ಮಧ್ಯಮವರ್ಗದ ಯುವಕರ ಕುರಿತು ಹೆಣೆದಿರುವ ಕತೆ ‘ತುಮ್ಸೆ ನಾ ಹೋ ಪಾಯೇಗಾ’. ಅಭಿಷೇಕ್‌ ಸಿನ್ಹಾ ನಿರ್ದೇಶನದ ಈ ಹಿಂದಿ ಸಿನಿಮಾ DisneyPlusHotstarನಲ್ಲಿ ಸೆಪ್ಟೆಂಬರ್‌ 29ರಿಂದ ಸ್ಟ್ರೀಮ್‌ ಆಗಲಿದೆ.

DisneyPlusHotstar ‘ತುಮ್ಸೆ ನಾ ಹೋ ಪಯೇಗಾ’ ಹಿಂದಿ ಸಿನಿಮಾ ಬಗ್ಗೆ ಮಾಹಿತಿ ನೀಡಿದೆ. ಅಭಿಷೇಕ್‌ ಸಿನ್ಹಾ ನಿರ್ದೇಶನದ ಸಿನಿಮಾ Hotstarನಲ್ಲಿ ಇದೇ ಸೆಪ್ಟೆಂಬರ್‌ 29ರಿಂದ ಸ್ಟ್ರೀಮ್‌ ಆಗಲಿದೆ. ನಿತೇಶ್‌ ತಿವಾರಿ ರಚಿಸಿರುವ ಕತೆ ಇದು. ‘ಈ ಸಿನಿಮಾದ ಕತೆ ಮಧ್ಯಮವರ್ಗದ ಮನೆಗಳ ಯುವಕರಿಗೆ ಸುಲಭವಾಗಿ ಕನೆಕ್ಟ್‌ ಆಗುತ್ತದೆ’ ಎನ್ನುತ್ತಾರೆ ತಿವಾರಿ. ಈ ಕಾಮಿಡಿ – ಡ್ರಾಮಾ ಸಿನಿಮಾದಲ್ಲಿ ಗೌರವ್ ಮತ್ತು ಅವನ ಸ್ನೇಹಿತರು ಆಧುನಿಕ ಪ್ರಪಂಚದ ಒತ್ತಡವನ್ನು ಹೇಗೆ ಎದುರಿಸುತ್ತಾರೆ? ತಮ್ಮ ಗುರಿಗಳನ್ನು ಸಾಧಿಸಲು ಅದರಲ್ಲಿ ಹಾಸ್ಯ ಸಂಗತಿಗಳನ್ನು ಹುಟ್ಟುಹಾಕಿ ಹೇಗೆ ಅಪಾಯಗಳನ್ನು ತಂದುಕೊಳ್ಳುತ್ತಾರೆ ಎನ್ನುವುದು ಕಥಾಹಂದರ. ಇನ್ನೊಂದು ಭಾಗದ ಕಥೆಯು ತನ್ನ ಕೆಲಸ ಮತ್ತು ದಿನಚರಿಯಿಂದಾಗಿ ತನ್ನ ಜೀವನವು ಅಪೂರ್ಣವಾಗಿದೆ ಎಂದು ಭಾವಿಸುವ 28 ವರ್ಷದ ಕಾರ್ಪೊರೇಟ್ ಕೆಲಸಗಾರನ ಒತ್ತಡದ ಜೀವನವನ್ನು ಒಳಗೊಂಡಿದೆ. ಈ ಕತೆಯನ್ನು ನಿತೇಶ್‌ ತಿವಾರಿ ನಿರ್ದೇಶಿಸಿದ್ದು, ಗುರುಪ್ರೀತ್ ಸೈನಿ, ಪರ್ಮೀತ್ ಸೇಥಿ ಮತ್ತು ಮೇಘನಾ ಮಲಿಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಇದೇ ಸೆಪ್ಟೆಂಬರ್‌ 29ರಿಂದ DisneyPlusHotstarನಲ್ಲಿ ಸ್ಟ್ರೀಮ್‌ ಆಗಲಿದೆ.

Previous articleಸರಳ ಕತೆಯ ಈ ರಾತ್ರಿ ದೀರ್ಘ – ‘ಫ್ರೈಡೇ ನೈಟ್ ಫ್ಲಾನ್’
Next article‘ಜವಾನ್’ : ಮನತಣಿಸುವ ಟಿ-20 ಬ್ಯಾಟಿಂಗ್

LEAVE A REPLY

Connect with

Please enter your comment!
Please enter your name here