‘ಜಸ್ಟ್‌ ಮ್ಯಾರೀಡ್‌’ ಚಿತ್ರತಂಡದಿಂದ ಗಣೇಶ ಹಬ್ಬದ ಸಂದರ್ಭಕ್ಕೆ ಗಣೇಶ ಸಾಂಗ್‌ ಬಿಡುಗಡೆಯಾಗಿದೆ. ಸಿ ಆರ್‌ ಬಾಬಿ ನಿರ್ದೇಶನದ ಚಿತ್ರದ ಮುಖ್ಯಭೂಮಿಕೆಯಲ್ಲಿ ಶೈನ್‌ ಶೆಟ್ಟಿ ಮತ್ತು ಅಂಕಿತಾ ಅಮರ್‌ ನಟಿಸುತ್ತಿದ್ದಾರೆ. ಸಂಗೀತ ಸಂಯೋಜಕ ಅಜನೀಶ್‌ ಲೋಕನಾಥ್‌ ಮತ್ತು ಸಿ ಆರ್‌ ಬಾಬಿ ನಿರ್ಮಾಣದ ಚಿತ್ರವಿದು.

ಸಿ ಆರ್‌ ಬಾಬಿ ನಿರ್ದೇಶನದ ‘ಜಸ್ಟ್‌ ಮ್ಯಾರೀಡ್‌’ ಚಿತ್ರದ ‘ಗಂ ಗಣೇಶಾಯ ನಮಃ’ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ಶಶಿ ಕಾವೂರ್ ಬರೆದಿರುವ ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತವಿದೆ. ವರುಣ್ ರಾಮಚಂದ್ರ, ಮಧ್ವೇಶ್ ಭಾರದ್ವಾಜ್, ಅಭಿಷೇಕ್ ಹಾಗೂ ವಿಶಾಖ್ ಹಾಡಿದ್ದಾರೆ‌. ಗಣಪತಿ ಕುರಿತಾದ ಈ ಹಾಡಿಗೆ ಹೀರೋ ಶೈನ್‌ ಶೆಟ್ಟಿ ಅವರು ನೃತ್ಯಕಲಾವಿದರೊಂದಿಗೆ ಡ್ಯಾನ್ಸ್‌ ಮಾಡಿದ್ದಾರೆ. ಈ ಹಾಡಿನಲ್ಲಿ ಚಿತ್ರದ ನಾಯಕಿ ಅಂಕಿತಾ ಅಮರ್‌ ಪಾತ್ರ ಪರಿಚಯವೂ ಇದೆ. ಸಿ ಆರ್ ಬಾಬಿ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ‌. ಪ್ರಸ್ತುತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಸಿ ಆರ್ ಬಾಬಿ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ‌. ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸಿ ಆರ್ ಬಾಬಿ ‘ಜಸ್ಟ್‌ ಮ್ಯಾರೀಡ್‌’ ಚಿತ್ರದ ಮೂಲಕ ನಿರ್ದೇಶಕಿಯಾಗಿದ್ದಾರೆ.

abbs studios ಬ್ಯಾನರ್‌ನಡಿ ಸಂಗೀತ ನಿರ್ದೇಶಕರಾದ ಅಜನೀಶ್ ಲೋಕನಾಥ್ ಮತ್ತು ಸಿ ಆರ್ ಬಾಬಿ ಅವರೇ ಈ ಸಿನಿಮಾ ನಿರ್ಮಿಸುತ್ತಿರುವುದು ವಿಶೇಷ. ಬಾಬಿ ಅವರು ನಿರ್ದೇಶನಕ್ಕಿಳಿದಿದ್ದು, ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ನಿರ್ದೇಶಕಿ ಸೇರ್ಪಡೆಯಾದಂತಾಗಿದೆ. ‘ಜಸ್ಟ್ ಮ್ಯಾರಿಡ್’ ಪ್ರೇಮಕಥೆಯ ಚಿತ್ರ. ಕ್ಲಾಸ್ ಹಾಗೂ ಮಾಸ್ ಎರಡೂ ರೀತಿಯ ಆಡಿಯನ್ಸ್‌ಗೆ ಇಷ್ಟವಾಗುವ ಅಂಶಗಳು ಚಿತ್ರದಲ್ಲಿರಲಿವೆ ಎನ್ನುವುದು ನಿರ್ದೇಶಕರ ಭರವಸೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡನೇ ಹಂತದ ಚಿತ್ರೀಕರಣ ಈ ತಿಂಗಳ ಕೊನೆಗೆ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಶೃತಿ ಹರಿಹರನ್, ಅಚ್ಯುತಕುಮಾರ್, ಸಾಕ್ಷಿ ಅಗರವಾಲ್, ರವಿಶಂಕರ್ ಗೌಡ, ವಾಣಿ ಹರಿಕೃಷ್ಣ ಚಿತ್ರದ ಇತರೆ ಪ್ರಮುಖ ಕಲಾವಿದರು. ಪಿ ಜೆ ಛಾಯಾಗ್ರಹಣ, ಅಶಿಕ್ ಕುಸುಗೊಳ್ಳಿ ಸಂಕಲನ, ಅಮರ್ ಕಲಾ ನಿರ್ದೇಶನ, ಬಾಬಾ ಭಾಸ್ಕರ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here