಿಸಿದ್ದು, ಅವರ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ. ಚಿತ್ರದಲ್ಲಿ ಜನಪ್ರಿಯ ತೆಲುಗು ನಟ ವಿಜಯ್ ದೇವರಕೊಂಡ ಮಾರ್ಷಿಯಲ್ ಆರ್ಟ್ಸ್‌ ಫೈಟರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ವಿಜಯ್ ಬಾಲಿವುಡ್‌ಗೆ ಪರಿಚಯವಾಗುತ್ತಿದ್ದಾರೆ. ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾ ಕನ್ನಡ, ತಮಿಳು, ಮಲಯಾಳಂ ಡಬ್ಬಿಂಗ್ ಅವತರಣಿಕೆಗಳಲ್ಲಿ ತೆರೆಕಾಣಲಿದೆ. ಮೈಕ್ ಟೈಸನ್‌ ತಮ್ಮ ಹೊಸ ಲುಕ್‌ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, “ನಮಸ್ತೆ ಇಂಡಿಯಾ, ದೀಪಾವಳಿ ಶುಭಾಶಯ” ಎಂದು ಸಂದೇಶ ಹಾಕಿದ್ದಾರೆ. ಹೀರೋ ವಿಜಯ್‌ ದೇವರಕೊಂಡ ಟ್ವಿಟರ್‌ನಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ.

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್‌ ಅವರ ಧರ್ಮ ಪ್ರೊಡಕ್ಷನ್ಸ್‌ ‘ಲಿಗರ್’ ಸಹನಿರ್ಮಾಣದ ಹೊಣೆ ಹೊತ್ತಿದೆ. “ಲೆಜೆಂಡ್ ಮೈಕ್ ಟೈಸನ್‌ ಒಂದಷ್ಟು ಪಂಚ್‌ಗಳೊಂದಿಗೆ ದೀಪಾವಳಿ ಸೆಲೆಬ್ರೇಟ್ ಮಾಡುತ್ತಿದ್ದಾರೆ” ಎಂದು ಕರಣ್ ಜೋಹರ್‌ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಸಿನಿಮಾದ ನಟ ಟೈಸನ್‌ರ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ. ಬಾಲಿವುಡ್‌ ನಟ ಚಿಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ ಚಿತ್ರದ ಹಿರೋಯಿನ್‌. ರಮ್ಯಕೃಷ್ಣ, ರೋನಿತ್ ರಾಯ್‌, ವಿಶು ರೆಡ್ಡಿ, ಅಲಿ, ಮಕರಂದ್ ದೇಶ್‌ಪಾಂಡೆ ಇತರರು ನಟಿಸಿದ್ದಾರೆ. ನಿರ್ದೇಶಕ ಪುರಿ ಜಗನ್ನಾಥ್‌, ನಟಿ ಚಾರ್ಮಿ ಕೌರ್‌ ಕೂಡ ಚಿತ್ರದ ಸಹನಿರ್ಮಾಪಕರು. ಮುಂದಿನ ವರ್ಷ ಸಿನಿಮಾ ತೆರೆಕಾಣಲಿದ್ದು, ರಿಲೀಸ್ ದಿನಾಂಕವಿನ್ನೂ ಹೊರಬಿದ್ದಿಲ್ಲ.

LEAVE A REPLY

Connect with

Please enter your comment!
Please enter your name here