ತರುಣ್‌ ದುಡೇಜಾ ನಿರ್ದೇಶನದ ‘ಧಕ್‌ ಧಕ್‌’ ಹಿಂದಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ರತ್ನಾ ಪಾಠಕ್ ಶಾ, ದಿಯಾ ಮಿರ್ಜಾ, ಫಾತಿಮಾ ಸನಾ ಶೇಖ್, ಸಂಜನಾ ಸಂಘಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಾಲ್ವರು ಮಹಿಳೆಯರ ಬೈಕ್‌ ರೈಡಿಂಗ್‌ ಕುರಿತು ಕಥಾಹಂದರದ ಸಿನಿಮಾ ಅಕ್ಟೋಬರ್‌ 13ರಂದು ತೆರೆಕಾಣಲಿದೆ.

ರತ್ನಾ ಪಾಠಕ್ ಶಾ, ದಿಯಾ ಮಿರ್ಜಾ, ಫಾತಿಮಾ ಸನಾ ಶೇಖ್, ಸಂಜನಾ ಸಂಘಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಧಕ್‌ ಧಕ್‌’ ಹಿಂದಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಚಿತ್ರವನ್ನು ತರುಣ್ ದುಡೇಜಾ ನಿರ್ದೇಶಿಸಿದ್ದಾರೆ. ನಾಲ್ವರು ಮಹಿಳಾ ರೈಡರ್‌ಗಳ ಸಾಹಸ ಯಾನದ ಕಥಾಹಂದರ ಈ ಸಿನಿಮಾ. ನಾಲ್ವರು ಮಹಿಳೆಯರ ಬೈಕ್‌ ರೈಡಿಂಗ್‌ ದೃಶ್ಯಗಳನ್ನು ಟ್ರೇಲರ್‌ ಹೊಂದಿದೆ. ಈ ನಾಲ್ವರು ಒಬ್ಬರಿಗಿಂತ ಒಬ್ಬರು ವಿಭಿನ್ನ ಮನಸ್ಥಿತಿ ಹೊಂದಿರುತ್ತಾರೆ. ಇವರು ಜಗತ್ತಿನ ಅತ್ಯಂತ ಎತ್ತರದ ಮೋಟಾರು ಸಂಚರಿಸಬಲ್ಲ ರಸ್ತೆ ಖರ್ದುಂಗ್ಲಾ ಪಾಸ್‌ನಲ್ಲಿ ಬೈಕ್‌ ಓಡಿಸುವ ಸಾಹಸಕ್ಕೆ ಮುಂದಾಗುತ್ತಾರೆ.

ಟ್ರೇಲರ್‌ನಲ್ಲಿ ನಾಲ್ಕು ಪಾತ್ರಗಳನ್ನು ಪರಿಚಯಿಸಲಾಗಿದ್ದು, ರತ್ನಾ ಪಾಠಕ್ ಷಾ, ಬೈಕರ್ ದಿಯಾಳ ನಾನಿ ಪಾತ್ರದಲ್ಲಿ ನಟಿಸಿದ್ದಾರೆ. ತಮ್ಮದೇ ಶೈಲಿಯಲ್ಲಿ ಹಾಸ್ಯ ಸಂಭಾಷಣೆಗಳನ್ನು ಹೇಳಿ ಎಲ್ಲರನ್ನು ನಗಿಸುತ್ತಿರುತ್ತಾರೆ. ಟ್ರಾವೆಲ್ ಬ್ಲಾಗರ್ ಸ್ಕೈ ಪಾತ್ರವನ್ನು ಫಾತಿಮಾ ಸನಾ ಶೇಖ್ ನಿರ್ವಹಿಸಿದ್ದಾರೆ. ಪಾರಿಜಾತ ಜೋಶಿ ಮತ್ತು ತರುಣ್ ದುಡೇಜಾ ಸಿನಿಮಾಗೆ ಚಿತ್ರಕಥೆ ಬರೆದಿದ್ದು, Viacom18 Media ಬ್ಯಾನರ್‌ ಅಡಿಯಲ್ಲಿ ಕೆವಿನ್ ವಾಜ್, ಅಜಿತ್ ಅಂಧಾರೆ, ತಾಪ್ಸಿ ಪನ್ನು, ಪ್ರಾಂಜಲ್ ಖಂಡಿಯಾ, ಆಯುಷ್ ಮಹೇಶ್ವರಿ ನಿರ್ಮಿಸಿರುವ ಸಿನಿಮಾ ಅಕ್ಟೋಬರ್‌ 13ರಂದು ಥಿಯೇಟರ್‌ಗೆ ಬರುತ್ತಿದೆ.

LEAVE A REPLY

Connect with

Please enter your comment!
Please enter your name here