ಕಿರುತೆರೆಯ ಜನಪ್ರಿಯ ನಟ ಕಿರಣ್‌ ರಾಜ್‌ ಅಭಿನಯದ ನೂತನ ಆಕ್ಷನ್‌ – ಡ್ರಾಮಾ ಸಿನಿಮಾ ‘ಶೇರ್‌’ ಸೆಟ್ಟೇರಿದೆ. ಪ್ರಸಿದ್ಧ್‌ ನಿರ್ದೇಶನದ ಚಿತ್ರದ ನಾಯಕಿ ಸುರೇಖ.

ಇತ್ತೀಚೆಗೆ ‘ಬಡ್ಡೀಸ್‌’ ಚಿತ್ರದೊಂದಿಗೆ ಬೆಳ್ಳಿತೆರೆಯಲ್ಲಿ ಹೀರೋ ಆದ ಕಿರಣ್‌ ರಾಜ್‌ ಅಭಿನಯದ ‘ಭರ್ಜರಿ ಗಂಡು’ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ. ಇದಕ್ಕೆ ಮುನ್ನವೇ ‘ಭರ್ಜರಿ ಗಂಡು’ ಚಿತ್ರದ ನಿರ್ದೇಶಕ ಪ್ರಸಿದ್ಧ್‌ ಅವರ ಸಾರಥ್ಯದಲ್ಲೇ ‘ಶೇರ್‌’ ಸಿನಿಮಾ ಸೆಟ್ಟೇರಿದೆ. ತಮ್ಮ ನೂತನ ಚಿತ್ರದ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಪ್ರಸಿದ್ಧ್‌, “ಶೇರ್’ ಪಕ್ಕಾ ಆಕ್ಷನ್ ಥ್ರಿಲ್ಲರ್ ಚಿತ್ರ. ಅನಾಥಾಶ್ರಮದಲ್ಲಿ ಹೆಚ್ಚಿನ ಕಥೆ ನಡೆಯುತ್ತದೆ. ಅಲ್ಲೊಬ್ಬ ರಾಜಕಾರಣಿ, ಎರಡು ಗುಂಪುಗಳ ಮಧ್ಯೆಯ ವೈಮನಸ್ಸು.. ಹೀಗೆ ಚಿತ್ರದ ಕತೆ ಸಾಗುತ್ತದೆ. ನಾಯಕ – ನಾಯಕಿ ಅನಾಥರ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. APMC ಮಾರುಕಟ್ಟೆಯಲ್ಲೂ ನಮ್ಮ ಚಿತ್ರದ ಕತೆ ಸಾಗುತ್ತದೆ” ಎನ್ನುತ್ತಾರೆ. ಪ್ರಸಿದ್ಧ್‌ ಮತ್ತು ಕಿರಣ್‌ ರಾಜ್‌ ಕಾಂಬಿನೇಷನ್‌ನ ‘ಭರ್ಜರಿ ಗಂಡು’ ಸೆಪ್ಟೆಂಬರ್‌ನಲ್ಲಿ ತೆರೆಕಾಣುತ್ತಿದೆ.

ಕಿರುತೆರೆಯಲ್ಲಿ ಚಾಕೋಲೆಟ್‌ ಹೀರೋ ಎಂದೇ ಕರೆಸಿಕೊಳ್ಳುವ ಕಿರಣ್‌ ರಾಜ್‌ ಈ ಚಿತ್ರದ ಮಾಸ್‌ ಪಾತ್ರಕ್ಕೆ ಅಗತ್ಯವಿರುವ ಕಿಕ್ ಬಾಕ್ಸಿಂಗ್, ಮಾರ್ಷಲ್ ಆರ್ಟ್ಸ್ ತರಬೇತಿ ಪಡೆಯುತ್ತಿದ್ದಾರೆ. ‘ಭರ್ಜರಿ ಗಂಡು’ ಚಿತ್ರದಲ್ಲಿ ಭಾಗಿಯಾಗಿರುವ ತಂಡದ ಬಹುಪಾಲು ಜನರು ಈ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. “ಈಗಾಗಲೇ ಒಟ್ಟಿಗೆ ಕೆಲಸ ಮಾಡಿರುವ ಚಿತ್ರತಂಡದೊಂದಿಗೆ ಈಗ ಮತ್ತೆ ಕೆಲಸ ಮಾಡುತ್ತಿರುವುದು ಸುಲಭ ಮತ್ತು ಸರಾಗ. ಚಿತ್ರದಲ್ಲಿನ ನನ್ನ ಪಾತ್ರಕ್ಕಾಗಿ ವಿಶೇಷ ಸ್ಟಂಟ್ಸ್‌ ತರಬೇತಿ ಪಡೆಯುತ್ತಿದ್ದೇನೆ” ಎನ್ನುತ್ತಾರೆ ಕಿರಣ್‌ ರಾಜ್‌. ಬೀದರ್‌ ಮೂಲದ ಸುಂದರರಾಜ್‌ ನಿರ್ಮಿಸುತ್ತಿರುವ ಚಿತ್ರದ ನಾಯಕಿಯಾಗಿ ಸುರೇಖ ನಟಿಸುತ್ತಿದ್ದಾರೆ. ಕಿರುತೆರೆಯ ಜನಪ್ರಿಯ ನಟಿ ತನೀಶಾ ಈ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿಟ್ಟಿ ಕೌಶಿಕ್‌ ಛಾಯಾಗ್ರಹಣ, ಗುಮ್ಮಿನೇನಿ ವಿಜಯ್‌ ಸಂಗೀತ ಚಿತ್ರಕ್ಕಿದೆ.

Previous articleTPL ಪಂದ್ಯಾವಳಿಯ ಜೆರ್ಸಿ, ಟ್ರೋಫಿ ಬಿಡುಗಡೆ; ಕಿರುತೆರೆ ಕಲಾವಿದರ ಕ್ರಿಕೆಟ್
Next article‘ಜಾರೀ ಬಿದ್ದರೂ ಯಾಕೀ ನಗು’; ‘ಕಂಬ್ಳಿಹುಳ’ ಸಿನಿಮಾದ ವೀಡಿಯೋ ಸಾಂಗ್‌

LEAVE A REPLY

Connect with

Please enter your comment!
Please enter your name here