ವಿಪುಲ್‌ ಅಮೃತ್‌ ಲಾಲ್‌ ಷಾ ಮತ್ತು ಮೊಜೇಝ್‌ ಸಿಂಗ್‌ ನಿರ್ದೇಶನದ ಮೆಡಿಕಲ್‌ ಥ್ರಿಲ್ಲರ್‌ ‘ಹ್ಯೂಮನ್‌’ ವೆಬ್‌ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. ಶೆಫಾಲಿ ಷಾ, ಕೀರ್ತಿ ಕುಲ್ಹರಿ ಅಭಿನಯದ ಸರಣಿ ಔಷಧ ಪ್ರಯೋಗದ ಹಿನ್ನೆಲೆಯ ಥ್ರಿಲ್ಲರ್‌ ಕಥಾವಸ್ತು ಹೊಂದಿದೆ.

ಮೆಡಿಕಲ್‌ ಥ್ರಿಲ್ಲರ್‌ ಜಾನರ್‌ನಲ್ಲಿ ಇದೊಂದು ವಿಶಿಷ್ಟ ಕತೆ. ಭಾರತದಂತಹ ದೇಶದಲ್ಲಿ ಮನುಷ್ಯರ ಮೇಲೆ ಹೊಸ ಔಷಧಗಳ ಪ್ರಯೋಗ ಹೇಗಾಗುತ್ತದೆ? ಈ ಪ್ರಯೋಗಕ್ಕೆ ಒಳಪಡುವವರಿಗೆ ಔಷಧದ ಸೈಡ್‌ಎಫೆಕ್ಟ್‌ಗಳ ಬಗ್ಗೆ ಅರಿವಿರುತ್ತದೆಯೇ? ಇದಕ್ಕೆ ಸಂಬಂಧಿಸಿದಂತೆ ಕಾನೂನು ಏನು ಹೇಳುತ್ತದೆ? ಹೀಗೆ ಇಂತಹ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಿದೆ ‘ಹ್ಯೂಮನ್‌’ ವೆಬ್‌ ಸರಣಿ. ಅಮೃತ್‌ ಲಾಲ್‌ ಷಾ ಮತ್ತು ಮೊಜೇಝ್‌ ಸಿಂಗ್‌ ನಿರ್ದೇಶನದ ಮೆಡಿಕಲ್‌ ಥ್ರಿಲ್ಲರ್‌ನಲ್ಲಿ ಶೆಫಾಲಿ ಷಾ, ಕೀರ್ತಿ ಕುಲ್ಹರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿಷ್ಠಿತ ‘ಮಂಥನ್‌’ ಆಸ್ಪತ್ರೆಯ ಒಡತಿ 45ರ ಹರೆಯದ ಡಾ.ಗೌರಿ ನಾಥ್‌ (ಶೆಫಾಲಿ ಷಾ) ಮತ್ತು ಡಾ.ಸೈರಾ ಸಬರ್‌ವಾಲ್‌ (ಕೀರ್ತಿ ಕುಲ್ಹರಿ) ಪ್ರಮುಖ ಪಾತ್ರಗಳು. ‘ಮರ್ದಾನಿ 2’ ಹಿಂದಿ ಚಿತ್ರದಲ್ಲಿ ಗಮನಸೆಳೆದಿದ್ದ ವಿಶಾಲ್‌ ಜೆತ್ವಾ ಅವರು ವಿಶೇಷ ಪಾತ್ರದಲ್ಲಿದ್ದಾರೆ.

ಸರಣಿಯ ಅಫಿಷಿಯಲ್‌ ಸಿನಾಪ್ಸಿಸ್‌ ಹೀಗೆ ಹೇಳುತ್ತದೆ – “ಭಾರತದ ದೊಡ್ಡ ಔಷಧ ತಯಾರಿಕೆ ಸಂಸ್ಥೆಯಲ್ಲಿ ಹೊಸ ಔಷಧವೊಂದರ ಟೆಸ್ಟಿಂಗ್‌ ನಡೆದಿರುತ್ತದೆ. 35ರ ಹರೆಯದ ಡಾ.ಸೈರಾ ಸಬರ್‌ವಾಲ್‌ ಭೋಪಾಲ್‌ನ ಪ್ರಮುಖ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರುತ್ತಾರೆ. ಅಲ್ಲಿ ಆಕೆಗೆ 45ರ ಹರೆಯದ ಡಾ.ಗೌರಿ ನಾಥ್‌ ಮೆಂಟರ್‌. ಇವರಿಬ್ಬರೂ ನೂತನ ಔಷಧಕ್ಕೆ ಸಂಬಂಧಿಸಿದಂತೆ ಶ್ರದ್ಧೆಯಿಂದ ಕೆಲಸ ಮಾಡುತ್ತಿರುತ್ತಾರೆ. ಆಗ ಸಂಭವಿಸುವ ಆಕಸ್ಮಿಕಗಳು ಅವರ ಬದುಕಿಗೆ ಮಹತ್ವದ ತಿರುವಾಗುತ್ತವೆ. ಸಂದಿಗ್ಧಕ್ಕೆ ಸಿಲುಕುವ ಅವರು ಏನೆಲ್ಲಾ ಕಷ್ಟಗಳಿಗೀಡಾಗುತ್ತಾರೆ? ಈ ಸಿಕ್ಕುಗಳಿಂದ ಅವರು ಹೊರಗೆ ಬರುವುದು ಹೇಗೆ? ವೈದ್ಯಕೀಯ ಜಗತ್ತಿನ ಕ್ರೈಮ್‌ಗಳು ಹೇಗೆಲ್ಲಾ ಇರುತ್ತವೆ? ಎನ್ನುವ ಅಂಶಗಳು ಸರಣಿಯಲ್ಲಿವೆ” 2022ರ ಜನವರಿ 14ರಿಂದ ಸರಣಿ ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here