2023ನೇ ಸಾಲಿನ ದಕ್ಷಿಣ ಭಾರತ filmfare ಪ್ರಶಸ್ತಿಗಳು ಘೋಷಣೆಯಾಗಿವೆ. ಕನ್ನಡ ಸಿನಿಮಾ ವಿಭಾಗದಲ್ಲಿ ‘ಕಾಂತಾರ’ ಸಿನಿಮಾ ಆರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದಿದೆ.

2023ನೇ ಸಾಲಿನ 68ನೇ ದಕ್ಷಿಣ ಭಾರತ filmfare ಪ್ರಶಸ್ತಿಗಳು ಘೋಷಣೆಯಾಗಿವೆ. ರಿಷಭ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ‘ಕಾಂತಾರ’ ಸಿನಿಮಾ ಆರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ‘ಕಾಂತಾರ’ಗೆ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ (ರಿಷಭ್‌ ಶೆಟ್ಟಿ), ಅತ್ಯುತ್ತಮ ನಟಿ (Critics award – ಸಪ್ತಮಿ ಗೌಡ), ಅತ್ಯುತ್ತಮ ಪೋಷಕ ನಟ (ಅಚ್ಯುತ್‌ ಕುಮಾರ್‌), ಅತ್ಯುತ್ತಮ ಸಂಗೀತ (ಅಜನೀಶ್‌ ಲೋಕನಾಥ್‌), ಅತ್ಯುತ್ತಮ ಗಾಯಕ (ಸಾಯಿ ವಿಘ್ನೇಶ್‌) ಪ್ರಶಸ್ತಿಗಳು ಸಂದಿವೆ.

ಅತ್ಯುತ್ತಮ ನಿರ್ದೇಶನ (777 ಚಾರ್ಲಿ), ಅತ್ಯುತ್ತಮ ಸಿನಿಮಾ (critics award – ಧರಣಿ ಮಂಡಲ ಮಧ್ಯದೊಳಗೆ), ಅತ್ಯುತ್ತಮ ನಟ (ನವೀನ್‌ ಶಂಕರ್‌ – ಧರಣಿ ಮಂಡಲ ಮಧ್ಯದೊಳಗೆ), ಅತ್ಯುತ್ತಮ ನಟಿ (ಚೈತ್ರಾ ಜೆ ಆಚಾರ್‌ – ತಲೆದಂಡ), ಅತ್ಯುತ್ತಮ ಪೋಷಕ ನಟಿ (ಮಂಗಳ ಎನ್‌ – ತಲೆದಂಡ), ಅತ್ಯುತ್ತಮ ಗಾಯಕಿ (ಸುನಿಧಿ ಚೌವ್ಹಾಣ್‌ (ರಾ ರಾ ರುಕ್ಕಮ್ಮ) ಕನ್ನಡ ಸಿನಿಮಾದ ಇತರೆ ವಿಭಾಗಗಳಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ.

LEAVE A REPLY

Connect with

Please enter your comment!
Please enter your name here