ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿರುವ ನೂತನ ಸಿನಿಮಾದ ಶೀರ್ಷಿಕೆಯನ್ನು ಚಿತ್ರನಿರ್ದೇಶಕ ಯೋಗರಾಜ್‌ ಭಟ್‌ ಅವರು ಬಿಡುಗಡೆ ಮಾಡಿದ್ದಾರೆ. ಸಂದೀಪ್‌ ಸುಂಕದ್‌ ಚೊಚ್ಚಲ ನಿರ್ದೇಶನದ ಈ ಸಿನಿಮಾಗೆ ‘ಶಾಖಾಹಾರಿ’ ಎನ್ನುವ ಹೆಸರಿಡಲಾಗಿದೆ.

ಸಂದೀಪ್‌ ಸುಂಕದ್‌ ಚೊಚ್ಚಲ ನಿರ್ದೇಶನದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿದೆ. ಚಿತ್ರನಿರ್ದೇಶಕ ಯೋಗರಾಜ್‌ ಭಟ್‌ ಅವರು ಚಿತ್ರದ ಶೀರ್ಷಿಕೆ ರಿವೀಲ್‌ ಮಾಡಿದ್ದಾರೆ. ‘ಶಾಖಾಹಾರಿ’ ಎನ್ನುವ ವಿಶಿಷ್ಟ ಶೀರ್ಷಿಕೆಯ ಈ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ವಿನಯ್‌ ಯು ಜೆ, ಸುಜಯ್‌ ಶಾಸ್ತ್ರಿ, ನಿಧಿ ಹೆಗ್ಡೆ ಇದ್ದಾರೆ. ಮಲೆನಾಡಿನ ತೀರ್ಥಹಳ್ಳಿಯ ಊರೊಂದರಲ್ಲಿ ನಡೆಯುವ ನಿಗೂಢ ಘಟನೆಯ ಸುತ್ತ ಸಾಗುವ ಕತೆಯಿದು. ಹೋಟೆಲ್ ಭಟ್ಟನ ಪಾತ್ರದಲ್ಲಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಅವರಿಗೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಪಾತ್ರವಿದೆ.

‘ಕೀಳಂಬಿ ಮೀಡಿಯಾ ಲ್ಯಾಬ್’ ಮೂಲಕ ರಾಜೇಶ್ ಕೀಳಂಬಿ ಹಾಗೂ ರಂಜಿನಿ ಪ್ರಸನ್ನ ಜೊತೆಗೂಡಿ ನಿರ್ಮಿಸುತ್ತಿರುವ ಚಿತ್ರವಿದು. ಕಿರುಚಿತ್ರಗಳನ್ನು ನಿರ್ದೇಶಿಸಿ, ಅಸೋಸಿಯೇಟ್‌ ಡೈರೆಕ್ಟರ್‌ ಆಗಿ ಅನುಭವ ಪಡೆದಿರುವ ಸಂದೀಪ್‌ ಸುಂಕದ್‌ ಅವರ ಸ್ವತಂತ್ರ್ಯ ನಿರ್ದೇಶನದ ಮೊದಲ ಪ್ರಯೋಗವಿದು. ವಿಶ್ವಜಿತ್ ರಾವ್ ಛಾಯಾಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಮಯೂರ್ ಅಂಬೆಕಲ್ಲು ಸಂಗೀತ, ಆಶಿಕ್ ಕುಸುಗೊಳ್ಳಿ ಅವರ ಗ್ರೇಡಿಂಗ್ ಚಿತ್ರಕ್ಕಿದೆ. ಸಂಪೂರ್ಣ ಮಲೆನಾಡಿನಲ್ಲೇ ಚಿತ್ರೀಕರಣವಾಗಿರೋ ಈ ಸಿನಿಮಾದಲ್ಲಿ ಬಹಳಷ್ಟು ಮಲೆನಾಡಿನ ಕಲಾವಿದರೇ ಇದ್ದಾರೆ ಎನ್ನುವುದು ವಿಶೇಷ. ಸದ್ಯ ಸಿನಿಮಾ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ.

Previous article‘ಕಾಲಾಯ ನಮಃ’ ಚಿತ್ರದಲ್ಲಿ ಅಣ್ತಮ್ಮ | ಮತಿವಣನ್‌ ನಿರ್ದೇಶನದ ಕಾಮಿಡಿ – ಥ್ರಿಲ್ಲರ್‌
Next article‘ಅಯ್ಯೋ ದೈವವೇ’ | ನಿಶ್ಚಿತ್‌ ಕೊರೋಡಿ ನಟನೆಯ ‘Supplier ಶಂಕರ್’ ಸಾಂಗ್‌ ಬಿಡುಗಡೆ

LEAVE A REPLY

Connect with

Please enter your comment!
Please enter your name here