ಹನ್ಸಲ್‌ ಮೆಹ್ತಾ ನಿರ್ದೇಶನದ ‘ಸ್ಕೂಪ್‌’ ವೆಬ್‌ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. ನೈಜ ಘಟನೆ ಆಧರಿಸಿದ ಸರಣಿಯ ಪ್ರಮುಖ ಪಾತ್ರದಲ್ಲಿ ಕರಿಷ್ಮಾ ತನ್ನಾ ನಟಿಸಿದ್ದಾರೆ. ಜೂನ್‌ 2ರಿಂದ Netflixನಲ್ಲಿ ಸರಣಿ ಸ್ಟ್ರೀಮ್‌ ಆಗಲಿದೆ.

ಕರಿಷ್ಮಾ ತನ್ನಾ ಅಭಿನಯದ ನೈಜ ಘಟನೆಯಾಧಾರಿತ ಹಿಂದಿ ವೆಬ್‌ ಸರಣಿ ‘ಸ್ಕೂಪ್‌’ ಟ್ರೇಲರ್‌ ಬಿಡುಗಡೆಯಾಗಿದೆ. ಸ್ಟಾರ್ ಕ್ರೈಮ್ ವರದಿಗಾರ್ತಿ ಜಾಗೃತಿ ಪಾಠಕ್ ಆಗಿ ಕರಿಷ್ಮಾ ಕಾಣಿಸಿಕೊಂಡಿದ್ದಾರೆ. ಪತ್ರಕರ್ತನೊಬ್ಬನ ಆಘಾತಕಾರಿ ಕೊಲೆಯ ಪ್ರಮುಖ ಆರೋಪಿಯಾಗಿ ಜಾಗೃತಿ ಪಾಠಕ್‌ ಹೆಸರು ಕೇಳಿಬರುತ್ತದೆ. ಭೂಗತ ಪಾತಕಿಗಳ ನೆರವು ಪಡೆದು ತನ್ನ ಪ್ರತಿಸ್ಪರ್ಧಿಯನ್ನು ಹಣಿದಿದ್ದಾಳೆ ಎನ್ನುವ ಆರೋಪ ಆಕೆಯ ಮೇಲೆ ಬರುತ್ತದೆ. ಅವಳು ನ್ಯಾಯಕ್ಕಾಗಿ ಹೋರಾಡುತ್ತಾಳೆ. ಜಾಗೃತಿಯ ಬೆಂಬಲಕ್ಕೆ ಆಕೆಯ ಕುಟುಂಬವು ನಿಂತಿದೆ. ತನ್ನ ಮೇಲಿನ ಆರೋಪ ಸುಳ್ಳು ಎಂದು ಆಕೆ ಸಾಬೀತು ಮಾಡುವಳೇ ಎನ್ನುವುದರ ಸುತ್ತ ಕತೆ ನಡೆಯುತ್ತದೆ.

ಮೊಹಮ್ಮದ್ ಜೀಶಾನ್ ಅಯ್ಯೂಬ್ ಆಕೆಯ ಸಹೋದ್ಯೋಗಿಯಾಗಿ, ಹರ್ಮನ್ ಬವೇಜಾ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಜಗತ್ತು ನಂಬುವ ಒಂದು ತಪ್ಪು ಆರೋಪದಿಂದ ಒಬ್ಬ ಮಹಿಳೆಯ ಜೀವನ ಹೇಗೆ ತಲೆಕೆಳಗಾಗುತ್ತದೆ ಎಂಬುವುದನ್ನು ಟ್ರೈಲರ್‌ ತೋರಿಸಿದೆ. ಮೃಣ್ಮಯೀ ಲಗೂ ವೈಕುಲ್ ಮತ್ತು ಮೀರತ್ ತ್ರಿವೇದಿ ರಚನೆಯ ಸರಣಿಗೆ ನೈಜ ಘಟನೆಗಳು ಪ್ರೇರಣೆಯಾಗಿವೆ. ಜಿಗ್ನಾ ವೋರಾ ಅವರ ʼBehind Bars in Bycullaʼ ಪುಸ್ತಕದ ವಸ್ತು ಸರಣಿಯಲ್ಲಿದೆ. ಹನ್ಸಲ್ ಮೆಹ್ತಾ ಮತ್ತು ಮೃಣ್ಮಯೀ ಲಗೂ ವೈಕುಲ್ ನಿರ್ಮಾಣದ ಸರಣಿಯ ಪ್ರಮುಖ ಪಾತ್ರಗಳಲ್ಲಿ ದೇವೇನ್ ಭೋಜನಿ, ತನಿಷ್ಠಾ ಚಟರ್ಜಿ, ತೇಜಸ್ವಿನಿ ಕೊಲ್ಹಾಪುರೆ, ಶಿಖಾ ತಲ್ಸಾನಿಯಾ, ತನ್ಮಯ್ ಧನಾನಿಯಾ, ಇನಾಯತ್ ಸೂದ್, ಸ್ವರೂಪ ಘೋಷ್, ಮಲ್ಹಾರ್ ಥಾಕರ್, ಇರಾ ದುಬೆ, ಇಶಿತಾ ಅರುಣ್ ಅಭಿನಯಿಸಿದ್ದಾರೆ. ಜೂನ್‌ 2ರಿಂದ ಸರಣಿ Netflixನಲ್ಲಿ ಸ್ಟ್ರೀಮ್‌ ಆಗಲಿದೆ.

Previous articleಎರಡು ದಶಕದ ನಂತರ ಬಾಲಿವುಡ್‌ಗೆ ಜ್ಯೋತಿಕಾ ಕಮ್‌ಬ್ಯಾಕ್‌ | ಅಜಯ್‌ ದೇವಗನ್‌ ಸಿನಿಮಾದ ನಾಯಕಿ
Next articlePremium subscription ಆರಂಭಿಸಲಿರುವ JioCinema

LEAVE A REPLY

Connect with

Please enter your comment!
Please enter your name here