ಅವ್ನೀಶ್‌ ಬರ್ಜಾತ್ಯಾ ಚೊಚ್ಚಲ ನಿರ್ದೇಶನದ ‘ದೋನೊ’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಸನ್ನಿ ಡಿಯೋಲ್‌ ಪುತ್ರ ರಾಜವೀರ್‌ ಡಿಯೋಲ್‌ ಮತ್ತು ಪಲೋಮಾ ಠಾಕೇರಿಯಾ ನಟನೆಯ ಚಿತ್ರವಿದು. ‘Two Strengers One Destination’ ಚಿತ್ರದ ಅಡಿಬರಹ.

ನಿರ್ಮಾಪಕ ಸೂರಜ್ ಬರ್ಜಾತ್ಯಾ ಅವರ ಪುತ್ರ ಅವ್ನೀಶ್ ಬರ್ಜಾತ್ಯಾ ನಿರ್ದೇಶನದ ಚೊಚ್ಚಲ ಹಿಂದಿ ಚಿತ್ರ ‘ದೊನೊ’ ಟೀಸರ್‌ ಬಿಡುಗಡೆಯಾಗಿದೆ. ಸನ್ನಿ ಡಿಯೋಲ್ ಮತ್ತು ಪೂಜಾ ಡಿಯೋಲ್ ಅವರ ಪುತ್ರ ರಾಜವೀರ್ ಡಿಯೋಲ್ ಮತ್ತು ಖ್ಯಾತ ನಟಿ ಪೂನಂ ಧಿಲ್ಲೋನ್ ಮತ್ತು ನಿರ್ಮಾಪಕ ಅಶೋಕ್ ಠಾಕೇರಿಯಾ ಅವರ ಪುತ್ರಿ ಪಲೋಮಾ ಧಿಲ್ಲೋನ್ ನಟನೆಯ ಮೊದಲ ಚಿತ್ರವಿದು. ರಾಜ್‌ವೀರ್ ಮತ್ತು ಪಲೋಮಾ ಸುಂದರವಾದ ಬೀಚ್ ಸೆಟ್ಟಿಂಗ್‌ನಲ್ಲಿ ಕುಳಿತು ಪ್ರೀತಿಯ ಸಂಭಾಷಣೆ ನಡೆಸುವ ದೃಶ್ಯದೊಂದಿಗೆ ಟೀಸರ್ ಆರಂಭವಾಗುತ್ತದೆ. ಸಮಾನಮಸ್ಕರಾದ ಅಪರಿಚಿತರು ಪ್ರೀತಿಯಲ್ಲಿ ಬೀಳುವ ಕಥಾಹಂದರ ಚಿತ್ರದ್ದು. ‘ಮೈನೆ ಪ್ಯಾರ್ ಕಿಯಾ’, ‘ಹಮ್ ಆಪ್ಕೆ ಹೈ ಕೌನ್‌’ನಂತಹ ಸೂಪರ್‌ಹಿಟ್‌ ಸಿನಿಮಾಗಳ ನಿರ್ಮಾಣ ಸಂಸ್ಥೆ ರಾಜಶ್ರೀ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ನಿರ್ದೇಶಕ ಅವ್ನೀಶ್ ಬರ್ಜಾತ್ಯಾ ಅವರು ಈ ಹಿಂದೆ ತಮ್ಮ ತಂದೆಯ ನಿರ್ದೇಶನದ ‘ಪ್ರೇಮ್ ರತನ್ ಧನ್ ಪಾಯೋ’ ಮತ್ತು ‘ಉಂಚೈ’ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ಶಂಕರ್‌ ಇಶಾನ್‌ ಲಾಯ್‌ ಸಂಗೀತ ಸಂಯೋಜಿಸಿದ್ದಾರೆ. ‘Two Strengers One Destination’ ಚಿತ್ರದ ಅಡಿಬರಹ.

Previous article‘ಚೂನಾ’ ಟ್ರೈಲರ್‌ | ಜಿಮ್ಮಿ ಶೆರ್ಗಿಲ್‌ Heist comedy ನೆಟ್‌ಫ್ಲಿಕ್ಸ್‌ನಲ್ಲಿ ಆಗಸ್ಟ್‌ 3ರಿಂದ
Next articleಧನುಷ್‌ ‘ಕ್ಯಾಪ್ಟನ್‌ ಮಿಲ್ಲರ್‌’ ಟೀಸರ್‌ | ವಿಶೇಷ ಪಾತ್ರದಲ್ಲಿ ನಟ ಶಿವರಾಜಕುಮಾರ್‌

LEAVE A REPLY

Connect with

Please enter your comment!
Please enter your name here