‘ಜುಗಲ್‌ ಬಂದಿ’ ಸಿನಿಮಾದ ‘ಇಂಥವರ ಸಂತಾನ ಭಾಗ್ಯ’ ಹಾಡು ಬಿಡುಗಡೆಯಾಗಿದೆ. ಪ್ರದ್ಯೋತನ್‌ ಸಂಗೀತ ಸಂಯೋಜನೆಗೆ ಡಾ.ವೈಕಂ ವಿಜಯಲಕ್ಷ್ಮಿ ದನಿಯಾಗಿದ್ದು, ಮಾನಸಿ ಸುಧೀರ್‌ ಅವರ ಮೇಲೆ ಹಾಡು ಚಿತ್ರೀಕರಣಗೊಂಡಿದೆ.

ದಿವಾಕರ್ ಡಿಂಡಿಮ ನಿರ್ದೇಶನದ ‘ಜುಗಲ್ ಬಂದಿ’ ಸಿನಿಮಾ ಮುಹೂರ್ತದ ದಿನದಿಂದಲೂ ಸುದ್ದಿಯಲ್ಲಿದೆ. ರಿಲೀಸ್‌ಗೂ ಮೊದಲೇ ದೊಡ್ಡ ಮೊತ್ತಕ್ಕೆ ಆಡಿಯೋ ಹಕ್ಕುಗಳನ್ನು ಮಾರಾಟ ಮಾಡಿ ಗಮನಸೆಳೆದಿದ್ದ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ‘ಇಂಥವರ ಸಂತಾನ ಭಾಗ್ಯ’ ಎಂದು ಶುರುವಾಗುತ್ತದೆ ಹಾಡು. ನಿರ್ದೇಶಕ ದಿವಾಕರ್ ಅವರು ರಚಿಸಿರುವ ಅರ್ಥಪೂರ್ಣ ಸಾಲುಗಳಿಗೆ ಪ್ರದ್ಯೋತನ್ ಸಂಗೀತ ಸಂಯೋಜಿಸಿದ್ಧಾರೆ. ಎಸ್‌.ಕೆ.ರಾವ್‌ ಅವರ ಛಾಯಾಗ್ರಹಣ, ಡಾ.ವೈಕಂ ವಿಜಯಲಕ್ಷ್ಮಿ ಗಾಯನ, ಮಾನಸಿ ಸುಧೀರ್ ಅವರ ಮನೋಜ್ಞ ಅಭಿನಯ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸುತ್ತದೆ.

https://youtu.be/GTa2zKoN4BU

‘ಸೂಜಿದಾರ’, ‘ಸಲಗ’, ‘ಏಕ್ ಲವ್‌ ಯಾ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಗಮನಸೆಳೆದಿರುವ ಯಶ್ ಶೆಟ್ಟಿ ಈ ಸಿನಿಮಾದ ಹೀರೋ. ನಾಯಕಿಯಾಗಿ ಅರ್ಚನಾ ಕೊಟ್ಟಿಗೆ ನಟಿಸುತ್ತಿದ್ದಾರೆ. ಉಳಿದಂತೆ ಅಶ್ವಿನ್ ರಾವ್ ಪಲ್ಲಕ್ಕಿ, ಸಂತೋಷ್ ಆಶ್ರಯ್ ನಟಿಸಿದ್ದಾರೆ. ಈ ಹಿಂದೆ ಹಲವು ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದ ಡಿಂಡಿಮ ಅವರು ‘ಜುಗಲ್ ಬಂದಿ’ ಸಿನಿಮಾ ಮೂಲಕ ನಿರ್ದೇಶನಾಗಿ ಬಡ್ತಿ ಪಡೆದಿದ್ದಾರೆ. ಉಳಿದಂತೆ ಕೋ ಡೈರೆಕ್ಟರ್ ಆಗಿ ಬಾಲಕೃಷ್ಣ ಯಾದವ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಸಂತೋಷ್, ಶ್ರೀನಿವಾಸ್ ಕೆಲಸ ನಿರ್ವಹಿಸುತ್ತಿದ್ದಾರೆ. ಡಿಂಡಿಮ ಕ್ರಿಯೇಷನ್ಸ್‌ನಡಿ ನಿರ್ಮಾಣವಾಗುರುವ ‘ಜುಗಲ್ ಬಂದಿ’ ಸಿನಿಮಾಗೆ ದಿವಾಕರ್ ಡಿಂಡಮ ಅವರು ನಿರ್ದೇಶನದ ಜೊತೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here