ಪ್ರಭಾಸ್‌ ನಟನೆಯ ಬಹುನಿರೀಕ್ಷಿತ ‘ಕಲ್ಕಿ 2898 AD’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ವಿಎಫ್‌ಎಕ್ಸ್‌ ಮತ್ತು ಅದ್ಧೂರಿ ತಾರಾಬಳಗದಿಂದ ಸಿನಿಮಾ ಗಮನ ಸೆಳೆಯುತ್ತದೆ. ಟ್ರೇಲರ್‌ನಲ್ಲಿ ಚಿತ್ರದ ಎಲ್ಲಾ ಪಾತ್ರಗಳ ಪರಿಚಯವಿದೆ. ಇದೇ ಜೂನ್‌ 27ರಂದು ‘ಕಲ್ಕಿ 2898 AD’ ತೆರೆಕಾಣಲಿದೆ.

ನಾಗ್‌ ಅಶ್ವಿನ್‌ ನಿರ್ದೇಶನದ ಬಹುನಿರೀಕ್ಷಿತ ದ್ವಿಭಾಷಾ ಸಿನಿಮಾ ‘ಕಲ್ಕಿ 2898 AD’ ಟ್ರೇಲರ್‌ ಬಿಡುಗಡೆಯಾಗಿದೆ. ಇದೊಂದು ಸೈಂಟಿಫಿಕ್‌ ಫಿಕ್ಷನ್‌ ಸಿನಿಮಾ. ಎರಡು ನಿಮಿಷ ಐವತ್ತೊಂದು ಸೆಕೆಂಡ್‌ಗಳ ಟ್ರೇಲರ್‌ ವಿಎಫ್‌ಎಕ್ಸ್‌ನಿಂದ ಗಮನ ಸೆಳೆಯುತ್ತದೆ. ಚಿತ್ರದ ಎಲ್ಲಾ ಪಾತ್ರಗಳನ್ನೂ ನಿರ್ದೇಶಕರು ಪರಿಚಯಿಸಿದ್ದಾರೆ. ಹಿಂದಿ ಮತ್ತು ತೆಲುಗು ಅವತರಣಿಕೆಗಳಲ್ಲಿ ಸಿನಿಮಾ ತೆರೆಕಾಣಲಿದೆ. ಈಗ ಬಿಡುಗಡೆಯಾಗಿರುವ ತೆಲುಗು ವರ್ಷನ್‌ ಟ್ರೇಲರ್‌ನಲ್ಲಿ ಲಿಪ್‌ ಸಿಂಕಿಂಗ್‌ನಲ್ಲಿ ದೋಷ ಕಾಣಿಸಿರುವುದು ಚಿತ್ರದ ಗುಣಮಟ್ಟವನ್ನು ಪ್ರಶ್ನೆ ಮಾಡುವಂತಾಗಿದೆ. ಪ್ರಭಾಸ್‌, ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಸಿನಿಮಾ ಇದೇ ಜೂನ್‌ 27ರಂದು ತೆರೆಕಾಣಲಿದೆ.

ಸಿನಿಮಾ ಬಗ್ಗೆ ಮಾತನಾಡುವ ನಿರ್ದೇಶಕ ನಾಗ್‌ ಅಶ್ವಿನ್‌, ‘ಇಂದು ನನ್ನ ಬದುಕಿನ ಮಹತ್ವಾಕಾಂಕ್ಷೆಯ ದಿನ. ನನ್ನ ಕನಸಿನ ಯೋಜನೆಯ ಟ್ರೇಲರ್‌ ಬಿಡುಗಡೆಯಾಗಿದೆ. ಒಬ್ಬ ಚಲನಚಿತ್ರ ನಿರ್ದೇಶಕನಾಗಿ ನಾನು ಯಾವಾಗಲೂ ಭಾರತೀಯ ಪುರಾಣ ಮತ್ತು ವೈಜ್ಞಾನಿಕ ಕಾದಂಬರಿಗಳಿಂದ ಆಕರ್ಷಿತನಾಗಿದ್ದೇನೆ. ‘ಕಲ್ಕಿ 2898 AD’ ಚಿತ್ರದಲ್ಲಿ ಈ ಎರಡು ಅಂಶಗಳನ್ನು ವಿಲೀನಗೊಳಿಸಿದ್ದೇವೆ. ನಮ್ಮ ಕಲಾವಿದರು ಮತ್ತು ತಂಡದ ಅಸಾಧಾರಣ ಪ್ರತಿಭೆ ಮತ್ತು ಸಮರ್ಪಣಾ ಮನೋಭಾವದಿಂದ ಕನಸೊಂದು ನನಸಾಗಿದೆ’ ಎಂದಿದ್ದಾರೆ. ಈ ಸಿನಿಮಾ ತೆಲುಗು ಮತ್ತು ಹಿಂದಿ ಮಾತ್ರವಲ್ಲದೆ ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲೂ ತೆರೆಕಾಣಲಿದೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್‍ ಚಿತ್ರ ನಿರ್ಮಿಸಿದ್ದಾರೆ.

LEAVE A REPLY

Connect with

Please enter your comment!
Please enter your name here