ರಂಜಿತ್‌ ಸಿಂಗ್‌ ರಜಪೂತ್‌ ನಿರ್ದೇಶನದಲ್ಲಿ ನಿಶ್ಚಿತ್‌ ಕೊರೋಡಿ ನಟಿಸಿರುವ ‘Supplier ಶಂಕರ್‌’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ನಿರ್ದೇಶಕರೇ ರಚಿಸಿರುವ ಈ ಹಾಡಿಗೆ ಆರ್‌ ಬಿ ಭರತ್‌ ಸಂಗೀತ ಸಂಯೋಜಿಸಿದ್ದು, ಸುನೀಲ್‌ ಕಶ್ಯಪ್‌ ದನಿಯಾಗಿದ್ದಾರೆ.

ನಿಶ್ಚಿತ್‌ ಕೊರೋಡಿ ನಟನೆಯ ‘Supplier ಶಂಕರ್’ ಸಿನಿಮಾದ ಮೊದಲ‌ ಹಾಡು ರಿಲೀಸ್‌ ಆಗಿದೆ. ತಾಯಿಯನ್ನು ಕಳೆದುಕೊಂಡ ಮಗನ ಆಕ್ರಂದನ, ತುಂಬಾ ಪ್ರೀತಿಸುವ ಜೀವ ದೂರವಾದಾಗ ಆಗುವ‌ ನೋವಿನ ಗೀತೆ ಇದು. ‘ಅಯ್ಯೋ ದೈವವೇ’ ಹಾಡಿಗೆ ನಿರ್ದೇಶಕ ರಂಜಿತ್ ಸಿಂಗ್ ರಜಪೂತ್ ಅವರದ್ದೇ ಸಾಹಿತ್ಯವಿದೆ. ಆರ್‌ ಬಿ ಭರತ್‌ ಸಂಗೀತ ಸಂಯೋಜನೆಯಲ್ಲಿ ಸುನಿಲ್ ಕಶ್ಯಪ್ ಹಾಡಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಬಾರ್ ಸಪ್ಲೈಯರ್‌ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಗೋಪಾಲ ಕೃಷ್ಣ ದೇಶಪಾಂಡೆ, ಜ್ಯೋತಿ ರೈ, ನವೀನ್ ಡಿ ಪಡಿಲ್ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಗಂಟುಮೂಟೆ’, ‘ಟಾಮ್ ಆ್ಯಂಡ್‌ ಜೆರ್ರಿ’ ಸಿನಿಮಾಗಳಲ್ಲಿ ಗಮನ ಸೆಳೆದಿದ್ದ ನಿಶ್ಚಿತ್ ಕೊರೋಡಿ ಅವರ ಮೂರನೇ ಚಿತ್ರವಿದು. ಯುವ ಪ್ರತಿಭೆ ರಂಜಿತ್ ಸಿಂಗ್ ರಜಪೂತ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್ ಹೇಳಿದ್ದಾರೆ. ತ್ರಿನೇತ್ರ ಫಿಲ್ಮಂಸ್ ಸಂಸ್ಥೆಯಡಿ ಎಂ ಚಂದ್ರಶೇಖರ್ ಮತ್ತು ನಾಗೇಂದ್ರ ಸಿಂಗ್ ನಿರ್ಮಿಸಿರುವ ಚಿತ್ರಕ್ಕೆ ಸತೀಶ್ ಕುಮಾರ್ ಎ ಛಾಯಾಗ್ರಹಣ, ಆರ್ ಬಿ ಭರತ್ ಸಂಗೀತ, ಸತೀಶ್ ಚಂದ್ರಯ್ಯ ಸಂಕಲನವಿದೆ.

Previous article‘ಶಾಖಾಹಾರಿ’ ಶೀರ್ಷಿಕೆ ಬಿಡುಗಡೆ ಮಾಡಿದ ಯೋಗರಾಜ್‌ ಭಟ್‌ | ರಂಗಾಯಣ ರಘು ಸಿನಿಮಾ
Next articleಧನುಷ್‌ – ರಶ್ಮಿಕಾ ಮಂದಣ್ಣ ಸಿನಿಮಾ ತಂಡಕ್ಕೆ ನಾಗಾರ್ಜುನ್‌ ಎಂಟ್ರಿ

LEAVE A REPLY

Connect with

Please enter your comment!
Please enter your name here