ದೋಸ್ತಿ ವಿ. ಆನಂದ್‌ ನಿರ್ದೇಶನದ ‘ಪಂಖುರಿ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಕುಂದನಾ ರೆಡ್ಡಿ ನಟಿಸಿ, ನಿರ್ಮಿಸಿರುವ ಸ್ತ್ರೀಪ್ರಧಾನ ಚಿತ್ರವಿದು. ಚೊಚ್ಚಲ ಸಿನಿಮಾ ತೆರೆಕಾಣುವ ಮುನ್ನವೇ ಕುಂದನಾ ಮತ್ತೆರೆಡು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ.

ನಟಿ ಕುಂದನಾ ರೆಡ್ಡಿ ನಾಯಕನಟಿಯಾಗಿ ಅಭಿನಯಿಸಿರುವ ‘ಪಂಖುರಿ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಮಹಿಳಾ ದೌರ್ಜನ್ಯ, ಸಮಾಜದಲ್ಲಿ ಒಂಟಿ ಮಹಿಳೆ ಎದುರಿಸುವ ಸಮಸ್ಯೆ – ಸವಾಲುಗಳು ಚಿತ್ರದ ಕಥಾವಸ್ತು. ಕುಂದನಾ ರೆಡ್ಡಿ ಚಿತ್ರದಲ್ಲಿ ‘ಶಾರದಾ’ ಪಾತ್ರ ನಿರ್ವಹಿಸುತ್ತಿದ್ದಾರೆ. ಶಶಿಶೇಖರ್‌ ಚಿತ್ರದ ಹೀರೋ. ಪ್ರಕೃತಿ ಪಿಕ್ಚರ್ಸ್ ಬ್ಯಾನರ್‌ನಡಿ ಅಫ್ಜಲ್ ಅವರ ಸಹಯೋಗದೊಂದಿಗೆ ಈ ಸಿನಿಮಾ ನಿರ್ಮಿಸುತ್ತಿದ್ದಾರೆ ಕುಂದನಾ. “ಸ್ವಾಭಿಮಾನಿ, ದಿಟ್ಟ ಹೆಣ್ಣುಮಗಳ ಕತೆಯಿದು. ಇಂಥದ್ದೊಂದು ಸಿನಿಮಾ ಮೂಲಕ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವುದು ಹೆಮ್ಮೆಯ ವಿಷಯ. ಉತ್ತಮ ಕತೆಯ ಚಿತ್ರದ ನಿರ್ಮಾಣದಲ್ಲೂ ಕೈಜೋಡಿಸಿದ್ದೇನೆ” ಎನ್ನುತ್ತಾರವರು.

ಆಂಧ್ರ ಮೂಲದ ಕುಂದನಾ ಇ ಕಾಮರ್ಸ್‌ ಸ್ನಾತಕೋತ್ತರ ಪದವೀಧರೆ. ಬಹುರಾಷ್ಟ್ರೀಯ ಕಂಪನಿಯೊಂದರ ದೊಡ್ಡ ಹುದ್ದೆಯಲ್ಲಿರುವ ಕುಂದನಾಗೆ ನಟಿಯಾಗಬೇಕೆನ್ನುವುದು ಬಾಲ್ಯದ ಕನಸು. ದೊಸ್ತಿ ವಿ.ಆನಂದ್‌ ನಿರ್ದೇಶನದ ‘ಪಂಖುರಿ’ ಸಿನಿಮಾ ಅವರಿಗೆ ವೇದಿಕೆ ಒದಗಿಸಿದೆ. ನೃತ್ಯ, ಯೋಗಾಭ್ಯಾಸ, ಸೈಕ್ಲಿಂಗ್‌ ಮೂಲಕ ನಟಿಯಾಗಲು ಅಗತ್ಯ ತಯಾರಿ ನಡೆಸಿದ್ದಾರೆ ಕುಂದನಾ. ಬಹುಭಾಷಾ ತಾರೆ ಸೌಂದರ್ಯ ಅವರ ನೆಚ್ಚಿನ ತಾರೆ. ಸೌಂದರ್ಯ ಅವರಂತೆ ಭಿನ್ನ ಪಾತ್ರಗಳಲ್ಲಿ ನಟಿಸುವ ಇರಾದೆ ಅವರದ್ದು. ‘ಪಂಖುರಿ’ ಬಿಡುಗಡೆಗೆ ಮುನ್ನವೇ ಅವರು ಮತ್ತೆರೆಡು ಸಿನಿಮಾಗಳಲ್ಲಿ ನಟಿಸುವುದು ಖಾತ್ರಿಯಾಗಿದೆ.

Previous articleBold & Different attempt ‘ನಚ್ಚತ್ತಿರಮ್ ನಗರ್ಗಿರದು’
Next articleಅನಗತ್ಯ ಹೈಪ್‌ಗಳಿಲ್ಲದ ಅಪ್ಪಟ ಐತಿಹಾಸಿಕ ಸಿನಿಮಾ

LEAVE A REPLY

Connect with

Please enter your comment!
Please enter your name here