ಮಮ್ಮೂಟಿ ಅಭಿನಯದ ‘ಕಣ್ಣೂರ್‌ ಸ್ಕ್ವ್ಯಾಡ್‌’ ಮಲಯಾಳಂ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದೆ. ಮಮ್ಮೂಟಿ ತನಿಖಾ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕನ್ನಡಿಗ ಕಿಶೋರ್ ಉನ್ನತ ಪೊಲೀಸ್‌ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ.

ಮಮ್ಮೂಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಕಣ್ಣೂರು ಸ್ಕ್ವ್ಯಾಡ್’ ಮಲಯಾಳಂ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ರಾಬಿ ವರ್ಗೀಸ್ ರಾಜ್ ನಿರ್ದೇಶನದ ಚಿತ್ರದಲ್ಲಿ ಮಮ್ಮೂಟಿ ತನಿಖಾ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡಿಗ ಕಿಶೋರ್ ಅವರು ಉನ್ನತ ಪೊಲೀಸ್‌ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ. ನೈಜ ಘಟನೆಯಾಧಾರಿತ ಇನ್ವೆಸ್ಟಿಗೇಟಿವ್ – ಥ್ರಿಲ್ಲರ್ ಚಿತ್ರದಲ್ಲಿ ಮಮ್ಮೂಟಿ ಕಾನೂನು ಉಲ್ಲಂಘಿಸಿರುವ ಕ್ರಿಮಿನಲ್ ಗುಂಪಿನ ಹುಡುಕಾಟದಲ್ಲಿರುವ ಪೊಲೀಸ್ ತಂಡವನ್ನು ಮುನ್ನಡೆಸಿ ವಿಜಯವನ್ನು ಸಾಧಿಸುವ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ವಿಜಯ ರಾಘವನ್, ರೋನಿ ಡೇವಿಡ್ ರಾಜ್, ಅಜೀಜ್ ನೆಡುಮಂಗಡ, ಶಬರೀಶ್ ವರ್ಮಾ, ಶರತ್ ಸಭಾ, ಮತ್ತು ಸನ್ನಿ ವೇನ್ ಇದ್ದಾರೆ.

ದುಲ್ಕರ್ ಸಲ್ಮಾನ್ ಅವರ Mammootty Kampany ಬ್ಯಾನರ್‌ ಅಡಿ ಜಾರ್ಜ್‌ ಸೆಬಾಸ್ಟಿಯನ್‌ ಈ ಸಿನಿಮಾ ನಿರ್ಮಿಸಿದ್ದಾರೆ. ಮೊಹಮ್ಮದ್‌ ಶಫಿ ಚಿತ್ರಕಥೆ ರಚಿಸಿದ್ದು, ಮೊಹಮದ್‌ ರಾಹಿಲ್ ಛಾಯಾಗ್ರಹಣ, ಸುಶಿನ್ ಶ್ಯಾಮ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಚಿತ್ರಿಸಿರುವ ಸಿನಿಮಾ ಸೆಪ್ಟೆಂಬರ್ 28ರಂದು ಬಿಡುಗಡೆಯಾಗಲಿದೆ. ನಟ ಮಮ್ಮೂಟಿ ವೃತ್ತಿಜೀವನದಲ್ಲಿ ‘ಉಂಡ’, ‘ಅವನಾಜಿ’, ‘ರೌದ್ರಂ’, ‘ಇನ್ಸ್‌ಪೆಕ್ಟರ್ ಬಲರಾಮ್’, ‘ಯವನಿಕಾ’, ‘ಆಗಸ್ಟ್ 1’, ‘ಬಲರಾಮ್‌ ವರ್ಸಸ್ ಥರಾದಾಸ್’, ‘ರಾಕ್ಷಸರಾಜವು’, ‘ಕಸಬ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here