ರಿಷಭ್‌ ಶೆಟ್ಟಿ ನಟಿಸಿ – ನಿರ್ದೇಶಿಸುತ್ತಿರುವ ‘ಕಾಂತಾರ 2’ ಸಿನಿಮಾದ ಚಿತ್ರೀಕರಣ ಡಿಸೆಂಬರ್‌ ತಿಂಗಳಿನಲ್ಲಿ ಶುರುವಾಗಲಿದೆ. ಮೂರು ಹಂತಗಳಲ್ಲಿ ಚಿತ್ರೀಕರಣಕ್ಕೆ ಯೋಜನೆ ರೂಪಿಸಿದ್ದು, 2024ರ ಆಗಸ್ಟ್‌ ಹೊತ್ತಿಗೆ ಚಿತ್ರೀಕರಣ ಪೂರ್ಣಗೊಳ್ಳಲಿದೆ.

ರಿಷಭ್‌ ಶೆಟ್ಟಿ ನಟಿಸಿ, ನಿರ್ದೇಶಿಸಲಿರುವ ‘ಕಾಂತಾರ 2’ ಚಿತ್ರೀಕರಣ ಇದೇ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ ಆರಂಭಗೊಳ್ಳಲಿದ್ದು, ಈ ಸಿನಿಮಾದಲ್ಲಿ ಹೆಚ್ಚು ಸಾಹಸ ದೃಶ್ಯಗಳು ಇರಲಿವೆ ಎನ್ನಲಾಗಿದೆ. ಕಳೆದ ವರ್ಷ ತೆರೆಕಂಡ ‘ಕಾಂತಾರ’ ಸಿನಿಮಾ ದೇಶ-ವಿದೇಶದಲ್ಲಿ ಸದ್ದು ಮಾಡಿತ್ತು. ಸೆಪ್ಟೆಂಬರ್‌ 2022ರಲ್ಲಿ ಬಿಡುಗಡೆಯಾದ ಈ ಸಿನಿಮಾ ತುಳುನಾಡಿನ ಭೂತಾರಾಧನೆಯನ್ನು ಜಗತ್ತಿಗೆ ಪರಿಚಯಿಸಿತು. Hombale Films ನಿರ್ಮಾಣದ ಈ ಸಿನಿಮಾಗೆ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಸಿಕ್ಕಿತು. ‘ಕಾಂತಾರ 2’ ಸಿನಿಮಾದ ಪ್ರೀಪ್ರೊಡಕ್ಷನ್‌ ಕೆಲಸಗಳು ಆರಂಭಗೊಂಡಿದ್ದು, ರಿಷಬ್‌ ಶೆಟ್ಟಿಯವರು ಸಿನಿಮಾಕ್ಕೆ ಸಂಬಂಧಪಟ್ಟ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ‘ಕಾಂತಾರ’ ಮೊದಲ ಭಾಗಕ್ಕಿಂತ ಹೆಚ್ಚು ಅದ್ಧೂರಿಯಾಗಿ ಮತ್ತು ಹೆಚ್ಚು ಸಾಹಸ ದೃಶ್ಯಗಳನ್ನು ಹೊಂದಿರಲಿದೆ. ಮೂರು ಹಂತಗಳಲ್ಲಿ ಚಿತ್ರೀಕರಣಕ್ಕೆ ಯೋಜನೆ ರೂಪಿಸಿದ್ದು, 2024ರ ಆಗಸ್ಟ್‌ ಹೊತ್ತಿಗೆ ಚಿತ್ರೀಕರಣ ಪೂರ್ಣಗೊಳ್ಳಲಿದೆ.

‘ಕಾಂತಾರ’ Part 2 ಸಾಹಸ ದೃಶ್ಯಗಳಿಗಾಗಿ ರಿಷಬ್‌ ಶೆಟ್ಟಿ ದೈಹಿಕ ತರಬೇತಿ ಪಡೆದಿದ್ದಾರೆ. ಈ ಕುರಿತು ಒಂದಿಷ್ಟು ಮಾಹಿತಿಯನ್ನು Hombale Filmsನ ಚೆಲುವೇಗೌಡ ಮಾಧ್ಯಮವೊಂದರಲ್ಲಿ ಹಂಚಿಕೊಂಡಿದ್ದಾರೆ. ‘ಕಾಂತಾರದ ಸೀಕ್ವೆಲ್ ಮೊದಲು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಬಳಿಕ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದು ಕರ್ನಾಟಕದ ಜಾನಪದ ಅಂಶಗಳನ್ನು ಒಳಗೊಂಡ ಆಕ್ಷನ್‌ – ಥ್ರಿಲ್ಲರ್‌ ಸಿನಿಮಾವಾಗಿರಲಿದೆ. ಕಿಶೋರ್‌, ಅಚ್ಯುತ್‌ ಕುಮಾರ್‌, ಸಪ್ತಮಿ ಗೌಡ ಮತ್ತು ಪ್ರಮೋದ್‌ ಶೆಟ್ಟಿ ಮುಂತಾದ ನಟರು ಈ ಚಿತ್ರದಲ್ಲೂ ಇರಲಿದ್ದಾರೆʼ ಎಂದಿದ್ದಾರೆ.

LEAVE A REPLY

Connect with

Please enter your comment!
Please enter your name here