“ಭಾರತೀಯ ವಾಯುಪಡೆಯಲ್ಲಿ ಕೆಲಸ ಮಾಡಲು ಬಯಸುವವರಿಗೆ ಈ ಸಿನಿಮಾ ಪ್ರೇರಣೆಯಾಗಲಿದೆ” ಎನ್ನುತ್ತದೆ ʼತೇಜಸ್‌ʼ ಚಿತ್ರತಂಡ. ಕಂಗನಾ ರನಾವತ್‌ ನಟನೆಯ ಈ ಸಿನಿಮಾ ಮುಂದಿನ ವರ್ಷ ದಸರಾಗೆ ಅಕ್ಟೋಬರ್‌ 5ರಂದು ತೆರೆಕಾಣಲಿದೆ.

ಕಂಗನಾ ರನಾವತ್‌ ಅಭಿನಯದ ʼತೇಜಸ್‌ʼ ಹಿಂದಿ ಸಿನಿಮಾದ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ. ನಟಿ ಕಂಗನಾ ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಈ ಕುರಿತಾಗಿ ಪೋಸ್ಟ್‌ ಹಾಕಿದ್ದು, “ಇದು ಭಾರತೀಯ ವಾಯುಪಡೆಗೆ ಸಲ್ಲುವ ಗೌರವ. ಭಾರತೀಯ ವಾಯುಪಡೆ ಸೇರಲು ಅಪೇಕ್ಷಿಸುವವರಿಗೆ ಈ ಸಿನಿಮಾ ಪ್ರೇರಣೆಯಾಗಲಿದೆ” ಎಂದು ಬರೆದಿದ್ದಾರೆ. ಸರ್ವೇಶ್‌ ಮೇವಾರಾ ನಿರ್ದೇಶನದ ಸಿನಿಮಾದ ಬಿಡುಗಡೆ ದಿನಾಂಕ 2022ರ ಅಕ್ಟೋಬರ್‌ 5 ಎಂದು ನಿಗಧಿಯಾಗಿದೆ. ಧೈರ್ಯಶಾಲಿ ಫೈಟರ್‌ ಪೈಲಟ್ ಕತೆ ʼತೇಜಸ್‌ʼ. ದೇಶದಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ 2016ರಲ್ಲಿ ಕಾಂಬ್ಯಾಟ್‌ ವಿಭಾಗದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಈ ಸಂದರ್ಭ ಚಿತ್ರದ ಕತೆಗೆ ಪ್ರೇರಣೆ. ವಾಯುಪಡೆಯ ಯೂನಿಫಾರ್ಮ್‌ನಲ್ಲಿರುವ ತಮ್ಮ ಫೋಟೊವೊಂದನ್ನು ಕಂಗನಾ ಇನ್‌ಸ್ಟಾಗ್ರಾಮ್‌ಗೆ ಹಾಕಿದ್ದಾರೆ. ಹಿಂದೊಮ್ಮೆ ʼತೇಜಸ್‌ʼ ಬಗ್ಗೆ ಮಾತನಾಡಿದ ಅವರು, “ಚಿತ್ರದಲ್ಲಿ ನನಗೆ ಏರ್‌ಫೊರ್ಸ್‌ ಪೈಲಟ್‌ ಪಾತ್ರ ನಿರ್ವಹಿಸುವ ಗೌರವ ಸಿಕ್ಕಿದೆ. ದೇಶಕ್ಕಾಗಿ ಕೆಚ್ಚೆದೆಯಿಂದ ಹೋರಾಟ ನಡೆಸುವ ಯೋಧರ ಬಗ್ಗೆ ಹೆಮ್ಮೆ ಎನಿಸುತ್ತದೆ. ಚಿಕ್ಕಂದಿನಿಂದಲೂ ಸಮವಸ್ತ್ರ ಧರಿಸಿದ ಸೈನಕರನ್ನು ನೋಡಿದಾಗ ಗೌರವ ಭಾವ ಮೂಡುತ್ತಿತ್ತು. ಆಗಿನಿಂದ ನನಗೇ ಇಂಥದ್ದೊಂದು ಪಾತ್ರ ನಿರ್ವಹಿಸಬೇಕು ಎನಿಸಿತ್ತು” ಎಂದಿದ್ದಾರೆ. ರೋನ್ನಿ ಸ್ಕ್ರೂವಾಲಾ ಈ ಸಿನಿಮಾ ನಿರ್ಮಿಸಿದ್ದಾರೆ.

Previous articleಜಗವೇ ಒಂದು ರಂಗಮಂಚ; ZEE5 ನಲ್ಲಿ ಸ್ಟ್ರೀಮ್‌ ಆಗುತ್ತಿದೆ ಸಮುದ್ರಖನಿ ʼವಿನೋಧಯ ಸಿತಂʼ
Next articleಇದು ಮೂರು ರಾಜ್ಯಗಳ ಸಿನಿಮಾ!; ಡಿಸೆಂಬರ್‌ 10ರಂದು ಮಡ್ಡಿ ತೆರೆಗೆ

LEAVE A REPLY

Connect with

Please enter your comment!
Please enter your name here