ಪುಷ್ಪೇಂದ್ರನಾಥ್‌ ಮಿಶ್ರಾ ನಿರ್ದೇಶನದ Heist comedy ವೆಬ್‌ ಸರಣಿ ‘ಚೂನಾ’ ಟ್ರೈಲರ್‌ ಬಿಡುಗಡೆಯಾಗಿದೆ. ಜಿಮ್ಮಿ ಶೆರ್ಗಿಲ್‌ ಮುಖ್ಯ ಪಾತ್ರದಲ್ಲಿ ನಟಿಸಿರುವ ಸರಣಿ ಆಗಸ್ಟ್‌ 3ರಿಂದ Netflixನಲ್ಲಿ ಸ್ಟ್ರೀಮ್‌ ಆಗಲಿದೆ.

ಜಿಮ್ಮಿ ಶೆರ್ಗಿಲ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಚೂನಾ’ heist comedy ವೆಬ್‌ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. ಪುಷ್ಪೇಂದ್ರನಾಥ್ ಮಿಶ್ರಾ ಬರೆದು ನಿರ್ದೇಶಿಸಿರುವ ಸರಣಿ ಫ್ಲೈಯಿಂಗ್ ಸಾಸರ್ ಸಂಸ್ಥೆಯಡಿ ತಯಾರಾಗಿದೆ. 600 ಕೋಟಿ ರೂಪಾಯಿ ಬೃಹತ್‌ ಮೊತ್ತವನ್ನು ಲೂಟಿ ಮಾಡಲು ಯೋಜನೆ ರೂಪಿಸುತ್ತಿರುವ ಒಂದು ಗುಂಪಿನ ಷಡ್ಯಂತ್ರ ಸರಣಿಯ ಕಥಾವಸ್ತು. ಆಶಿಮ್ ಗುಲಾಟಿ, ವಿಕ್ರಮ್ ಕೊಚ್ಚರ್, ಚಂದನ್ ರಾಯ್, ನಮಿತ್ ದಾಸ್, ಜ್ಞಾನೇಂದ್ರ ತ್ರಿಪಾಠಿ, ಅತುಲ್ ಶ್ರೀವಾಸ್ತವ, ಮೋನಿಕಾ ಪನ್ವಾರ್, ನಿಹಾರಿಕಾ ಲೈರಾ ದತ್ ಸರಣಿಯ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮುಖ್ಯ ಪಾತ್ರದಲ್ಲಿರುವ ನಟ ಜಿಮ್ಮಿ ಶೆರ್ಗಿಲ್‌, ‘ಪುಷ್ಪೇಂದ್ರನಾಥ್ ಮಿಶ್ರಾ ನಿರ್ದೇಶಿಸಿದ ಸರಣಿಯ ಭಾಗವಾಗಿರುವುದು ರೋಮಾಂಚಕವಾಗಿದೆ. ಸರಣಿ ಅದ್ಭುತ ತಂಡ ಹೊಂದಿದ್ದು, ಖಂಡಿತ ಇದು ವೀಕ್ಷಕರಿಗೆ ವಿಭಿನ್ನ ಅನುಭವ ನೀಡಲಿದೆ’ ಎಂದಿದ್ದಾರೆ. ಆಗಸ್ಟ್ 3ರಿಂದ ಸರಣಿ Netflixನಲ್ಲಿ ಸ್ಟ್ರೀಮ್ ಆಗಲಿದೆ.

Previous article‘The Hunt for Veerappan’ ಟೀಸರ್‌ | Netflix docu-series ಆಗಸ್ಟ್‌ 4ರಿಂದ
Next article‘ದೋನೊ’ ಟೀಸರ್‌ | ರಾಜವೀರ್‌ ಡಿಯೋಲ್‌ – ಪಲೋಮಾ ಠಾಕೇರಿಯಾ ಹಿಂದಿ ಸಿನಿಮಾ

LEAVE A REPLY

Connect with

Please enter your comment!
Please enter your name here