ರಾಜು ಮುರುಗನ್‌ ನಿರ್ದೇಶನದ ಕಾಮಿಡಿ – ಆಕ್ಷನ್‌ – ಥ್ರಿಲ್ಲರ್‌ ‘ಜಪಾನ್‌’ ತಮಿಳು ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಶೀರ್ಷಿಕೆ ಪಾತ್ರದಲ್ಲಿ ಕಾರ್ತಿ ನಟಿಸಿರುವ ಸಿನಿಮಾ ಕಾಲಿವುಡ್‌ನಲ್ಲಿ ಸಾಕಷ್ಟ ನಿರೀಕ್ಷೆ ಹುಟ್ಟುಹಾಕಿದೆ. ಅನು ಇಮ್ಯಾನುಯೆಲ್ ಚಿತ್ರದ ನಾಯಕಿ.

ಕಾರ್ತಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಜಪಾನ್‌’ ತಮಿಳು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ರಾಜು ಮುರುಗನ್‌ ನಿರ್ದೇಶನದ ಕಾಮಿಡಿ – ಆಕ್ಷನ್‌ – ಥ್ರಿಲ್ಲರ್‌ ಚಿತ್ರದಲ್ಲಿ ಕಾರ್ತಿ ಚಾಲಾಕಿ ಕಳ್ಳನ ಪಾತ್ರದಲ್ಲಿ ನಟಿಸಿದ್ದಾರೆ. ‘ಒಂದು ಊರಿನಲ್ಲಿ 10 ವರ್ಷದ ಪುಟ್ಟ ಮೀನು ಸಣ್ಣ-ಪುಟ್ಟ ಕಳ್ಳತನ ಮಾಡಿಕೊಂಡು ಆರಾಮವಾಗಿತ್ತು. ನಂತರ ಅದು ರಾಜಕಾರಣಿಗಳಮತ್ತು ದೊಡ್ಡ ವ್ಯಕ್ತಿಗಳ 200 ಕೋಟಿ ಹಣವನ್ನೆಲ್ಲಾ ಲೂಟಿ ಮಾಡಿ ದೊಡ್ಡ ತಿಮಿಂಗಿಲವಾಗಿ ಬೆಳೆಯಿತು’ ಎಂದು ಟ್ರೇಲರ್‌ನಲ್ಲಿ ವಾಯ್ಸ್‌ ಓವರ್‌ ಕೇಳಿಸುತ್ತದೆ. ಕಾರ್ತಿ ಚಿತ್ರದಲ್ಲಿ ನಿರ್ವಹಿಸಿರುವ ಕಾಮಿಡಿ – ಆಕ್ಷನ್‌ ದೃಶ್ಯಗಳು ಟ್ರೇಲರ್‌ನಲ್ಲಿವೆ. ಜೊತೆಗೆ ನಾಯಕಿ ಅನು ಜೊತೆಯಲ್ಲಿ ಪ್ರೀತಿಯಲ್ಲಿ ಬೀಳುವ ಕಾರ್ತಿ ತಾನು ದರೋಡೆ ಮಾಡಿದ್ದ ಹಣದ ಹಿಂದೆ ಪೊಲೀಸರು ಮತ್ತು ರಾಜಕಾರಣಿಗಳು ಬಿದ್ದಾಗ ಯಾವ
ರೀತಿ ನಿಭಾಯಿಸುತ್ತಾನೆ ಎಂದು ತೋರಿಸಲಾಗಿದೆ.

ಟ್ರೇಲರ್‌ ಅನ್ನು ತನ್ನ X ಖಾತೆಯಲ್ಲಿ ಹಂಚಿಕೊಂಡಿರುವ ಕಾರ್ತಿ, ‘ನನ್ನ ಎಲ್ಲಾ ಪ್ರೀತಿಯ ಅಭಿಮಾನಿಗಳ ಅಪಾರ ಪ್ರೀತಿ, ಗೌರವಕ್ಕೆ ಕೃತಜ್ಞತೆಗಳು. ಟ್ರೇಲರ್‌ ಬಿಡುಗಡೆಯ ಕಾರ್ಯಕ್ರಮವನ್ನು ಆಯೋಜಿಸಿದ ನನ್ನ ಎಲ್ಲಾ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ನಿಮಗಾಗಿ ‘ಜಪಾನ್‌’ ಟ್ರೇಲರ್ ಇಲ್ಲಿದೆ. ಇಲ್ಲಿಂದ ದೀಪಾವಳಿ ಆಚರಣೆ ಆರಂಭವಾಗಲಿದೆ’ ಎಂದು ಕ್ಯಾಪ್ಶನ್‌ ನೀಡಿದ್ದಾರೆ. Dream Warrior Pictures ಬ್ಯಾನರ್‌ ಅಡಿಯಲ್ಲಿ ಎಸ್ ಆರ್ ಪ್ರಕಾಶ್ ಬಾಬು, ಎಸ್ ಆರ್ ಪ್ರಭು ಚಿತ್ರ ನಿರ್ಮಿಸಿದ್ದಾರೆ. ಜಿ ವಿ ಪ್ರಕಾಶ್‌ ಕುಮಾರ್‌ ಸಂಗೀತ, ಫಿಲೋಮಿನ್‌ ರಾಜ್‌ ಸಂಕಲನ ಚಿತ್ರಕ್ಕಿದೆ. ಅನು ಇಮ್ಯಾನುಯೆಲ್ ಚಿತ್ರದ ಹಿರೋಯಿನ್‌. ಸುನಿಲ್ ಮತ್ತು ವಿಜಯ್ ಮಿಲ್ಟನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here