ನಟ ಸೋನು ಸೂದ್‌ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ತಮ್ಮ ನೂತನ ಆಕ್ಷನ್‌ – ಥ್ರಿಲ್ಲರ್‌ ಸಿನಿಮಾ ‘ಫತೇಹ್’ ಘೋಷಿಸಿದ್ದಾರೆ. ನೈಜ ಘಟನೆಗಳನ್ನು ಆಧರಿಸಿದ ಚಿತ್ರವಿದು. ಝೀ ಸ್ಟುಡಿಯೋ ನಿರ್ಮಾಣದ ಈ ಚಿತ್ರವನ್ನು ಅಭಿನಂದನ್‌ ಗುಪ್ತಾ ನಿರ್ದೇಶಿಸಲಿದ್ದಾರೆ.

ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ನಟ ಸೋನು ಸೂದ್‌ ಸಾಮಾಜಿಕ ಸೇವಾಕಾರ್ಯಗಳ ಮೂಲಕ ಸುದ್ದಿಯಲ್ಲಿದ್ದರು. ತೆರೆ ಮೇಲೆ ಹೆಚ್ಚಾಗಿ ಖಳಪಾತ್ರಗಳಲ್ಲಿ ಅಭಿನಯಿಸುವ ಅವರು ತೆರೆಯಾಚೆಗೆ ಹೀರೋ ಇಮೇಜಿನ ವ್ಯಕ್ತಿ. 48ರ ಹರೆಯದ ನಟ ಇಂದು ತಮ್ಮ ಹೊಸ ಸಿನಿಮಾ ಘೋಷಿಸಿದ್ದಾರೆ. ಝೀ ಸ್ಟುಡಿಯೋ ನಿರ್ಮಾಣದಲ್ಲಿ ಅವರ ‘ಫತೇಹ್‌’ ಆಕ್ಷನ್‌ – ಥ್ರಿಲ್ಲರ್‌ ಹಿಂದಿ ಸಿನಿಮಾ ಸೆಟ್ಟೇರಿದೆ. ನೈಜ ಘಟನೆಗಳನ್ನು ಆಧರಿಸಿದ ಕಥಾವಸ್ತು ಇರಲಿದ್ದು, ಅಭಿನಂದನ್‌ ಗುಪ್ತಾ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ದೇಶರಕ್ಷಣೆಗೆ ನಿಲ್ಲುವ ಹಿಂದೆಂದೂ ಕಾಣದಂತಹ ವಿಶಿಷ್ಟ ಆಕ್ಷನ್‌ ಪಾತ್ರದಲ್ಲಿ ಸೋನು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ಈ ಕತೆ ಒಮ್ಮೆಗೇ ನನಗೆ ಇಷ್ಟವಾಯ್ತು. ಸ್ಕ್ರಿಪ್ಟ್‌ ಓದುತ್ತಿದ್ದಂತೆ ಈ ಪ್ರಾಜೆಕ್ಟ್‌ನ ಭಾಗವಾಗಬೇಕೆಂದು ನಿರ್ಧರಿಸಿದೆ. ಚಿಂತನೆಗೆ ಹಚ್ಚುವ ಈ ಕತೆಯೊಂದಿಗೆ ಪ್ರೇಕ್ಷಕರನ್ನು ಎದುರುಗೊಳ್ಳಲು ಆಸಕ್ತನಾಗಿದ್ದೇನೆ” ಎಂದಿದ್ದಾರೆ ಸೋನು ಸೂದ್‌.

“ಕಳೆದ ಒಂದೂವರೆ ದಶಕಗಳಿಂದ ಅಭಿನಯಿಸುತ್ತಿರುವ ಸೋನು ಸೂದ್‌ ತಾವೊಬ್ಬ ಉತ್ತಮ ನಟ ಎನ್ನುವುದನ್ನು ಪ್ರೂವ್‌ ಮಾಡಿದ್ದಾರೆ. ಇನ್ನು ಕಳೆದೆರೆಡು ವರ್ಷಗಳಲ್ಲಿ ಕೋವಿಡ್‌ ಸಂಕಷ್ಟಕ್ಕೀಡಾದ ಸಾವಿರಾರು ಜನರಿಗೆ ಅವರು ನೆರವಾಗಿ ರಿಯಲ್‌ ಹೀರೋ ಆಗದ್ದೂ ಎಲ್ಲರಿಗೂ ತಿಳಿದಿದೆ. ಈಗ ಒಂದೊಳ್ಳೆಯ ಕತೆಯ ಮೂಲಕ ತೆರೆಯ ಮೇಲೆ ಬರಲಿದ್ದಾರೆ” ಎಂದು ಝೀ ಸ್ಟುಡಿಯೋ ಹೇಳಿಕೊಂಡಿದೆ. 2018ರಲ್ಲಿ ಅವರು ‘ಸಿಂಬಾ’ ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 2022ರ ಆರಂಭದಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಚಿತ್ರದ ಇತರೆ ತಾರಾಬಳಗದ ಬಗ್ಗೆ ಶೀಘ್ರದಲ್ಲೇ ಮಾಹಿತಿ ಹೊರಬೀಳಲಿದೆ.

LEAVE A REPLY

Connect with

Please enter your comment!
Please enter your name here