ಕನ್ನಡ ಕಿರುತೆರೆಯ ಚಿರಪರಿಚಿತ ತಾರೆಯರಾದ ವಿನಯ್‌ ಮತ್ತು ಐಶ್ವರ್ಯ ಸಾಲಿಮಠ್‌ ಅವರ ವಿವಾಹ ನಿನ್ನೆ ನೆರವೇರಿದೆ. ಯಶಸ್ವೀ ಧಾರಾವಾಹಿಗಳ ನಟ – ನಟಿ AnekaPlus ಓಟಿಟಿ ಪ್ಲಾಟ್‌ಫಾರ್ಮ್‌ನ ‘ಸೂಪರ್‌ ಕಪಲ್‌’ ವೆಬ್‌ ಸರಣಿಯಲ್ಲಿ ದಂಪತಿಯಾಗಿಯೇ ಅಭಿನಯಿಸಿದ್ದಾರೆ. ಸರಣಿ ಸದ್ಯದಲ್ಲೇ ಸ್ಟ್ರೀಮ್‌ ಆಗಲಿದೆ.

ಇದೇ ವರ್ಷ ಫೆಬ್ರವರಿ 14ರ ಪ್ರೇಮಿಗಳ ದಿನದಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಕಿರುತೆರೆ ನಟ ವಿನಯ್‌ ಮತ್ತು ನಟಿ ಐಶ್ವರ್ಯ ಸಾಲಿಮಠ್‌ ನಿನ್ನೆ ವಿವಾಹವಾಗಿದ್ದಾರೆ. ವಿನಯ್‌ ಹುಬ್ಭಳ್ಳಿಯವರಾದರೆ, ಐಶ್ವರ್ಯ ಧಾರಾವಾಡದ ಪ್ರತಿಭೆ. ಸುನೀಲ್‌ ಪುರಾಣಿಕ್‌ ನಿರ್ಮಾಣ, ನಿರ್ದೇಶನದ ‘ಮಹಾಸತಿ’ ಧಾರಾವಾಹಿಯೊಂದಿಗೆ ಇಬ್ಬರೂ ಕಿರುತೆರೆಗೆ ಪರಿಚಯವಾಗಿದ್ದರು. ಮುಂದೆ ವಿನಯ್‌ ಅವರು ಅಗ್ನಿಸಾಕ್ಷಿ, ಮಹಾದೇವಿ, ಜೀವನದಿ ಧಾರಾವಾಹಿಗಳಲ್ಲಿ ತೊಡಗಿಸಿಕೊಂಡರು. ‘ಅಗ್ನಿಸಾಕ್ಷಿ’ ಧಾರಾವಾಹಿಯ ತನು ಪಾತ್ರದ ಮೂಲಕ ಕಿರುತೆರೆಯ ದೊಡ್ಡ ವೀಕ್ಷಕ ವಲಯಕ್ಕೆ ಪರಿಚಯವಾದ ಐಶ್ವರ್ಯ ಸದ್ಯ ಸೇವಂತಿ, ಜೇನುಗೂಡು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

ಮಾಧ್ಯಮ ಅನೇಕ ಮೀಡಿಯಾ ಹೌಸ್‌ನ ‘ಸೂಪರ್‌ ಕಪಲ್‌’ ವೆಬ್‌ ಸರಣಿಯ ಮೂರನೇ ಸೀಸನ್‌ನಲ್ಲಿ ವಿನಯ್‌ ಮತ್ತು ಐಶ್ವರ್ಯ ದಂಪತಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಈ ಸರಣಿ ಮಾಧ್ಯಮ ಅನೇಕ ಮೀಡಿಯಾ ಹೌಸ್‌ನ AnekaPlus ಓಟಿಟಿಯಲ್ಲಿ ಸದ್ಯದಲ್ಲೇ ಸ್ಟ್ರೀಮ್‌ ಆಗಲಿದೆ. ನಾಗರಾಜ ಪಾಟೀಲ ನಿರ್ದೇಶನದ ‘ಎಂದೆಂದಿಗೂ’ ಕಿರುಚಿತ್ರದಲ್ಲಿ ವಿನಯ್‌ ಮತ್ತು ಐಶ್ವರ್ಯ ಸಾಲಿಮಠ್‌ ಜೋಡಿಯಾಗಿ ನಟಿಸಿದ್ದರು. ನಟ ವಿನಯ್‌ ಅವರು ತಮಿಳು ಕಿರುತೆರೆಯಲ್ಲೂ ಮಿಂಚುತ್ತಿದ್ದು, ‘ಲಕ್ಷ್ಮೀ ಸ್ಟೋರ್ಸ್‌’ ತಮಿಳು ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಜನಪ್ರಿಯ ‘ಕನ್ನಡತಿ’ ಧಾರಾವಾಹಿಯಲ್ಲೂ ಅವರಿಗೆ ಪ್ರಮುಖ ಪಾತ್ರವಿದೆ.

Previous articleಪುರುಷ ಪ್ರಧಾನ ಸ್ಟಾರ್‌ಗಿರಿಯನ್ನು ಮಹಿಳಾ ನಿರ್ದೇಶಕಿಯೇ ಪೋಷಿಸಿದಾಗ ಸಿಕ್ಕಿದ್ದು ‘ಪುಳು’
Next articleನಾಗರಾಜ್ ಸೋಮಯಾಜಿ ‘ಅಕಟಕಟ’ ಚಿತ್ರತಂಡಕ್ಕೆ ಶ್ವೇತಾ ಶ್ರೀನಿವಾಸ್ ಸೇರ್ಪಡೆ

LEAVE A REPLY

Connect with

Please enter your comment!
Please enter your name here