ಆರ್ಯ ಹೀರೋ ಆಗಿ ನಟಿಸಿರುವ ‘ಖಾದರ್ ಬಾಷಾ ಎಂದ್ರಾ ಮುತ್ತುರಾಮಲಿಂಗಂ’ ತಮಿಳು ಸಿನಿಮಾ ಇಂದಿನಿಂದ ZEE5ನಲ್ಲಿ ಸ್ಟ್ರೀಮ್ ಆಗುತ್ತಿದೆ. ಎಂ ಮುತ್ತಯ್ಯ ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಸಿನಿಮಾದಲ್ಲಿ ಎರಡು ಧರ್ಮಗಳ ನಡುವಿನ ಬಿಕ್ಕಟ್ಟು, ಅದನ್ನು ಪರಿಹರಿಸುವ ಕತೆಯಿದೆ.
‘ಖಾದರ್ ಬಾಷಾ ಎಂದ್ರಾ ಮುತ್ತುರಾಮಲಿಂಗಂ’ ತಮಿಳು ಸಿನಿಮಾ ZEE5ನಲ್ಲಿ ಇಂದಿನಿಂದ (ಜುಲೈ 7) ಸ್ಟ್ರೀಮ್ ಆಗುತ್ತಿದೆ. ಆರ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರವನ್ನು ಎಂ ಮುತ್ತಯ್ಯ ಬರೆದು ನಿರ್ದೇಶಿಸಿದ್ದಾರೆ. ನಿರ್ದೇಶಕರು ಗ್ರಾಮೀಣ ಪ್ರದೇಶದ ಹಿನ್ನೆಲೆಯಲ್ಲಿ ಕಥೆ ರಚಿಸಿದ್ದಾರೆ. ಎರಡು ಧರ್ಮಗಳ ನಡುವಿನ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ನಾಯಕ ಹೇಗೆ ಭಾಗಿಯಾಗುತ್ತಾನೆ ಎಂಬುದು ಚಿತ್ರದ ಕಥಾಹಂದರ. ಚಿತ್ರವನ್ನು ಜೀ ಸ್ಟುಡಿಯೋಸ್ ಮತ್ತು Drumsticks ಪ್ರೊಡಕ್ಷನ್ಸ್ ಅಡಿಯಲ್ಲಿ ಎಸ್ ಶಕ್ತಿವೇಲ್ ನಿರ್ಮಿಸಿದ್ದಾರೆ. ‘ಖಾದರ್ ಪಾತ್ರ ನನ್ನ ವೃತ್ತಿ ಬದುಕಿನಲ್ಲೇ ವಿಶೇಷವಾದ ಪಾತ್ರ. ಎಲ್ಲರ ಬದುಕಿಗೂ ಸ್ಫೂರ್ತಿಯಾಗಬಲ್ಲ ವ್ಯಕ್ತಿ ಆತ. ಜನರು ಈ ಸಿನಿಮಾ ವೀಕ್ಷಿಸಿ ಖಾದರ್ ವ್ಯಕ್ತಿತ್ವದಿಂದ ಸ್ಫೂರ್ತಿ ಪಡೆಯಲಿ’ ಎಂದು ತಮ್ಮ ಪಾತ್ರದ ಬಗ್ಗೆ ಹೇಳುತ್ತಾರೆ ಆರ್ಯ. ಸಿದ್ಧಿ ಇದ್ನಾನಿ, ಪ್ರಭು, ಮಧುಸೂಧನ್ ರಾವ್, ಆಡುಕಳಂ ನರೇನ್, ಕೆ.ಭಾಗ್ಯರಾಜ್ ಮತ್ತು ಸಿಂಗಂಪುಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಕಾಶ್ ಕುಮಾರ್ ಸಂಗೀತ, R ವೇಲ್‌ರಾಜ್ ಛಾಯಾಗ್ರಹಣ, ವೆಂಕಟ್ ರಾಜನ್ ಸಂಕಲನ ಚಿತ್ರಕ್ಕಿದೆ.