ಕನ್ನಡ ಕಿರುತೆರೆಯ ಪ್ರಸ್ತುತ ಜನಪ್ರಿಯ ಧಾರಾವಾಹಿಗಳಲ್ಲೊಂದಾದ ‘ಕನ್ನಡತಿ’ ಹಿಂದಿಗೆ ಡಬ್‌ ಆಗುತ್ತಿದೆ. ‘ಅಜ್ನಾಬಿ ಬನೇ ಹಮ್ ಸಫರ್’ ಶೀರ್ಷಿಕೆಯಡಿ ಧಾರಾವಾಹಿ ಅಲ್ಲಿ ಮೂಡಿಬರಲಿದ್ದು, ನಟ ಕಿರಣ್‌ ರಾಜ್‌ ಈ ಬೆಳವಣಿಗೆ ಕುರಿತು ಸಂತಸ ವ್ಯಕ್ತಪಡಿಸುತ್ತಾರೆ.

ಕನ್ನಡ ಕಿರುತೆರೆಯಲ್ಲೀಗ ಸಾಕಷ್ಟು ಅದ್ಧೂರಿಯಾಗಿ ಧಾರಾವಾಹಿಗಳು ತಯಾರಾಗುತ್ತಿವೆ. ಅಷ್ಟೇ ಜನಪ್ರಿಯವೂ ಆಗುತ್ತಿವೆ. ಜನಮನ್ನಣೆ ಪಡೆದ ಧಾರಾವಾಹಿಗಳಲ್ಲಿ ಕಿರಣ್ ರಾಜ್ ಅಭಿನಯದ ‘ಕನ್ನಡತಿ’ ಕೂಡ ಒಂದು. ಇಲ್ಲಿ ಅಪಾರ ಮೆಚ್ಚುಗೆ ಪಡೆದಿರುವ ಈ ಧಾರಾವಾಹಿ ಈಗ ಹಿಂದಿಗೆ ಡಬ್ ಆಗಲಿದೆ. ‘ಅಜ್ನಾಬಿ ಬನೇ ಹಮ್ ಸಫರ್’ ಶೀರ್ಷಿಕೆಯಡಿ Colors rishtey uk ವಾಹಿನಿಯಲ್ಲಿ ಶೀಘ್ರದಲ್ಲೇ ಮೂಡಿಬರಲಿದೆ. ಲಾಕ್ ಡೌನ್ ಸಮಯದಲ್ಲಿ ಅಲ್ಲಿನ ಎಷ್ಟೋ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳು ಇಲ್ಲಿ ಡಬ್ ಆಗಿ ಪ್ರಸಾರವಾಗಲು ಆರಂಭವಾದವು. ಹೀಗೆ ಆದರೆ ಮುಂದೇನು? ಎಂದು ಕೆಲವರಿಗೆ ಅನಿಸಿದು ಸಹಜ. ಈಗ ಇಲ್ಲಿನ ಜನಪ್ರಿಯ ಧಾರಾವಾಹಿ ‘ಕನ್ನಡತಿ’ ಹಿಂದಿಗೆ ಡಬ್ ಆಗಿ ಪ್ರಸಾರವಾಗುತ್ತಿರುವುದು ನಟ ಕಿರಣ್‌ ರಾಜ್‌ ಸೇರಿದಂತೆ ಧಾರಾವಾಹಿ ತಂಡಕ್ಕೆ ಖುಷಿ ತಂದಿದೆ.

ನಟ ಕಿರಣ್ ರಾಜ್‌ರಿಗೆ ಅಪಾರ ಅಭಿಮಾನಿಗಳನ್ನು ತಂದು ಕೊಟ್ಟ ಧಾರಾವಾಹಿ ‘ಕನ್ನಡತಿ’. ಈಗ ಈ ಧಾರಾವಾಹಿ ಹಿಂದಿಗೆ ಡಬ್‌ ಆಗುತ್ತಿದ್ದು, ಉತ್ತರ ಭಾರತದಲ್ಲೂ ಅವರನ್ನು ಜನರು ನೋಡಲಿದ್ದಾರೆ. ಹಾಗೆ ನೋಡಿದರೆ ಕಿರಣ್ ರಾಜ್ ಅವರಿಗೆ ಹಿಂದಿ ಕಿರುತೆರೆ ಹೊಸದೇನಲ್ಲ. ಈ ಹಿಂದೆ ಕೂಡ ಹಿಂದಿ ಕಲರ್ಸ್ ವಾಹಿನಿಯ ಸಾಕಷ್ಟು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಕಿರಣ್ ರಾಜ್ ಅಭಿನಯಿಸಿದ್ದಾರೆ. ಹಿರಿತೆರೆಯಲ್ಲೂ ಬ್ಯುಸಿಯಾಗಿರುವ ಕಿರಣ್ ರಾಜ್ ಅಭಿನಯದ ‘ಬಡ್ಡೀಸ್’ ಚಿತ್ರದ ಟೀಸರ್ ಏಪ್ರಿಲ್ 25ರಂದು ಬಿಡುಗಡೆಯಾಗಲಿದೆ. ಚಿತ್ರ ಜೂನ್‌ನಲ್ಲಿ ತೆರೆಗೆ ಬರಲಿದೆ.

Previous article‘ಶೋಕಿವಾಲ’ ಅಜಯ್‌ ಜೊತೆ ಹೆಜ್ಜೆ ಹಾಕಿದ ಸ್ಯಾಂಡಲ್‌ವುಡ್‌ ಚಿತ್ರನಿರ್ದೇಶಕರು
Next articleಟ್ರೈಲರ್‌ | ಸಂಚಾರಿ ವಿಜಯ್‌ ಅಭಿನಯದ ಕೊನೆಯ ಸಿನಿಮಾ ‘ಮೇಲೊಬ್ಬ ಮಾಯಾವಿ’

LEAVE A REPLY

Connect with

Please enter your comment!
Please enter your name here