ಆತೀಶ್‌ ಕಪಾಡಿಯಾ ರಚಿಸಿ, ನಿರ್ದೇಶಿಸಿರುವ ‘ಖಿಚಡಿ 2’ ಫ್ಯಾಮಿಲಿ – ಕಾಮಿಡಿ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಸುಪ್ರಿಯಾ ಪಾಠಕ್‌, ರಾಜೀವ್‌ ಮೆಹ್ತಾ, ಅನಂಗ್‌ ದೇಸಾಯಿ, ವಂದನಾ ಪಾಠಕ್‌ ನಟಿಸಿರುವ ಸಿನಿಮಾ ಇದೇ ವರ್ಷ ದೀಪಾವಳಿಗೆ ಬಿಡುಗಡೆಯಾಗಲಿದೆ.

2010ರಲ್ಲಿ ಬಿಡುಗಡೆಯಾಗಿದ್ದ ಕಾಮಿಡಿ – ಡ್ರಾಮಾ ‘ಖಿಚಡಿ’ ಚಿತ್ರದ ಯಶಸ್ಸಿನ ನಂತರ ಈಗ ಈ ಚಿತ್ರದ ಎರಡನೇ ಭಾಗ ತೆರೆಯ ಮೇಲೆ ಬರಲಿದೆ. ಚಿತ್ರದಲ್ಲಿನ ಫರೇಖ್ ಕುಟುಂಬ ಮತ್ತೆ ಮನರಂಜನೆ ನೀಡಲು ಸಜ್ಜಾಗಿದ್ದು, ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಆತೀಶ್‌ ಕಪಾಡಿಯಾ ನಿರ್ದೇಶನ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಸುಪ್ರಿಯಾ ಪಾಠಕ್, ರಾಜೀವ್ ಮೆಹ್ತಾ, ಅನಂಗ್ ದೇಸಾಯಿ, ವಂದನಾ ಪಾಠಕ್, ಜಮ್ನಾದಾಸ್ ಮಜೆಥಿಯಾ ನಟಿಸಿದ್ದಾರೆ. 2000ರ ದಶಕದಲ್ಲಿ ಸ್ಟಾರ್‌ಪ್ಲಸ್‌ನಲ್ಲಿ ಪ್ರಸಾರವಾದ ‘ಖಿಚಡಿ’ ಸಿಟ್ಕಾಮ್‌ TV ಸರಣಿಯು, ಮುಂಬೈನಲ್ಲಿ ವಾಸಿಸುತ್ತಿದ್ದ ಗುಜರಾತಿ ಅವಿಭಕ್ತ ಕುಟುಂಬದ ಸಂಬಂಧಗಳ ಗೋಜಲುಗಳನ್ನು ಒಳಗೊಂಡಿತ್ತು. ಮೊದಲ ಪಾರ್ಟ್‌ನಲ್ಲಿ ಅಭಿನಯಿಸಿದ್ದ ಪಾತ್ರಗಳು ಇಲ್ಲಿ ಪುನಾರಾವರ್ತನೆಗೊಂಡಿವೆ. ಹಂಸಾ ಪಾತ್ರ ನಿರ್ವಹಿಸಿರುವ ಸುಪ್ರಿಯಾ ಪಾಠಕ್, ಬಾಬೂಜಿ ಪಾತ್ರದಲ್ಲಿ ಅನಂಗ್ ದೇಸಾಯಿ, ಪ್ರಫುಲ್ ಆಗಿ ರಾಜೀವ್ ಮೆಹ್ತಾ, ಜಯಶ್ರೀ ಪಾತ್ರದಲ್ಲಿ ವಂದನಾ ಪಾಠಕ್, ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಾಲಿವುಡ್ ನಿರ್ದೇಶಕಿ ಮತ್ತು ನೃತ್ಯ ಸಂಯೋಜಕಿ ಫರ್ಹಾ ಖಾನ್ ಅವರ ಪರಿಚಯವನ್ನು ಟೀಸರ್ ಒಳಗೊಂಡಿದೆ. ಚಿತ್ರದ ಅತಿಥಿ ಪಾತ್ರದಲ್ಲಿ ಕೀರ್ತಿ ಕುಲ್ಹಾರಿ, ಫರ್ಹಾ ಖಾನ್ ಕುಂದರ್, ಅನಂತ್ ವಿಧಾತ್, ಪ್ರತೀಕ್ ಗಾಂಧಿ, ಪರೇಶ್ ಗಣತ್ರ ಮತ್ತು ಕಿಕು ಶಾರದಾ ಕಾಣಿಸಿಕೊಂಡಿದ್ದಾರೆ. Hats Off Productions Ltd ಸಿನಿಮಾ ನಿರ್ಮಿಸಿದ್ದು, ಇದೇ ದೀಪಾವಳಿಗೆ ಸಿನಿಮಾ ತೆರೆಕಾಣಲಿದೆ.

Previous articleAmazon Primeನಲ್ಲಿ Rapper AP ಧಿಲ್ಲೋನ್‌ ಸಾಕ್ಷ್ಯಚಿತ್ರ | ಜೇಯ್‌ ಅಹಮದ್‌ ನಿರ್ದೇಶನ
Next article‘ಯಾರಿಯಾನ್‌2’ ಟೀಸರ್‌ | ಯಸ್‌ ದಾಸ್‌ – ದಿವ್ಯಾ ಖೋಸ್ತಾ ನಟನೆಯ ಹಿಂದಿ ಸಿನಿಮಾ

LEAVE A REPLY

Connect with

Please enter your comment!
Please enter your name here