ರವಿಪ್ರಸಾದ್ ನಟಿಸಿ, ನಿರ್ದೇಶಿಸಿರುವ ‘TRP ರಾಮ’ ಸಿನಿಮಾ ಈ ವಾರ (ನವೆಂಬರ್ 3) ತೆರೆಕಾಣುತ್ತಿದೆ. ಈ ಚಿತ್ರದೊಂದಿಗೆ 80, 90ರ ದಶಕಗಳ ಜನಪ್ರಿಯ ನಾಯಕನಟಿ ಮಹಾಲಕ್ಷ್ಮಿ ತೆರೆಗೆ ಮರಳುತ್ತಿದ್ದಾರೆ. ಗಾಯಕಿ, ನಟಿ ಸ್ಪರ್ಶ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದು, ರಾಜ್‌ಗುರು ಹೊಸಕೋಟೆ ಸಂಗೀತ ಚಿತ್ರಕ್ಕಿದೆ.
ರವಿ ಪ್ರಸಾದ್ ನಟಿಸಿ, ನಿರ್ದೇಶಿಸಿರುವ ‘TRP ರಾಮ’ ಎನ್ನುವ ವಿಶಿಷ್ಟ ಶೀರ್ಷಿಕೆಯ ಸಿನಿಮಾ ಈ ವಾರ (ನವೆಂಬರ್ 3) ತೆರೆಕಾಣುತ್ತಿದೆ. 80 – 90ರ ದಶಕಗಳ ಜನಪ್ರಿಯ ನಾಯಕನಟಿ ಮಹಾಲಕ್ಷ್ಮಿ ಈ ಚಿತ್ರದೊಂದಿಗೆ 32 ವರ್ಷಗಳ ನಂತರ ತೆರೆಗೆ ಮರಳುತ್ತಿದ್ದಾರೆ. ನೈಜ ಘಟನೆಗಳನ್ನೇ ಮುಖ್ಯ ಕಥಾವಸ್ತುವಾಗಿರಿಸಿಕೊಂಡು ಹೆಣೆದಿರುವ ಚಿತ್ರವಿದು. ಟ್ರೇಲರ್ ಮೂಲಕ ಸದ್ದು ಮಾಡಿದ್ದ ಈ ಸಿನಿಮಾತಂಡ ಸದ್ಯ ಪ್ರಚಾರ ಕೆಲಸಗಳಲ್ಲಿ ನಿರತವಾಗಿದೆ. ಇತ್ತೀಚೆಗಷ್ಟೇ ಸಿನಿಮಾದ ‘ಧರೆಗೆ ದೊಡ್ಡವಳು’ ಹಾಡು, A2 ಮ್ಯೂಸಿಕ್ YouTube ಚಾನೆಲ್‌ನಲ್ಲಿ ಬಿಡುಗಡೆಯಾಗಿತ್ತು. ರಾಜ್‌ಗುರು ಹೊಸಕೋಟೆ ಸಂಗೀತ ಸಂಯೋಜನೆಯ ಈ ಹಾಡಿಗೆ ಸಾಧು ಕೋಕಿಲ ದನಿಯಾಗಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿದ ನಟಿ ಮಹಾಲಕ್ಷೀ, ’32 ವರ್ಷ ಆದ್ಮೇಲೆ ಒಂದೊಳ್ಳೆ ತಂಡದ ಜೊತೆ ನಟಿಸಿರುವ ಖುಷಿ ಇದೆ. ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರತಂಡದವರು ನನ್ನನ್ನು ತಾಯಿಯಂತೆಯೇ ನೋಡಿಕೊಂಡರು. ಪ್ರಪಂಚದಲ್ಲಿ ಎರಡು ತರಹದ ಕುಟುಂಬ ಇರುತ್ತದೆ. ಒಂದು ನಾರ್ಮಲ್ ಕುಟುಂಬ, ಇನ್ನೊಂದು ಅಬ್‌ನಾರ್ಮಲ್ ಕುಟುಂಬ. ಅಬ್‌ನಾರ್ಮಲ್ ಫ್ಯಾಮಿಲಿ ಎದುರಿಸುವ ಕಷ್ಟವನ್ನು ಕಟ್ಟಿಕೊಡುವುದೇ ಸಿನಿಮಾದ ಕಥೆ. ಇದೊಂದು ಎಮೋಷನಲ್ ಸ್ಟೋರಿ. ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಆ ಪರಿಶ್ರಮಕ್ಕೆ ಬೆಲೆ ಸಿಗಲಿದೆ ಎಂಬ ನಂಬಿಕೆ ಇದೆ. ಸಮಾಜಕ್ಕೆ ಒಂದೊಳ್ಳೆ ಸಂದೇಶ ಕೊಡುವ ಸಿನಿಮಾ ಇದು’ ಎಂದಿದ್ದಾರೆ. ಚಿತ್ರದಲ್ಲಿ ನಟಿ ಸ್ಪರ್ಶ ಪತ್ರಕರ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. Ashutosh Pictures ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ಸುನಿಲ್ ಕಶ್ಯಪ್ ಸಂಕಲನ, ಗುರುಪ್ರಸಾದ್ ಛಾಯಾಗ್ರಹಣ, ರಾಕೇಶ್ ಆಚಾರ್ಯ ಹಿನ್ನೆಲೆ ಸಂಗೀತ, ಪ್ರವೀಣ್ ಸೂಡ ಸಂಭಾಷಣೆ ಚಿತ್ರಕ್ಕಿದೆ. ನವೆಂಬರ್ 3ರಂದು ಸಿನಿಮಾ ತೆರೆಕಾಣಲಿದೆ.