JioCinema OTT ಪ್ಲಾಟ್‌ಫಾರ್ಮ್‌ ಐಪಿಎಲ್‌ ನಂತರ ಪ್ರೀಮಿಯಮ್‌ ಸಬ್‌ಸ್ಕ್ರಿಪ್ಶನ್‌ ಪ್ಲಾನ್‌ ಆರಂಭಿಸಲಿದೆ. ಜಿಯೋ ಸಿನಿಮಾದಲ್ಲಿ ಇಲ್ಲಿಯವರೆಗೆ ಉಚಿತವಾಗಿ ಸ್ಟ್ರೀಮ್ ಆಗುತ್ತಿದ್ದ HBO ಮತ್ತು Warner Bros ಕಂಟೆಂಟ್‌ ಸಬ್‌ಸ್ಕ್ರಿಪ್ಶನ್‌ ಯೋಜನೆಯಡಿ ಬರಲಿವೆ. ಚಂದಾ ದರ ವರ್ಷಕ್ಕೆ 999 ರೂ. ನಿಗಧಿಯಾಗಿದೆ.

ಕಳೆದ ತಿಂಗಳು ಏಪ್ರಿಲ್‌ನಲ್ಲಿ Viacom18 ಸಂಸ್ಥೆ Warner Bros Discovery ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿತ್ತು. HBO, Max Original, Warner Bros ಕಂಟೆಂಟ್‌ JioCinema ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್‌ ಆಗುವ ಈ ಬೆಳವಣಿಗೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ JioCinema ಕೂಡಲೇ ಸಬ್‌ಸ್ಕ್ರಿಪ್ಶನ್‌ ಮಾಡೆಲ್‌ ಆರಂಭಿಸುತ್ತದೆ ಎಂದು ಉದ್ಯಮದವರು ಊಹಿಸಿದ್ದರು. ಆದರೆ IPL ಪಂದ್ಯಾವಳಿಯನ್ನು ಉಚಿತವಾಗಿ ವೀಕ್ಷಿಸಲು JioCinema ಅವಕಾಶ ಕಲ್ಪಿಸಿತು. ಕ್ರಿಕೆಟ್‌ ಜೊತೆ ‘ವಿಕ್ರಂ ವೇದ’ ಸೇರಿದಂತೆ ಕೆಲವು ಹಿಂದಿ ಚಿತ್ರಗಳೂ ಜನರಿಗೆ ಉಚಿತವಾಗ ಸಿಕ್ಕಿದ್ದವು. ಇದೀಗ JioCinema ಐಪಿಎಲ್‌ ಪಂದ್ಯಾವಳಿ ನಂತರ ಪ್ರೀಮಿಯಮ್‌ ಸಬ್‌ಸ್ಕ್ರಿಪ್ಶನ್‌ ಶುರು ಮಾಡಲಿದೆ. ಚಂದಾ ಹಣ ವರ್ಷಕ್ಕೆ 999 ಎಂದು ನಿಗಧಿಯಾಗಿದೆ.

ಸಬ್‌ಸ್ಕ್ರಿಪ್ಶನ್‌ ಮಾಡೆಲ್‌ನಡಿ JioCinema, ‘Game of Thrones’, ‘The Last of Us’, ‘House of the Dragon’, ‘Fatal Attraction’, ”Harry Potter’ ಸರಣಿ ಸಿನಿಮಾಗಳು, ‘Wonder Woman and Batman vs Superman’ ಸೇರಿದಂತೆ ಹಲವು ಸಿನಿಮಾಗಳನ್ನು ವೀಕ್ಷಿಸಬಹುದಾಗಿದೆ. ಈ ಯೋಜನೆ 12 ತಿಂಗಳವರೆಗೆ Valid ಇದ್ದು, ಯಾವುದೇ deviceನಲ್ಲಿ ಮತ್ತು ಒಮ್ಮೆಗೇ ನಾಲ್ಕು deviceಗಳಲ್ಲಿ ಜನರು ಕಂಟೆಂಟ್‌ ವೀಕ್ಷಿಸಬಹುದು. ಐಪಿಎಲ್‌ ಪಂದ್ಯಾವಳಿಯನ್ನು ಉಚಿತವಾಗಿ ವೀಕ್ಷಿಸಲು JioCinema ಅವಕಾಶ ಕಲ್ಪಿಸಿತ್ತು. ಮೊದಲ ವಾರಾಂತ್ಯಕ್ಕೆ 1.47 billion video views ಸಿಕ್ಕಿತ್ತು. ಹಾಗಾಗಿ ಕ್ರಿಕೆಟ್‌ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸಬ್‌ಸ್ಕ್ರಿಪ್ಶನ್‌ ತೆಗೆದುಕೊಳ್ಳಲಿದ್ದಾರೆ ಎನ್ನುವ ಅಂದಾಜಿದೆ.

Inspector Avinash | ‘ವಿಕ್ರಂ ವೇದ’ ಹಿಂದಿ ಸಿನಿಮಾ ಪ್ರೀಮಿಯರ್‌ ಮಾಡಿ ಯಶಸ್ಸು ಕಂಡಿದ್ದ JioCinema ಈಗ ‘Inspector Avinash’ ಥ್ರಿಲ್ಲರ್‌ – ಆಕ್ಷನ್‌ – ಡ್ರಾಮಾ ವೆಬ್‌ ಸರಣಿಯನ್ನು ಸ್ಟ್ರೀಮ್‌ ಮಾಡಲು ಸಜ್ಜಾಗಿದೆ. ರಣದೀಪ್‌ ಹೂಡಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸರಣಿ ಮೇ 18ರಿಂದ ಸ್ಟ್ರೀಮ್‌ ಆಗಲಿದೆ. ನೈಜ ಘಟನೆಗಳನ್ನು ಆಧರಿಸಿ ತಯಾರಾಗಿರುವ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನೀರಜ್‌ ಪಾಠಕ್‌, ಊರ್ವಶಿ ರೌಟೇಲಾ, ಅಮಿತ್‌ ಸೈಲ್‌, ಅಭಿಮನ್ಯು ಸಿಂಗ್‌, ಶಾಲಿನ್‌ ಭಾನೋಟ್‌ ಇದ್ದಾರೆ. Jio Studios ಮತ್ತು Gold Mountain Pictures ಜೊತೆಗೂಡಿ ಈ ಸರಣಿ ನಿರ್ಮಿಸಿವೆ.

LEAVE A REPLY

Connect with

Please enter your comment!
Please enter your name here