ವಿವೇಕ್‌ ಬುಡಕೋಟಿ ನಿರ್ದೇಶನದ ‘ಪಾಟ್ನಾ ಶುಕ್ಲಾ’ ಹಿಂದಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ನಟಿ ರವೀನಾ ಟಂಡನ್‌ ವಕೀಲೆ ಪಾತ್ರದೊಂದಿಗೆ ತೆರೆಗೆ ಮರಳುತ್ತಿದ್ದಾರೆ. ನಟ ಅರ್ಬಾಜ್‌ ಖಾನ್‌ ನಿರ್ಮಾಣದ ಸಿನಿಮಾ Hotstarನಲ್ಲಿ ಮಾ 29ರಿಂದ ಸ್ಟ್ರೀಮ್‌ ಆಗಲಿದೆ.

ರವೀನಾ ಟಂಡನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಪಾಟ್ನಾ ಶುಕ್ಲಾ’ ಹಿಂದಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ರವೀನಾ ವಕೀಲೆ ಪಾತ್ರ ನಿರ್ವಹಿಸಿದ್ದು, ಈ ಚಿತ್ರವನ್ನು ವಿವೇಕ್ ಬುಡಕೋಟಿ ನಿರ್ದೇಶಿಸಿದ್ದಾರೆ. ಟ್ರೇಲರ್‌ ಒಂದು ಬೃಹತ್ ಶಿಕ್ಷಣ ಹಗರಣದಿಂದ ಸಂತ್ರಸ್ತರಾದ ವಿದ್ಯಾರ್ಥಿಗಳ ಪರವಾಗಿ ಹೋರಾಡುವ ವಕೀಲೆಯೊಬ್ಬಳ ಸುತ್ತ ಸುತ್ತುತ್ತದೆ. ರವೀನಾ, ತನ್ವಿ ಶುಕ್ಲಾ ಆಗಿ ಕಾಣಿಸಿಕೊಂಡಿದ್ದು, ವೃತ್ತಿಯಲ್ಲಿ ವಕೀಲೆಯಾದರೂ ಕಾರ್ಯನಿರ್ವಹಿಸಲು ಸಾಧ್ಯವಾಗಿರುವುದಿಲ್ಲ. ಅವಳಿಗೆ ಸರಿಯಾದ ಗೌರವ ಸಿಗದೇ ಮನೆಯಲ್ಲಿಯೇ ಇರುವಂತಾಗಿರುತ್ತದೆ. ರಾಜಕಾರಣಿಯೊಬ್ಬರ ಸವಾಲಿನ ನಂತರ ಅವಳು ತನ್ನ ವೃತ್ತಿಯನ್ನು ಪ್ರಾರಂಭಿಸಿ ಹೇಗೆ ಅನ್ಯಾಯದ ವಿರುದ್ಧ ಹೋರಾಡುತ್ತಾಳೆ ಎಂಬುದನ್ನು ಟ್ರೇಲರ್‌ ಒಳಗೊಂಡಿದೆ. ಈ ಚಿತ್ರವನ್ನು ಅರ್ಬಾಜ್‌ ಖಾನ್‌ ನಿರ್ಮಿಸಿದ್ದು, ಸಿನಿಮಾ ಮಾರ್ಚ್ 29ರಿಂದ Hotstarನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಚಿತ್ರದಲ್ಲಿ ಸತೀಶ್ ಕೌಶಿಕ್, ಮಾನವ್ ವಿಜ್ ಮತ್ತು ಚಂದನ್ ರಾಯ್ ಸನ್ಯಾಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here