ರಾಹುಲ್‌ ಸದಾಶಿವನ್‌ ನಿರ್ದೇಶನದಲ್ಲಿ ಮಮ್ಮೂಟಿ, ಅರ್ಜುನ್‌ ಅಶೋಕನ್‌ ನಟಿಸುತ್ತಿರುವ ಮಲಯಾಳಂ ಸಿನಿಮಾಗೆ ‘ಬ್ರಹ್ಮಯುಗಂ’ ಎಂದು ನಾಮಕರಣವಾಗಿದೆ. ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದ್ದು, ಹಿರಿಯ ನಟ ಮಮ್ಮೂಟಿ ಚಿತ್ರದಲ್ಲಿ ಖಳಛಾಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮಮ್ಮೂಟಿ ನೆಗೆಟೀವ್‌ ಶೇಡ್‌ನಲ್ಲಿ ನಟಿಸುತ್ತಿರುವ ನೂತನ ಹಾರರ್‌ – ಥ್ರಿಲ್ಲರ್‌ ಮಲಯಾಳಂ ಚಿತ್ರಕ್ಕೆ ‘ಬ್ರಹ್ಮಯುಗಂ’ ಎನ್ನುವ ಶೀರ್ಷಿಕೆ ನಿಗದಿಯಾಗಿದೆ. ‘ರೆಡ್ ರೈನ್’, ‘ಭೂತಕಾಲಂ’ ಚಿತ್ರಗಳಿಂದ ಜನಪ್ರಿಯತೆ ಗಳಿಸಿದ್ದ ರಾಹುಲ್ ಸದಾಶಿವನ್ ನಿರ್ದೇಶನದ ಈ ಸಿನಿಮಾದ ಹೀರೋ ಆಗಿ ಅರ್ಜುನ್‌ ಅಶೋಕನ್‌ ನಟಿಸುತ್ತಿದ್ದಾರೆ. ಕೊಚ್ಚಿ, ಪಾಲಕ್ಕಾಡ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ‘ವಿಕ್ರಮ್ ವೇದಾ’, ‘ಸಾಲಾ ಖಾಡೂಸ್’, ‘ಮಂಡೇಲಾ’ ಸಿನಿಮಾಗಳನ್ನು ನಿರ್ಮಿಸಿದ್ದ YNOT ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ‘ಲೆಜೆಂಡರಿ ನಟ ಮಮ್ಮೂಟಿ ಚಿತ್ರವನ್ನು ನಿರ್ದೇಶಿಸುತ್ತಿರುವುದು ಅತ್ಯಂತ ಸಂತಸ ತಂದಿದೆ. ಸಿನಿಮಾ ಕೇರಳದ ಕರಾಳ ಯುಗದಲ್ಲಿ ನಡೆದ ಕಥೆಯಾಗಿದ್ದು, ಚಿತ್ರವನ್ನು ಬೆಂಬಲಿಸಿದವರಿಗೆ ನಾನು ಕೃತಜ್ಞನಾಗಿದ್ದೇನೆ. ಈ ಚಿತ್ರವು ಪ್ರಪಂಚದಾದ್ಯಂತ ಇರುವ ಮಮ್ಮೂಟಿ ಅಭಿಮಾನಿಗಳಿಗೆ ಮತ್ತು ಹಾರರ್ ಪ್ರಿಯರಿಗೆ ಉತ್ತಮ ಮನರಂಜನೆ ನೀಡಲಿದೆ’ ಎಂದಿದ್ದಾರೆ ನಿರ್ದೇಶಕ ರಾಹುಲ್‌. ‘The Age of Madness’ ಎಂಬ ಅಡಿಬರಹ ಹೊಂದಿರುವ ಚಿತ್ರದಲ್ಲಿ ನಟ-ನಿರ್ದೇಶಕ ಸಿದ್ಧಾರ್ಥ್ ಭರತನ್ ಮತ್ತು ‘ಕಮ್ಮಟ್ಟಿಪಾಡಂ’ ನಟಿ ಅಮಲ್ಡಾ ಲಿಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಮೂಲ ಮಲಯಾಳಂ ಸೇರಿದಂತೆ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ನಟ ಮಮ್ಮೂಟಿ ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಚಿತ್ರದ ಪೋಸ್ಟರ್‌ ಹಂಚಿಕೊಂಡಿದ್ದಾರೆ.

Previous articleಶ್ರೀಜಿತ್‌ ನಿರ್ದೇಶನದ ‘ಮಾಸ್ಟರ್‌ ಪೀಸ್‌’ | ಸೆಪ್ಟೆಂಬರ್‌ 8ರಿಂದ ಸ್ಟ್ರೀಮ್‌ ಆಗಲಿದೆ ವೆಬ್‌ ಸರಣಿ
Next articleಅಕ್ಕ – ತಮ್ಮನ ನವಿರು ಬಾಂಧವ್ಯ, ಮನೋಜ್ಞ ನಿರೂಪಣೆಯ ‘ಎರಂಬು’

LEAVE A REPLY

Connect with

Please enter your comment!
Please enter your name here