ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 48ನೇ ವಾರ್ಷಿಕೋತ್ಸವ ಹಾಗೂ 23ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 27ರಂದು ನಡೆಯಲಿದೆ. ಚಿತ್ರನಿರ್ಮಾಪಕ ದಿ. ರಾಮು ಮತ್ತು ಹಿರಿಯ ಪತ್ರಕರ್ತ ಮುರಳೀಧರ ಖಜಾನೆ ಅವರಿಗೆ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಘೋಷಣೆಯಾಗಿದೆ.

ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ ಡಿ ವಿ ಸುಧೀಂದ್ರ ಅವರು ತಮ್ಮ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25 ವರ್ಷ ತುಂಬಿದ ಸಂದರ್ಭದಲ್ಲಿ ಚಿತ್ರನಿರ್ಮಾಪಕರಿಗೆ ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದರು. ಈಗ ಪ್ರಶಸ್ತಿಗಳ ಸಂಖ್ಯೆ 11ಕ್ಕೇರಿದೆ. ಸಂಸ್ಥೆಯ 48ನೇ ವಾರ್ಷಿಕೋತ್ಸವ ಹಾಗೂ 23ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 27ರ ಶನಿವಾರ ಸಂಜೆ 5.30ಕ್ಕೆ ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಲಿದೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿ | ದಿ. ರಾಮು, ಹಿರಿಯ ಚಲನಚಿತ್ರ ನಿರ್ಮಾಪಕರು (ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ), ಮುರಳೀಧರ ಖಜಾನೆ, ಹಿರಿಯ ಚಲನಚಿತ್ರ ಪತ್ರಕರ್ತರು (ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ), ಹೇಮಂತ್ ಕುಮಾರ್, ಹಿನ್ನಲೆ ಗಾಯಕರು (ಡಾ ರಾಜ್‌ಕುಮಾರ್ ಪ್ರಶಸ್ತಿ – ಡಾ. ರಾಜಕುಮಾರ್ ಕುಟುಂಬದವರಿಂದ), ನಾಗತಿಹಳ್ಳಿ ಚಂದ್ರಶೇಖರ್, ನಿರ್ದೇಶಕರು (‘ಯಜಮಾನ’ ಚಿತ್ರದ ಖ್ಯಾತಿ ಆರ್ ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ – ಶ್ರೀಮತಿ ಭಾರತಿ ವಿಷ್ಣುವರ್ಧನ್‌ ಅವರಿಂದ), ನಟಿ ಜಯಲಕ್ಷ್ಮಿ ಪಿ (ಖ್ಯಾತ ಅಭಿನೇತ್ರಿ ಶ್ರೀಮತಿ ಜಯಮಾಲ ಎಚ್ ಎಂ ರಾಮಚಂದ್ರ ಪ್ರಶಸ್ತಿ), ಜೋ ಕೋಸ್ಟ, ಅತ್ಯುತ್ತಮ ಸಂಗೀತ ನಿರ್ದೇಶನ (‘ಹೊಂದಿಸಿ ಬರೆಯಿರಿ’ ಚಿತ್ರಕ್ಕಾಗಿ ಎಂ ಎಸ್ ರಾಮಯ್ಯ ಮೀಡಿಯಾ ಅಂಡ್ ಎಂಟರ್‌ಟೈನ್‌ಮೆಂಟ್ ಪ್ರೈ ಲಿ ಪ್ರಶಸ್ತಿ), ಹೇಮಂತ್ ರಾವ್, ಅತ್ಯುತ್ತಮ ಕಥಾಲೇಖಕರು (‘ಸಪ್ತಸಾಗರದಾಚೆ ಎಲ್ಲೋ’ ಚಿತ್ರಕ್ಕಾಗಿ), (ಖ್ಯಾತ ನಿರ್ದೇಶಕ – ನಿರ್ಮಾಪಕ ಕೆ ವಿ ಜಯರಾಂ ಪ್ರಶಸ್ತಿ – ಶ್ರೀಮತಿ ಮೀನಾಕ್ಷಿ ಜಯರಾಂ ಅವರಿಂದ)

ಬಿ ಎಸ್ ಲಿಂಗದೇವರು ಮತ್ತು ಶರಣು ಹುಲ್ಲೂರು, ಅತ್ಯುತ್ತಮ ಸಂಭಾಷಣೆ (‘ವಿರಾಟಪುರದ ವಿರಾಗಿ’ ಚಿತ್ರಕ್ಕಾಗಿ) (ಖ್ಯಾತ ಚಿತ್ರ ಸಾಹಿತಿ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ – ಡಾ ಎಚ್ ಕೆ ನರಹರಿ ಅವರಿಂದ), ಕುಮಾರಿ ಸಿಂಧು ಶ್ರೀನಿವಾಸಮೂರ್ತಿ, (‘ಆಚಾರ್ & ಕೋ’ – ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ) (ರಂಗ ತಜ್ಞ, ಹಿರಿತೆರೆ, ಕಿರುತೆರೆ ನಿರ್ದೇಶಕ ಬಿ ಸುರೇಶ್ ಪ್ರಶಸ್ತಿ), ಡಾಲಿ ಧನಂಜಯ (‘ಟಗರು ಪಲ್ಯ’ ಚಿತ್ರದ – ‘ಸಂಬಂಜ ಅನ್ನೋದು ದೊಡ್ಡದು ಕನಾ’ ಗೀತರಚನೆಗಾಗಿ) (‘ಹಿರಿಯ ಪತ್ರಕರ್ತ ಪಿ ಜಿ ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ’ – ಪತ್ರಕರ್ತ ವಿನಾಯಕರಾಮ್ ಕಲಗಾರು ಅವರಿಂದ), ಸುಂದರರಾಜ್, ಹಿರಿಯ ಪೋಷಕ ಕಲಾವಿದರು (ಹಿರಿಯ ಪತ್ರಕರ್ತ ಸಿ ಸೀತಾರಾಂ ಸ್ಮರಣಾರ್ಥ ಪ್ರಶಸ್ತಿ). ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತ ಬಿ ಎನ್ ಸುಬ್ರಹ್ಮಣ್ಯ, ರಕ್ಷಿತ್ ಶೆಟ್ಟಿ ಹಾಗೂ ಅನಿರುದ್ಧ್ ಜತಕರ್ ಅವರನ್ನು ಸನ್ಮಾನಿಸಲಾಗುವುದು.

LEAVE A REPLY

Connect with

Please enter your comment!
Please enter your name here