ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿಂದಿ ಸಿನಿಮಾ ‘ಖೋಸ್ಲಾ ಕಾ ಘೋಸ್ಲಾ’ ಕನ್ನಡ, ತೆಲುಗು, ಮರಾಠಿಗೆ ರೀಮೇಕ್‌ ಆಗಲಿದೆ. ದಿಬಾಕರ್‌ ಬ್ಯಾನರ್ಜಿ ನಿರ್ದೇಶನದ ಚಿತ್ರವನ್ನು ಕನ್ನಡದಲ್ಲಿ ಆದರ್ಶ್‌ ಈಶ್ವರಪ್ಪ ನಿರ್ದೇಶಿಸಲಿದ್ದಾರೆ.

ದಿಬಾಕರ್ ಬ್ಯಾನರ್ಜಿ ನಿರ್ದೇಶನದ ‘ಖೋಸ್ಲಾ ಕಾ ಘೋಸ್ಲಾ’ ಹಿಂದಿ ಚಲನಚಿತ್ರ ಕನ್ನಡ, ತೆಲುಗು ಮತ್ತು ಮರಾಠಿಯಲ್ಲಿ ರೀಮೇಕ್ ಆಗಲಿದೆ. ಈ ಹಾಸ್ಯ, ಭಾವನಾತ್ಮಕ ಸಿನಿಮಾದಲ್ಲಿ ಅನುಪಮ್‌ ಖೇರ್‌ ಮತ್ತು ಬೊಮ್ಮನ್‌ ಇರಾನಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. 2006ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಹಿಂದಿಯಲ್ಲಿ ‘ಅತ್ಯುತ್ತಮ ಚಲನಚಿತ್ರ’ಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿತ್ತು. ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಪಡೆದಿದ್ದ ಈ ಚಿತ್ರವು ಮಧ್ಯಮವರ್ಗದ ದೆಹಲಿ ಕುಟುಂಬದಲ್ಲಿ ನಡೆಯುವ ಕಥಾಹಂದರ. ಸಿನಿಮಾದ ಚಿತ್ರಕಥೆಯನ್ನು ಜೈದೀಪ್ ಸಾಹ್ನಿ ಬರೆದಿದ್ದಾರೆ. ರಣವೀರ್ ಶೋರೆ, ಪರ್ವಿನ್ ದಬಾಸ್, ಕಿರಣ್ ಜುನೇಜಾ ಮತ್ತು ತಾರಾ ಶರ್ಮಾ ಇತರ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

‘ಭಿನ್ನ’ (2019) ಮತ್ತು ‘ಶುದ್ಧಿ’ (2017) ಚಿತ್ರಗಳ ನಿರ್ದೇಶಕ ಆದರ್ಶ್ ಈಶ್ವರಪ್ಪ ಕನ್ನಡದಲ್ಲಿ, ವಿನೋದ್ ಅನಂತೋಜು ತೆಲುಗಿನಲ್ಲಿ, ಮರಾಠಿ ಅವತರಣಿಕೆಯನ್ನು ಕೇದಾರ್ ಶಿಂಧೆ ನಿರ್ದೇಶಿಸಲಿದ್ದಾರೆ. ಈ ಮಾಹಿತಿಯನ್ನು ‘ಬುಸಾನ್ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್‌’ನ ಏಷ್ಯನ್ ಕಂಟೆಂಟ್ಸ್ ಮತ್ತು ಫಿಲ್ಮ್ ಮಾರ್ಕೆಟ್‌ನ ವಿಭಾಗಗಳಲ್ಲಿ ಘೋಷಿಸಲಾಗಿದೆ. ಚಿತ್ರದಲ್ಲಿ ಕಮಲ್ ಖೋಸ್ಲಾ(ಅನುಪಮ್‌ ಖೇರ್) ಭೂಮಿಯನ್ನು ಖುರಾನಾ ಎಂಬ ಕೊಲೆಗಡುಕ ವಶಪಡಿಸಿಕೊಳ್ಳುತ್ತಾನೆ. ತಮ್ಮ ಭೂಮಿಯನ್ನು ಹಿಂಪಡೆಯಲೇಬೇಕು ಎಂಬ ಪ್ರಯತ್ನದಲ್ಲಿ ಖೋಸ್ಲಾನ ಮಗ ಚೆರ್ರಿ ಮತ್ತು ಅವನ ಸ್ನೇಹಿತರು ವಂಚಕನಿಂದ ಭೂಮಿಯನ್ನು ಹಿಂಪಡೆಯಲು ಒಂದು ಯೋಜನೆಯೊಂದಿಗೆ ಶಸ್ತ್ರಸಹಿತ ಸಜ್ಜಾಗುತ್ತಾರೆ. ‘ಖೋಸ್ಲಾ ಕಾ ಘೋಸ್ಲಾ’ ಚಿತ್ರವು ಈ ಹಿಂದೆ ತಮಿಳಿನಲ್ಲಿ ‘ಪೊಯ್ ಸೊಲ್ಲ ಪೋರಮ್’ ಶೀರ್ಷಿಕೆಯಡಿ ರೀಮೇಕ್ ಆಗಿತ್ತು. ಈ ಚಿತ್ರವನ್ನು ಎ ಎಲ್ ವಿಜಯ್ ನಿರ್ದೇಶಿಸಿದ್ದು, ಕಾರ್ತಿಕ್ ಕುಮಾರ್, ನೆಡುಮುಡಿ ವೇಣು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

LEAVE A REPLY

Connect with

Please enter your comment!
Please enter your name here