ರಾಧಿಕಾ ರಾವ್‌ ಮತ್ತು ವಿನಯ್‌ ಸಪ್ರು ನಿರ್ದೇಶನದ ‘ಯಾರಿಯಾನ್‌ 2’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. 2014ರಲ್ಲಿ ತೆರೆಕಂಡು ಯಶಸ್ವಿಯಾಗಿದ್ದ ‘ಯಾರಿಯಾನ್‌’ ಸೀಕ್ವೆಲ್‌ ಇದು. ದಿವ್ಯಾ ಖೋಸ್ಲಾ ಮತ್ತು ಯಶ್‌ ದಾಸ್‌ ಗುಪ್ತಾ ನಟನೆಯ ಸಿನಿಮಾ ಅಕ್ಟೋಬರ್‌ 20ರಂದು ತೆರೆಕಾಣಲಿದೆ.

2014ರ ಜನವರಿಯಲ್ಲಿ ತೆರೆಕಂಡಿದ್ದ ‘ಯಾರಿಯಾನ್‌’ ಸಿನಿಮಾ ಯಶಸ್ಸು ಕಂಡಿತ್ತು. ಒಂಬತ್ತು ವರ್ಷಗಳ ನಂತರ ಈ ಚಿತ್ರದ ಸೀಕ್ವೆಲ್‌ ‘ಯಾರಿಯಾನ್‌ 2’ ತೆರೆಗೆ ಬರುತ್ತಿದೆ. ರಾಧಿಕಾ ರಾವ್‌ ಮತ್ತು ವಿನಯ್‌ ಸಪ್ರು ನಿರ್ದೇಶನದ ಚಿತ್ರದ ಮುಖ್ಯಭೂಮಿಕೆಯಲ್ಲಿ ದಿವ್ಯಾ ಖೋಸ್ಲಾ ಕುಮಾರ್ ಮತ್ತು ಯಶ್ ದಾಸ್ ಗುಪ್ತಾ ನಟಿಸಿದ್ದಾರೆ. ಸಿನಿಮಾದ ಟೀಸರ್‌, ಸೋದರ ಸಂಬಂಧಿಗಳ (Cousins) ನಡುವಿನ ಆತ್ಮೀಯತೆಯನ್ನು ತೋರಿಸಿದೆ. ಈ ಬಂಧ ಶುದ್ಧ ಸ್ನೇಹಕ್ಕಿಂತ ಯಾವುದರಲ್ಲೂ ಕಡಿಮೆಯಿಲ್ಲದ ಸಲುಗೆ, ಪ್ರೀತಿ, ತುಂಟತನ ಇವೆಲ್ಲವನ್ನೂ ಒಳಗೊಂಡಿರುತ್ತದೆ ಎನ್ನುವುದು ಸಾರಾಂಶ. ವಿವಾಹ ಆಚರಣೆ, ನಂತರ ಅವರ ಮಧ್ಯೆ ಏರ್ಪಡುವ ಮನಸ್ತಾಪ ಕೊನೆಯಲ್ಲಿ ಅವರಿಗೆ ತಿಳಿಯುವ ಸಂಬಂಧಗಳ ಮೌಲ್ಯ, ಒಬ್ಬರಿಗೊಬ್ಬರು ಬಿಟ್ಟುಕೊಡದ ನಂಟನ್ನು ನಿರ್ದೇಶಕರು ತೋರಿಸಿದ್ದಾರೆ. ಟೀಸರ್‌ನ ಕೊನೆಯಲ್ಲಿ ‘ಸನ್ನಿ ಸನ್ನಿ’ ಹಾಡು ‌’ಯಾರಿಯಾನ್’ ಚಿತ್ರದ ‘ಪಾನಿ ಪಾನಿ’ ಹಾಡನ್ನು ನೆನಪಿಸುತ್ತದೆ. ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ದಿವ್ಯಾ ಖೋಸ್ಲಾ ಕುಮಾರ್ ಮತ್ತು ಆಯುಷ್ ಮಹೇಶ್ವರಿ ನಿರ್ಮಿಸಿರುವಸಿನಿಮಾ ಇದೇ ವರ್ಷ ಅಕ್ಟೋಬರ್‌ 20ರಂದು ತೆರೆಕಾಣಲಿದೆ.

Previous article‘ಖಿಚಡಿ 2’ ಟೀಸರ್‌ | ಆತೀಶ್‌ ಕಪಾಡಿಯಾ ನಿರ್ದೇಶನದ ಹಿಂದಿ ಕಾಮಿಡಿ ಸಿನಿಮಾ
Next articleಎಡಗೈ ಬಳಸುವವರಿಗೆ ವಿಶೇಷ ಹೆಲ್ಮೆಟ್‌ | ದಿಗಂತ್‌ ಸಿನಿಮಾ ಕಾನ್ಸೆಪ್ಟ್‌ ಸ್ಫೂರ್ತಿ

LEAVE A REPLY

Connect with

Please enter your comment!
Please enter your name here