ಏಕ್ತಾ ಕಪೂರ್‌ ನಿರ್ಮಾಣದ ‘ವೃಷಭ’ ಚಿತ್ರದಲ್ಲಿ ಮೋಹನ್‌ ಲಾಲ್‌ ಅಭಿನಯಿಸುವುದು ಖಚಿತವಾಗಿದೆ. ಕನ್ನಡ ಚಿತ್ರನಿರ್ದೇಶಕ ನಂದಕಿಶೋರ್‌ ಈ ಸಿನಿಮಾದ ಸಾರಥ್ಯ ವಹಿಸಲಿದ್ದಾರೆ. ಮೂಲ ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗಲಿರುವ ಸಿನಿಮಾ ಕನ್ನಡ, ಹಿಂದಿ ಮತ್ತು ತಮಿಳಿಗೆ ಡಬ್‌ ಆಗಿ ತೆರೆಕಾಣಲಿದೆ.

‌ಖ್ಯಾತ ಹಿಂದಿ ಕಿರುತೆರೆ ನಿರ್ಮಾಪಕಿ ಏಕ್ತಾ ಕಪೂರ್‌ ಅವರು ಮೋಹನ್‌ ಲಾಲ್‌ರಿಗಾಗಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ವೃಷಭ’ ಎಂದು ಶೀರ್ಷಿಕೆ ನಿಗಧಿಯಾಗಿದೆ. ಹಲವು ಯಶಸ್ವೀ ಸಿನಿಮಾಗಳನ್ನು ನೀಡಿರುವ ಕನ್ನಡ ಚಿತ್ರನಿರ್ದೇಶಕ ನಂದಕಿಶೋರ್‌ ಈ ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನುವುದು ವಿಶೇಷ. ಹಲವು ದಿನಗಳಿಂದ ಚರ್ಚೆಯಲ್ಲಿದ್ದ ಈ ಸುದ್ದಿ ಇದೀಗ ಅಧಿಕೃತವಾಗಿದೆ. ಸಿನಿಮಾ PAN ಇಂಡಿಯಾ ಪ್ರಾಜೆಕ್ಟ್‌ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಏಕ್ತಾ, ‘ದಿಗ್ಗಜ ನಟ ಮೋಹನ್‌ ಲಾಲ್‌ ಅವರೊಂದಿಗೆ ಕೆಲಸ ಮಾಡಲು ಉತ್ಸಕಳಾಗಿದ್ದೇನೆ. ಈ ಚಿತ್ರ 2024ರ ಅತೀ ದೊಡ್ಡ ಚಲನಚಿತ್ರಗಳಲ್ಲಿ ಒಂದಾಗಲಿದೆ. ಇದನ್ನು ನಂದ ಕಿಶೋರ್‌ ನಿರ್ದೇಶನ ಮಾಡಲಿದ್ದಾರೆ. ಚಿತ್ರವು, ಮಲಯಾಳಂ, ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ತೆರೆಕಾಣಲಿದೆ’ ಎಂದು ಬರೆದಿದ್ದಾರೆ. ಇದು ತಂದೆ – ಮಗನ ಬಾಂಧವ್ಯದ ಕತೆ ಎನ್ನುವುದು ಪ್ರಾಥಮಿಕ ಮಾಹಿತಿ. ಮೂಲ ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗಲಿರುವ ಸಿನಿಮಾ ಕನ್ನಡ, ತಮಿಳು ಮತ್ತು ಹಿಂದಿ ಭಾಷೆಗಳಿಗೆ ಡಬ್‌ ಆಗಿ ತೆರೆಕಾಣಲಿದೆ. ಇದಾದ ನಂತರ ಏಕ್ತಾ ಕಪೂರ್ ಅವರ ಮುಂದಿನ ನಿರ್ಮಾಣದ ಚಿತ್ರ ‘ದಿ ಕ್ಯೂ’ ಆಗಿದ್ದು, ಈ ಚಿತ್ರದಲ್ಲಿ ಕೃತಿ ಸನೋನ್, ಕರೀನಾ ಕಪೂರ್‌ ಖಾನ್‌ ಮತ್ತು ಟಬು ನಟಿಸಲಿದ್ದಾರೆ.

Previous articleಆಸ್ಕರ್‌ ಸಮಿತಿಗೆ ಮಣಿರತ್ನಂ, ಕರಣ್‌ ಜೋಹರ್‌, Jr NTR, ರಾಮ್‌ಚರಣ್‌ರಿಗೆ ಆಹ್ವಾನ
Next articleಕಮಲ ಹಾಸನ್‌ ‘KH233’ ಸಿನಿಮಾ ಟೈಟಲ್‌ ಟೀಸರ್‌ | ಎಚ್‌ ವಿನೋದ್‌ ನಿರ್ದೇಶನ

LEAVE A REPLY

Connect with

Please enter your comment!
Please enter your name here