ದುಲ್ಕರ್‌ ಸಲ್ಮಾನ್‌ ಅಭಿನಯದ ‘ಕಿಂಗ್‌ ಆಫ್‌ ಕೋಥಾ’ ಮಲಯಾಳಂ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಅಭಿಲಾಷ್‌ ಜೋಷಿ ನಿರ್ದೇಶನದ ಈ ಸಿನಿಮಾದ ನಾಯಕಿ ಐಶ್ವರ್ಯ ಲಕ್ಷ್ಮಿ. ಮೂಲ ಮಲಯಾಳಂ ಸೇರಿದಂತೆ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಆಗಸ್ಟ್‌ 24ರಂದು ಸಿನಿಮಾ ತೆರೆಕಾಣಲಿದೆ.

ಅಭಿಲಾಷ್‌ ಜೋಷಿ ನಿರ್ದೇಶನದ ಗ್ಯಾಂಗ್‌ಸ್ಟರ್‌ – ಡ್ರಾಮಾ ‘ಕಿಂಗ್‌ ಆಫ್‌ ಕೋಥಾ’ ಮಲಯಾಳಂ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಮಲಯಾಳಂನಲ್ಲಿ ಮೋಹನ್‌ ಲಾಲ್‌, ತಮಿಳಿನಲ್ಲಿ ಸೂರ್ಯ ಟ್ರೈಲರ್‌ ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭಹಾರೈಸಿದ್ದಾರೆ. ಭೂಗತ ಜಗತ್ತಿನ ಕಥಾಹಂದರ. ದುಲ್ಕಲ್‌ ಸಲ್ಮಾನ್ ನಿರ್ವಹಿಸಿರುವ ‘ರಾಜಾ’ ಪಾತ್ರವನ್ನು ಪರಿಚಯಿಸುವುದರೊಂದಿಗೆ ಟ್ರೈಲರ್‌ ಆರಂಭವಾಗುತ್ತದೆ. ಅವನ ಬಾಲ್ಯದ ಕನಸು ಕೋಥಾ ಪಟ್ಟಣವನ್ನು ಆಳುವುದು. ಆದರೆ ಇದಕ್ಕೆ ಅವನ ಪ್ರೀತಿಯೇ ಮುಳುವಾಗುತ್ತದೆ. ಇದರಿಂದ ಅವನು ಕೋಥಾ ಪಟ್ಟಣವನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಾನೆ.

‘ರಾಜ’ನನ್ನು ಕೆಳಗಿಳಿಸಲು ಶತ್ರಗಳ ದಂಡು ಸರತಿ ಸಾಲಿನಲ್ಲಿ ನಿಂತಿರುತ್ತದೆ. ಅವನು ಎಲ್ಲರೊಟ್ಟಿಗೆ ಹೋರಾಡಿ ಪಟ್ಟಣವನ್ನು ಉಳಿಸಿಕೊಳ್ಳುತ್ತಾನೆಯೇ ಎನ್ನುವುದರ ಸುತ್ತ ಕತೆ ಹೆಣೆದುಕೊಂಡಿದೆ. ಮಾಸ್‌ ಎಂಟರ್‌ಟೇನರ್‌ ಚಿತ್ರವನ್ನು ಅಭಿಲಾಷ್ ಜೋಶಿ ನಿರ್ದೇಶಿಸಿದ್ದಾರೆ. ದುಲ್ಕರ್ ಸಲ್ಮಾನ್ ಅವರಿಗೆ ನಾಯಕಿಯಾಗಿ ಐಶ್ವರ್ಯ ಲಕ್ಷ್ಮಿ ನಟಿಸಿದ್ದಾರೆ. ಶಬೀರ್ ಕಲ್ಲರಕ್ಕಲ್, ಚೆಂಬನ್ ವಿನೋದ್ ಜೋಸ್, ನೈಲಾ ಉಷಾ, ಶಾಂತಿ ಕೃಷ್ಣ ಇತರೆ ಪ್ರಮುಖ ಪಾತ್ರಧಾರಿಗಳು. ವೇಫೇರರ್ ಫಿಲ್ಮ್ಸ್ ಮತ್ತು ಝೀ ಸ್ಟುಡಿಯೋಸ್ ಚಿತ್ರ ನಿರ್ಮಿಸಿದೆ. ಮೂಲ ಮಲಯಾಳಂ ಸೇರಿದಂತೆ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಆಗಸ್ಟ್‌ 24ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here