ಅಭಿನಯ್‌ ಡಿಯೊ ನಿರ್ದೇಶನದಲ್ಲಿ ‘Brown’ nro noir crime drama ಸೆಟ್ಟೇರಿದೆ. Zee Studios ನಿರ್ಮಿಸುತ್ತಿರುವ ಪ್ರಾಜೆಕ್ಟ್‌ನಲ್ಲಿ ಕರಿಷ್ಮಾ ಕಪೂರ್‌ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

‘Delhi Belly’ ಸಿನಿಮಾ ಖ್ಯಾತಿಯ ಅಭಿನಯ್‌ ಡಿಯೊ ಅವರ ‘Brown’ನಲ್ಲಿ ಪ್ರಮುಖ ಪಾತ್ರದಲ್ಲಿ ಕರಿಷ್ಮಾ ಕಪೂರ್‌ ನಟಿಸುತ್ತಿದ್ದಾರೆ. ಅಭೀಕ್‌ ಬರುವಾ ಅವರ ‘City of Death’ ಕೃತಿಯನ್ನು ಆಧರಿಸಿ ರೂಪಿಸುತ್ತಿರುವ neo noir ಕ್ರೈಂ – ಡ್ರಾಮಾ ಇದು. Zee Studios ನಿರ್ಮಾಣದಲ್ಲಿ ತಯಾರಾಗುತ್ತಿರುವ ಇದು ಸಿನಿಮಾನೋ, ವೆಬ್‌ ಸರಣಿಯಾಗಿ ರೂಪುಗೊಳ್ಳಲಿದೆಯೋ ಎನ್ನುವ ಬಗ್ಗೆ ಇನ್ನೂ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಸೂರ್ಯ ಶರ್ಮ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. “ಇದು ತುಂಬಾ ಎಕ್ಸೈಟಿಂಗ್‌ ಆದ ಸಿನಿಮಾ. ನಟಿಯಾಗಿ ನನಗೂ ಇದು ಸವಾಲಿನ ಪಾತ್ರ. ಶೂಟಿಂಗ್‌ ಶುರುವಾಗಿದ್ದು, ನನ್ನಲ್ಲಿ ಉತ್ಸಾಹ ಹೆಚ್ಚಾಗಿದೆ” ಎಂದಿದ್ದಾರೆ ನಟಿ ಕರಿಷ್ಮಾ. ನಿರ್ದೇಶಕ ಅಭಿನಯ್‌ ಡಿಯೋ, “ಮನುಷ್ಯರ ಮಾನಸಿಕ ತಾಕಲಾಟಗಳು, ಸಂಬಂಧಗಳ ಸುತ್ತ ಹೆಣೆದ ಕತೆಯಿದು” ಎನ್ನುತ್ತಾರೆ.

Previous articleಹೇಮಂತ್‌ ರಾವ್‌ ನಿರ್ಮಾಣದ ಥ್ರಿಲ್ಲರ್‌ ‘ಅಜ್ಞಾತವಾಸಿ’; ರಂಗಾಯಣ ರಘು ಮುಖ್ಯ ಪಾತ್ರಧಾರಿ
Next articleಯುದ್ಧಕ್ಕೆ ಮುನ್ನುಡಿ!; ಪ್ರೇಮ್‌ – ಧ್ರುವ ಸರ್ಜಾ ಸಿನಿಮಾ ಫಸ್ಟ್‌ಲುಕ್‌ ಪೋಸ್ಟರ್‌

LEAVE A REPLY

Connect with

Please enter your comment!
Please enter your name here