ವಿಜಯಪ್ರಕಾಶ್‌ ಹಾಡಿರುವ ‘ಕಂಬ್ಳಿಹುಳ’ ಸಿನಿಮಾದ ‘ಜಾರೀ ಬಿದ್ದರೂ ಯಾಕೀ ನಗು’ ವೀಡಿಯೋ ಸಾಂಗ್‌ ಮೇಕಿಂಗ್‌ನಿಂದಾಗಿ ಗಮನ ಸೆಳೆಯುತ್ತದೆ. ನವನ್‌ ಶ್ರೀನಿವಾಸ್‌ ನಿರ್ದೇಶನದ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಅಂಜನ್‌ ನಾಗೇಂದ್ರ ಮತ್ತು ಅಶ್ವಿತಾ ಹೆಗ್ಡೆ ಇದ್ದಾರೆ.

ಸಿನಿಮಾ ವ್ಯಾಮೋಹಿಗಳು ಸೇರಿ ತಯಾರಿಸಿರುವ ‘ಕಂಬ್ಳಿಹುಳ’ ಸಿನಿಮಾದ ಮೊದಲ ವೀಡಿಯೋ ಹಾಡು ಬಿಡುಗಡೆಯಾಗಿದೆ. ‘ಜಾರೀ ಬಿದ್ದರೂ ಯಾಕೀ ನಗು’ ಎನ್ನುವ ಸಾಹಿತ್ಯದ ಹಾಡು ಆಕರ್ಷಕ ಮತ್ತು ಪ್ರೇಮಿಗಳ ತುಂಟು ನೋಟಗಳ ಮೇಕಿಂಗ್‌ನೊಂದಿಗೂ ಗಮನ ಸೆಳೆಯುತ್ತದೆ. ಮುದ್ದಾದ ಜೋಡಿಯ ನವಿರು ಪ್ರೇಮಕಥೆ ಇಲ್ಲಿದೆ. ಮಹದೇವ ಸ್ವಾಮಿ, ರವಿ ಧನ್ಯನ್ ಸಾಹಿತ್ಯದ ಹಾಡಿಗೆ ವಿಜಯ್ ಪ್ರಕಾಶ್ ದನಿಯಾಗಿದ್ದಾರೆ. ರಂಗಭೂಮಿ ಕಲಾವಿದ ಅಂಜನ್ ನಾಗೇಂದ್ರ ಮತ್ತು ಅಶ್ವಿತಾ ಆರ್. ಹೆಗ್ಡೆ ಸಹಜ ನಟನೆಯೊಂದಿಗೆ ಗಮನಸೆಳೆಯುತ್ತಾರೆ. ತಮ್ಮ ಸಿನಿಮಾ ಕುರಿತು ಮಾತನಾಡುವ ನಿರ್ದೇಶಕ ನವನ್ ಶ್ರೀನಿವಾಸ್, “ಕಿರುಚಿತ್ರದಿಂದ ಆರಂಭವಾದ ನನ್ನ ಜರ್ನಿ ಈಗ ಬೆಳ್ಳಿತೆರೆಗೆ ಬಂದು ನಿಂತಿದೆ. ‘ಕಂಬ್ಳಿಹುಳ’ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದೇನೆ. ಮಲೆನಾಡಿನ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಚಿತ್ರವಿದು. ಇದೊಂದು ಎಮೋಷನಲ್ ಜರ್ನಿ. ಎರಡೂಕಾಲು ಗಂಟೆ ನಗು, ಅಳು, ಕಾಮಿಡಿ ಎಲ್ಲವೂ ಇದೆ” ಎನ್ನುತ್ತಾರೆ. ನೈಜ ಘಟನೆಯಾಧಾರಿತ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ರೋಹಿತ್ ಕುಮಾರ್, ದೀಪಕ್ ರೈ ಪಣಜೆ, ಸಂಧ್ಯಾ ಅರಕೆರೆ, ಸಂಪತ್ ಶೆಟ್ಟಿ ಇದ್ದಾರೆ. ವಿಜಯ್, ಸವೀನ್, ಪುನೀತ್ ಹಾಗೂ ಗುರು ನಿರ್ಮಾಣದ ಚಿತ್ರಕ್ಕೆ ಸತೀಶ್ ರಾಜೇಂದ್ರ ಛಾಯಾಗ್ರಾಹಣವಿದೆ.

LEAVE A REPLY

Connect with

Please enter your comment!
Please enter your name here