‘ಜೋ ಅಂಡ್‌ ಜೋ’ ಸಿನಿಮಾ ಖ್ಯಾತಿಯ ಅರುಣ್‌ ಡಿ ಜೋಸ್‌ ನಿರ್ದೇಶನದ ‘ಜರ್ನೀ ಆಪ್‌ ಲವ್‌ 18+’ ಮಲಯಾಳಂ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ನಸ್ಲೆನ್ ಕೆ ಗಫೂರ್ ಮತ್ತು ಮೀನಾಕ್ಷಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಜುಲೈನಲ್ಲಿ ತೆರೆಕಾಣಲಿದೆ.

‘ಜರ್ನೀ ಆಫ್‌ ಲವ್‌ 18+’ ಟ್ರೈಲರ್‌ ತೆರೆದುಕೊಳ್ಳುವುದು ಹೀಗೆ – ಪರಸ್ಪರ ಪ್ರೀತಿಸಿದ ಪಿಯೂಸಿ ಓದುವ ಸಹಪಾಠಿಗಳು ಮನೆಯಿಂದ ಓಡಿಹೋಗಿ ಮದುವೆಯಾಗಲು ಬಯಸುತ್ತಾರೆ. ಈ ಪ್ರೇಮಕತೆಯು ಫೋನ್ ಸಂಭಾಷಣೆಯೊಂದಿಗೆ ಪ್ರಾರಂಭವಾಗುತ್ತದೆ. ಇದರಲ್ಲಿ ಹುಡುಗಿ, ತನ್ನನ್ನು ಎಲ್ಲಿಯಾದರೂ ಕರೆದುಕೊಂಡು ಹೋಗುವಂತೆ ಹುಡುಗನನ್ನು ಪ್ರೇರೇಪಿಸಿ ಓಡಿಹೋಗಲು ನಿರ್ಧಾರಿಸುತ್ತಾರೆ. ಇಬ್ಬರಿಗೂ ತಾವು ಮಾಡಲಿರುವ ಈ ಕೃತ್ಯದ ಗಂಭೀರತೆಯ ಬಗ್ಗೆ ಅರಿವಿಲ್ಲ. ಇದರ ಮಧ್ಯೆ ನಡೆಯುವ ಸನ್ನಿವೇಶದಲ್ಲಿ ಹುಡುಗಿ ತನ್ನ ಮದುವೆ ಸೀರೆಯ ಬಣ್ಣದ ಬಗ್ಗೆ ಹೆಚ್ಚು ಚಿಂತಿಸುತ್ತಿರುತ್ತಾಳೆ!

ನೈಜತೆಯ ಜೊತೆಗೆ ವಯಲೆನ್ಸ್‌ ದೃಶ್ಯಗಳನ್ನೊಳಗೊಂಡ ಟ್ರೈಲರ್‌ನಲ್ಲಿ ನಿಖಿಲಾ ವಿಮಲ್‌ ಲಾಯರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ವಾಸವಿರುವ ಹಳ್ಳಿಯ ದೃಶ್ಯಗಳು ಕಾಣಸಿಗುತ್ತವೆ. ಇವರ ಪ್ರೀತಿಗೆ ಪೋಷಕರ ಹಾಗೂ ಊರಿನ ಜನರ ವಿರೋಧ ವ್ಯಕ್ತವಾಗುತ್ತದೆ. ಎಲ್ಲಾ ವಿರೋಧಗಳ ಮಧ್ಯೆ ಪ್ರೀತಿಗೆ ಅವರ ಸ್ನೇಹಿತರು ನೆರವಾಗುತ್ತಾರೆ. ಅನುಮೋದ್‌ ಬೋಸ್‌ ನಿರ್ಮಾಣದ ಚಿತ್ರಕ್ಕೆ ಕ್ರಿಸ್ಟಿನೋ ಕ್ಸಾವಿಯರ್‌ ಸಂಗೀತ ಸಂಯೋಜನೆಯಿದೆ. ಮ್ಯಾಥ್ಯೂ ಥಾಮಸ್, ಬಿನು ಪಪ್ಪು, ನಿಖಿಲಾ ವಿಮಲ್‌, ಮತ್ತು ಸಾಫ್ ಬ್ರದರ್ಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಜುಲೈನಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here