ಖ್ಯಾತ Rapper AP ಧಿಲ್ಲೋನ್‌ ಬದುಕು – ಸಾಧನೆ ಹಿಡಿದಿಡುವ ‘AP Dhillon: First of A Kind’ ಸಾಕ್ಷ್ಯಚಿತ್ರ Amazon Primeನಲ್ಲಿ ಆಗಸ್ಟ್‌ 18ರಿಂದ ಸ್ಟ್ರೀಮ್‌ ಆಗಲಿದೆ. ಜೇಯ್‌ ಅಹಮದ್‌ ನಿರ್ದೇಶಿಸಿರುವ ಸಾಕ್ಷ್ಯಚಿತ್ರ ನಾಲ್ಕು ಎಪಿಸೋಡ್‌ಗಳಲ್ಲಿ ಮೂಡಿಬರಲಿದೆ.

ಪಂಜಾಬಿ – ಕೆನಡಿಯನ್ Rapper A P ಧಿಲ್ಲೋನ್‌ ಬದುಕು – ಸಾಧನೆ ಆಧರಿಸಿದ ‘AP Dhillon: First of A Kind’ ಸಾಕ್ಷ್ಯಚಿತ್ರ Amazon Primeನಲ್ಲಿ ಸ್ಟ್ರೀಮ್‌ ಆಗಲಿದೆ. ಜೇಯ್‌ ಅಹಮದ್‌ ನಿರ್ದೇಶನದ ಸಾಕ್ಷ್ಯಚಿತ್ರ ನಾಲ್ಕು ಎಪಿಸೋಡ್‌ಗಳನ್ನು ಒಳಗೊಂಡಿದೆ. ಪ್ರತಿಭೆ, ಪರಿಶ್ರಮದಿಂದ ಉನ್ನತ ಸ್ಥಾನಕ್ಕೇರಿದ ಜಾಗತಿಕ ಸಂಗೀತದ ಐಕಾನ್‌, Rapper A P ಧಿಲ್ಲೋನ್‌ ಅವರ ಜೀವನದ ಸಾಧನೆ ಹಾಗೂ ಅವರ ಶ್ರಮದ ಹಾದಿಯನ್ನು ಸಾಕ್ಷ್ಯಚಿತ್ರ ಬಿಚ್ಚಿಡಲಿದೆ. ಇವರು ಆಧುನಿಕ ಪೀಳಿಗೆಯ ಪ್ರತಿಭಾವಂತ ಕಲಾವಿದರಲ್ಲೊಬ್ಬರು. ಆರಂಭದಲ್ಲಿ ಪಂಜಾಬ್‌ನ ಒಂದು ಸಣ್ಣ ಹಳ್ಳಿಯಿಂದ ತಮ್ಮ ವೃತ್ತಿಜೀವನ ಆರಂಭಿಸಿದ ಧಿಲ್ಲೋನ್‌ ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಟ್‌ ಗೀತೆಗಳನ್ನು ನೀಡಿ ನಂಬರ್‌ 1 ಸ್ಥಾನ ಗಿಟ್ಟಿಸಿಕೊಂಡವರು. ಇವರಿಗೆ ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. Prime Video ತನ್ನ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡು ಸರಣಿಯ ಟೀಸರ್‌ ಅನ್ನು ಸಹ ಬಿಡುಗಡೆ ಮಾಡಿದೆ. ‘AP Dhillon: First of A Kind’ out on August 18th worldwide #APDhillonOnPrime, series preview out now’ ಎನ್ನುವ ಒಕ್ಕಣಿ ಇದೆ.

‘ಈ ಸರಣಿಯು ವೀಕ್ಷಕರನ್ನು ಸೆಳೆಯುವುದರೊಟ್ಟಿಗೆ ಯುವ ಪೀಳಿಗೆಗೆ, ಅವರ ಕನಸುಗಳನ್ನು ನನಸಾಗಿಸಿಕೊಳ್ಳಲು ಸ್ಫೂರ್ತಿಯಾಗುವ ಅಂಶಗಳನ್ನು ಹೊಂದಿದೆ’ ಎಂದಿದೆ Prime Video. Wild Sheep Content ಸಹಯೋಗದೊಂದಿಗೆ Passion Pictures ಸಾಕ್ಷ್ಯಚಿತ್ರ ನಿರ್ಮಿಸಿದೆ. ‘ನಾನು ಗುರುದಾಸ್‌ಪುರದಿಂದ ಕೆನಡಾಕ್ಕೆ ಪ್ರಯಾಣವನ್ನು ಪ್ರಾರಂಭಿಸಿದಾಗ, ನನ್ನ ಕಥೆಯನ್ನು ಹೀಗೆ ಒಂದು ದಿನ ಹೇಳುತ್ತೇನೆಂದು ಎಂದಿಗೂ ಊಹಿಸಿರಲಿಲ್ಲ. ನಾವು ರಚಿಸುತ್ತಿರುವ ಸಂಗೀತದ ಪ್ರಕಾರಕ್ಕೆ ಪ್ರಪಂಚದಾದ್ಯಂತ ಪ್ರೀತಿ ಮತ್ತು ಮನ್ನಣೆ ಪಡೆದಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಜನರಿಗೆ ಸ್ಫೂರ್ತಿ ನೀಡುವ ಸಂಗೀತವನ್ನು ರಚಿಸುವುದು ನನ್ನ ಕನಸು’ ಎಂದು ಧಿಲ್ಲೋನ್ ತಮ್ಮಅಭಿಪ್ರಾಯ ಹಂಚಿಕೊಂಡಿದ್ದಾರೆ.

Previous articleರೋಹಿತ್‌ ಶೆಟ್ಟಿ ‘Singham Again’ | ದೇವಗನ್‌ ಸಹೋದರಿಯಾಗಿ ದೀಪಿಕಾ ಪಡುಕೋಣೆ
Next article‘ಖಿಚಡಿ 2’ ಟೀಸರ್‌ | ಆತೀಶ್‌ ಕಪಾಡಿಯಾ ನಿರ್ದೇಶನದ ಹಿಂದಿ ಕಾಮಿಡಿ ಸಿನಿಮಾ

LEAVE A REPLY

Connect with

Please enter your comment!
Please enter your name here