ದೇವಶೀಶ್ ಮಖಿಜಾ ನಿರ್ದೇಶನದಲ್ಲಿ ಮನೋಜ್ ಬಾಜಪೇಯಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಜೋರಮ್’ ಹಿಂದಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಜಾರ್ಖಂಡ್ ರಾಜ್ಯವನ್ನೇ ಮುಖ್ಯ ವಸ್ತುವಾಗಿಟ್ಟುಕೊಂಡಿರುವ ಹೆಣೆದಿರುವ ಕತೆ. ಇದೇ ಡಿಸೆಂಬರ್ 8ರಂದು ಸಿನಿಮಾ ತೆರೆಕಾಣಲಿದೆ.
ಮನೋಜ್ ಬಾಜಪೇಯಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಜೋರಮ್’ (Joram) ಹಿಂದಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದೇವಶೀಶ್ ಮಖಿಜಾ ನಿರ್ದೇಶಿಸಿದ್ದಾರೆ. ಈ ಸೈಕಲಾಜಿಕಲ್ ಥ್ರಿಲ್ಲರ್ ಚಲನಚಿತ್ರದ ಟ್ರೇಲರ್‌ನಲ್ಲಿ ಸ್ಥಳಾಂತರಗೊಂಡ ಮಾನಸಿಕ ರೋಗಿ ‘ದಸ್ರು’ (ಮನೋಜ್ ಬಾಜಪೇಯಿ) ತನ್ನ ಮೂರು ತಿಂಗಳ ಮಗುವನ್ನು ಹಾಗೂ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೋರಾಡುತ್ತಾನೆ. ಜಾರ್ಖಂಡ್ ರಾಜ್ಯವನ್ನೇ ಮುಖ್ಯ ವಸ್ತುವಾಗಿಟ್ಟುಕೊಂಡಿರುವ ಈ ಕಥೆಯಲ್ಲಿ ರಾಜಕೀಯ ಮತ್ತು ಸಾಮಾಜಿಕ ಅಸಮಾನತೆಗಳು, ಬುಡಕಟ್ಟು ಸಮುದಾಯಗಳಿಗಾಗಿರುವ ಅನ್ಯಾಯ ಮತ್ತು ಅರಣ್ಯನಾಶದಂತಹ ಸಮಸ್ಯೆಗಳನ್ನು ತೋರಿಸಲಾಗಿದೆ.
ಚಿತ್ರದಲ್ಲಿ ಮೊಹಮ್ಮದ್ ಜೀಶನ್, ಅಯ್ಯೂಬ್ ಸ್ಮಿತಾ ತಾಂಬೆ, ಮತ್ತು ಮೇಘಾ ಮಾಥುರ್ ಪ್ರಮುಖ ಪಾತ್ರಗಳಲ್ಲಿ ಹಾಗೂ ತನ್ನಿಷ್ಟಾ ಚಟರ್ಜಿ ಮತ್ತು ರಾಜಶ್ರೀ ದೇಶಪಾಂಡೆ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು Zee Studios ಸಹಯೋಗದೊಂದಿಗೆ ಆಸಿಮಾ ಆವಸ್ತಿ, ದೇವಶೀಶ್ ಮಖಿಜ ಮತ್ತು ಅನುಪಮಾ ಬೋಸ್ ನಿರ್ಮಿಸಿದ್ದಾರೆ. ರೋಟರ್‌ಡ್ಯಾಮ್ ಮತ್ತು ಜಿಯೋ ಮಾಮಿ ಮುಂಬೈ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಸಿನಿಮಾ ಪ್ರದರ್ಶನಗೊಂಡಿದೆ. ಚಿತ್ರವು ಮನೋಜ್ ಬಾಜಪೇಯಿ ಮತ್ತು ದೇವಶೀಶ್ ಮಖಿಜಾ ಅವರ ಮೂರನೇ ಸಹಯೋಗವಾಗಿದೆ. ಅವರು ಈ ಹಿಂದೆ ‘ಭೋಂಸ್ಲೆ’ (2018) ಮತ್ತು ‘ವೈರಲ್ ಕಿರು ತಾಂಡವ್’ (2016) ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. ಇದೇ ಡಿಸೆಂಬರ್ 8ರಂದು ಸಿನಿಮಾ ತೆರೆಕಾಣಲಿದೆ.