‘ಜೀವನ ಒಂಥರಾ ಕಾಕ್‌ಟೇಲ್‌’ ಹಾಡಿನಲ್ಲಿ ಅಜಯ್‌ ರಾವ್‌ ಜೊತೆ ಸ್ಯಾಂಡಲ್‌ವುಡ್‌ನ ಐವರು ಚಿತ್ರನಿರ್ದೇಶಕರು ಹೆಜ್ಜೆ ಹಾಕಿದ್ದಾರೆ. ಜಾಕಿ ನಿರ್ದೇಶನದ ಸಿನಿಮಾ ಏಪ್ರಿಲ್‌ 29ರಂದು ಬಿಡುಗಡೆಯಾಗುತ್ತಿದೆ.

ಅಜಯ್ ರಾವ್ – ಸಂಜನಾ ಆನಂದ್‌ ಜೋಡಿಯ ‘ಶೋಕಿವಾಲ’ ಸಿನಿಮಾದ ಹಾಡೊಂದು ಸದ್ದು ಮಾಡುತ್ತಿದೆ. ವಿಶೇಷವೆಂದರೆ ಈ ಹಾಡಿನಲ್ಲಿ ನಾಯಕ ಅಜಯ್ ರಾವ್ ಅವರೊಂದಿಗೆ ಸ್ಯಾಂಡಲ್‌ವುಡ್‌ ನಿರ್ದೇಶಕರಾದ ರವಿ ಬಸ್ರೂರ್, ನಂದಕಿಶೋರ್, ಹರಿ ಸಂತೋಷ್, ಶಶಾಂಕ್, ವಿ.ನಾಗೇಂದ್ರ ಪ್ರಸಾದ್ ಹೆಜ್ಜೆ ಹಾಕಿದ್ದಾರೆ. ಈ ವಿಶೇಷ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಈ ಹಾಡನ್ನು ಚೇತನ್ ಕುಮಾರ್ ಬರೆದಿದ್ದು, ಶಶಾಂಕ್ ಶೇಷಗಿರಿ ಹಾಡಿದ್ದಾರೆ. ಸಂಗೀತ ಸಂಯೋಜನೆ ಶ್ರೀಧರ್.ವಿ.ಸಂಭ್ರಮ್ ಅವರದು. ಜಾಕಿ ಈ ಸಿನಿಮಾ ನಿರ್ದೇಶಿಸಿದ್ದಾರೆ.

ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಹಾಡು ಬಿಡುಗಡೆ ಸಮಾರಂಭ ನಡೆಯಿತು. ಹಾಡಿನಲ್ಲಿ ಕಾಣಿಸಿಕೊಂಡಿರುವ ನಿರ್ದೇಶಕರುಗಳೇ ಈ ಹಾಡನ್ನು ರೀಲಿಸ್ ಮಾಡಿದ್ದು ವಿಶೇಷ. ವಿ.ನಾಗೇಂದ್ರಪ್ರಸಾದ್, ನಂದಕಿಶೋರ್, ಹರಿ ಸಂತೋಷ್, ಚೇತನ್ ಕುಮಾರ್, ಮಹೇಶ್ ಕುಮಾರ್ ಹಾಡು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಐವರು ನಿರ್ದೇಶಕರನ್ನು ಚಿತ್ರ ತಂಡದಿಂದ ಸನ್ಮಾನಿಸಲಾಯಿತು. ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಬ್ಯಾನರ್‌ನಡಿ ಟಿ.ಆರ್‌.ಚಂದ್ರಶೇಖರ್‌ ನಿರ್ಮಿಸಿರುವ ಚಿತ್ರ ಏಪ್ರಿಲ್‌ 29ರಂದು ತೆರೆಕಾಣುತ್ತಿದೆ. ನವೀನ್ ಕುಮಾರ್ ಚಿತ್ರದ ಛಾಯಾಗ್ರಾಹಕ. ಶರತ್ ಲೋಹಿತಾಶ್ವ, ಅರುಣ ಬಾಲರಾಜ್, ತಬಲಾ ನಾಣಿ, ಪ್ರಮೋದ್ ಶೆಟ್ಟಿ, ಗಿರಿ, ನಾಗರಾಜ ಮೂರ್ತಿ ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ.

od
Previous articleಭಾವಕ್ಕೆ ಗಡಿರೇಖೆ ಇಲ್ಲ, ಪ್ರೀತಿ ಬದಲಾಗುವುದಿಲ್ಲ, ‘ಲವ್ ಟ್ಯಾಕ್ಟಿಕ್ಸ್‌’ಗೆ ಕೊನೆಯಿಲ್ಲ
Next articleಹಿಂದಿಗೆ ಡಬ್‌ ಆಗುತ್ತಿದೆ ಕಿರಣ್‌ರಾಜ್‌ ನಟನೆಯ ‘ಕನ್ನಡತಿ’ ಧಾರಾವಾಹಿ

LEAVE A REPLY

Connect with

Please enter your comment!
Please enter your name here