ಭರವಸೆಯ ಯುವ ನಟ ಶ್ರೀ ಮಹದೇವ್‌ ಮತ್ತು ಅದಿತಿ ಪ್ರಭುದೇವ ಜೋಡಿಯ ‘ಗಜಾನನ ಅಂಡ್‌ ಗ್ಯಾಂಗ್‌’ ಚಿತ್ರದ ಟ್ರೈಲರ್‌ ರಿಲೀಸ್‌ ಆಗಿದೆ. ಅಭಿಷೇಕ್‌ ಶೆಟ್ಟಿ ನಿರ್ದೇಶನದ ಕಾಲೇಜ್‌ ಲವ್‌ಸ್ಟೋರಿಯಲ್ಲಿ ಮಹದೇವ್‌ ಎರಡು ಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀಮಹದೇವ್ ಮತ್ತು ಅದಿತಿ ಪ್ರಭುದೇವ ನಟನೆಯ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ‘ನಮ್ ಗಣಿ ಬಿಕಾಂ ಪಾಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕ ಮತ್ತು ನಿರ್ದೇಶಕನಾಗಿ ಪದಾರ್ಪಣೆ ಮಾಡಿದ್ದ ನಟ ಅಭಿಷೇಕ್ ಶೆಟ್ಟಿ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ನಟಿ ಮೇಘನಾ ರಾಜ್ ಟ್ರೈಲರ್‌ ಲಾಂಚ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ‘ಗಜಾನನ ಅಂಡ್ ಗ್ಯಾಂಗ್’ ಟ್ರೈಲರ್‌ ಅನಾವರಣಗೊಳಿಸಿದರು. ನಟಿ ಅದಿತಿ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ ಮೇಘನಾ, “ಅದಿತಿ ನನ್ನ ಫೇವರೇಟ್ ಹೀರೋಯಿನ್. ಶ್ರೀ ಮಹದೇವ್ ಜೊತೆ ‘ಇರುವುದೆಲ್ಲವ ಬಿಟ್ಟು’ ಸಿನಿಮಾದಲ್ಲಿ ನಟಿಸಿದ್ದೇನೆ. ಆ ಸ್ನೇಹದ ಕಾರಣಕ್ಕಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಟ್ರೈಲರ್‌ ಚೆನ್ನಾಗಿದ್ದು, ಸಿನಿಮಾಗೆ ಯಶಸ್ಸು ಸಿಗಲಿ” ಎಂದು ಹಾರೈಸಿದರು.

ಶೀರ್ಷಿಕೆಯೇ ಹೇಳುವಂತೆ ‘ಗಜಾನನ ಅಂಡ್ ಗ್ಯಾಂಗ್’ ಕಾಲೇಜ್ ಕಥೆಯಾಧಾರಿತ ಸಿನಿಮಾ. ಕಾಮಿಡಿ, ಸೆಂಟಿಮೆಂಟ್ ಕೂಡ ಸಿನಿಮಾದಲ್ಲಿದೆ. ಸಿನಿಮಾದಲ್ಲಿ ಮಹಾದೇವ್ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ‘ಗಜ’ ಪಾತ್ರದಲ್ಲಿ ನಟಿಸಿದ್ದರೆ, ಅದಿತಿ ಪ್ರಭುದೇವ ಮಿಡಲ್ ಕ್ಲಾಸ್ ಕುಟುಂಬದ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಅಭಿಷೇಕ್ ಶೆಟ್ಟಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಯು.ಎಸ್.ನಾಗೇಶ್ ಕುಮಾರ್ ‘ಗಜಾನನ ಸಿನಿಮಾಗೆ ಬಂಡವಾಳ ಹೂಡಿದ್ದು, ಪ್ರದ್ಯುತನ್ ಸಂಗೀತ ಸಂಯೋಜನೆ, ಉದಯ ಲೀಲಾ ಛಾಯಾಗ್ರಹಣ, ವಿಜೆಟ್ ಚಂದ್ರ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ ಚಿತ್ರಕ್ಕಿದೆ. ಬಿಗ್ ಬಾಸ್ ಖ್ಯಾತಿಯ ರಘು ಗೌಡ, ಚೇತನ್ ದುರ್ಗ, ನಾಟ್ಯ ರಂಗ, ಅಶ್ವಿನ್ ಹಾಸನ್ ಇತರರು ತಾರಾಬಳಗದಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here