‘ಜೋಗಿ’ ಪ್ರೇಮ್‌ ನಿರ್ದೇಶನದ ನೂತನ ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. KVN ಪ್ರೊಡಕ್ಷನ್ಸ್‌ ನಿರ್ಮಾಣದ ಚಿತ್ರದಲ್ಲಿ ಧ್ರುವ ಸರ್ಜಾ ಹೀರೋ. ಪೋಸ್ಟರ್‌ ಮೂಲಕ ಈ ಬಾರಿ ಪೀರಿಯಡ್‌ ಸಿನಿಮಾವೊಂದನ್ನು ಕೈಗೆತ್ತಿಕೊಂಡಿರುವ ಸೂಚನೆ ನೀಡಿದ್ದಾರೆ ಪ್ರೇಮ್‌.

ಪ್ರೇಮ್‌ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟಿಸಲಿರುವ ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಏಪ್ರಿಲ್‌ 24ರಂದು ವರನಟ ಡಾ.ರಾಜಕುಮಾರ್‌ ಹುಟ್ಟುಹಬ್ಬದಂದು ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. “ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ” ಎಂದು ಧ್ರುವ ಸರ್ಜಾ ಟ್ವೀಟ್‌ ಮಾಡಿದ್ದು, ಎಂದಿನಂತೆ ಸಿನಿಪ್ರೇಮಿಗಳ ತಲೆಗೆ ಕೆಲಸ ಕೊಟ್ಟಿದ್ದಾರೆ. ಇದು KVN ಪ್ರೊಡಕ್ಷನ್ಸ್‌ ನಿರ್ಮಾಣದ ನಾಲ್ಕನೇ ಸಿನಿಮಾ ಆಗಲಿದೆ. ಪ್ರೇಮ್‌ ವಿನ್ಯಾಸಗೊಳಿಸಿರುವ ಪೋಸ್ಟರ್‌ನಲ್ಲಿ ಹಲವು ಅಂಶಗಳಿವೆ. ಇದರಲ್ಲಿ 1970 ಇಸವಿ, ಡೆಲ್ಲಿ ಗೇಟ್ ಮಾದರಿಯ ಗೇಟ್ , ಗನ್ ಹಿಡಿದು ನಿಂತಿರೋ ವ್ಯಕ್ತಿ, ಹೀಗೆ ರೆಟ್ರೋ, ಪೀರಿಯಡ್‌ ಕತೆ ಎನ್ನುವಂತೆ ‌ಪ್ರೇಮ್ ಪೋಸ್ಟರ್ ಬಿಟ್ಟಿದ್ದಾರೆ. ಇದು ನೈಜ ಘಟನೆಯನ್ನಾಧರಿಸಿದ ಕತೆ ಎಂದಿದ್ದಾರೆ. ಮೂಲ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಡಬ್ಬಿಂಗ್‌ ಅವತರಣಿಕೆಗಳಲ್ಲಿ ಸಿನಿಮಾ ತೆರೆಕಾಣುವ ಸೂಚನೆ ಸಿಕ್ಕಿದೆ. ‘ಏಕ್‌ ಲವ್‌ ಯಾ’ ಸಿನಿಮಾದ ನಂತರ ಅವರು ನಿರ್ದೇಶಿಸುತ್ತಿರುವ ಚಿತ್ರವಿದು.

Previous articleಕರಿಷ್ಮಾ ಕಪೂರ್‌ ‘Brown’; ಅಭಿನಯ್‌ ಡಿಯೊ ಕ್ರೈಂ-ಡ್ರಾಮಾ
Next articleಖುಷಿಯನ್ನು ಹುಡುಕುತ್ತಾ ಖುಷಿಯ ನಾಡನ್ನು ತೊರೆದು ಹೋದವನು

LEAVE A REPLY

Connect with

Please enter your comment!
Please enter your name here