ವರುಣ್‌ ಧವನ್‌ ಮತ್ತು ಜಾನ್ವಿ ಕಪೂರ್‌ ಅಭಿನಯದ ‘ಬವಾಲ್‌’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ‘ದಂಗಲ್’ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ಸಿನಿಮಾ ಬಗ್ಗೆ ಬಾಲಿವುಡ್‌ ಭಾರಿ ನಿರೀಕ್ಷೆ ಹೊಂದಿದ್ದು, ಟೀಸರ್‌ ಕೂಡ ವಿಶೇಷವಾಗಿದೆ. ನಿರ್ದೇಶಕರು ಯುದ್ಧ ಮತ್ತು ಪ್ರೀತಿಯನ್ನು ಬೆಸೆದು ಕತೆ ಮಾಡಿರುವ ಸೂಚನೆ ಸಿಗುತ್ತದೆ.

ವರುಣ್ ಧವನ್, ಜಾನ್ವಿ ಕಪೂರ್ ಅಭಿನಯದ ‘ಬವಾಲ್’ ಹಿಂದಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ‘ದಂಗಲ್’ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ಚಿತ್ರವು ಹೆಚ್ಚಿನ ನಿರೀಕ್ಷೆಯೊಂದಿಗೆ ಭರವಸೆ ಮೂಡಿಸಿದೆ. ಇದು ಇವರ ಅತ್ಯಂತ ದುಬಾರಿ ಚಿತ್ರ ಎನ್ನಲಾಗಿದ್ದು, ಟೀಸರ್‌ನಲ್ಲಿ ಯುದ್ಧದ ನಡುವೆ ನಡೆಯುವ ದುರಂತ ಪ್ರೇಮಕಥೆಯ ಸುಳಿವು ಸಿಗುತ್ತದೆ. ಜಾನ್ವಿ ಕಪೂರ್ ಮತ್ತು ವರುಣ್ ಧವನ್ ಪರಸ್ಪರ ಭೇಟಿಯಾಗುವುದರೊಂದಿಗೆ ಟೀಸರ್‌ ತೆರೆದುಕೊಳ್ಳುತ್ತದೆ. ನಂತರ ಅವರಿಬ್ಬರು ಸಂಬಂಧದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿ ವಿದಾಯ ಹೇಳುತ್ತಾರೆ. ಟೀಸರ್‌ನಲ್ಲಿ ಹಾಡಿನೊಟ್ಟಿಗೆ ಜಾನ್ವಿಯವರ ಧ್ವನಿ ಕೇಳಿಬರುತ್ತದೆ. ಸಾಜಿದ್ ನಾಡಿಯಾದ್‌ವಾಲಾ ಚಿತ್ರವನ್ನು ನಿರ್ಮಿಸಿದ್ದಾರೆ. ಪ್ಯಾರಿಸ್, ಬರ್ಲಿನ್, ಪೋಲೆಂಡ್, ಆಮ್‌ಸ್ಟರ್‌ಡ್ಯಾಮ್‌, ಕ್ರಾಕೋವ್, ವಾರ್ಸಾ ಸೇರಿದಂತೆ ಭಾರತದ ಲಕ್ನೋ ಮತ್ತಿತರೆಡೆ ಚಿತ್ರೀಕರಿಸಲಾಗಿದೆ. ಜುಲೈ 21ರಂದು Amazon Primeನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

Previous article‘ಖಾದರ್‌ ಬಾಷಾ ಎಂದ್ರಾ ಮುತ್ತುರಾಮಲಿಂಗಂ’ | ZEE5ನಲ್ಲಿ ಆರ್ಯ ಸಿನಿಮಾ ಇಂದಿನಿಂದ
Next articleಸಿದ್ದಾರ್ಥ್‌ ರೊಮ್ಯಾಂಟಿಕ್‌ – ಆಕ್ಷನ್‌ ‘ಟಕ್ಕರ್‌’ | Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ ಸಿನಿಮಾ

LEAVE A REPLY

Connect with

Please enter your comment!
Please enter your name here