ಕನ್ನಡ ಕಿರುತೆರೆ ಮತ್ತು ಸಿನಿಮಾ ನಟಿಯರು ಪಾಲ್ಗೊಂಡ ‘ಕ್ವೀನ್ಸ್‌ ಪ್ರೀಮಿಯರ್‌ ಲೀಗ್‌’ ಕ್ರಿಕೆಟ್‌ ಪಂದ್ಯಾವಳಿಗೆ ತೆರೆಬಿದ್ದಿದೆ. ಕೋಲಾರ ಕ್ವೀನ್ಸ್‌ ತಂಡದವರು QPL ಕಪ್‌ ಗೆದ್ದಿದ್ದಾರೆ. ಕೋಲಾರ ಕ್ವೀನ್ಸ್ ತಂಡದ ಆಟಗಾರ್ತಿ ಹೇಮಾ ಟೂರ್ನಿಯ ಶ್ರೇಷ್ಠ ಆಟಗಾರ್ತಿಯಾಗಿ ಹೊರಹೊಮ್ಮಿದರೆ, ಬೆಂಗಳೂರು ಕ್ವೀನ್ಸ್ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ.

ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ QPL ಕ್ರಿಕೆಟ್‌ ಪಂದ್ಯಾವಳಿಗೆ ತೆರೆಬಿದ್ದಿದೆ. ನಟಿ ಧನ್ಯಾ ರಾಮ್‌ ನಾಯಕತ್ವದ ಕೋಲಾರ ಕ್ವೀನ್ಸ್ ಟೀಮ್ QPL ಕಪ್ ಮುಡಿಗೇರಿಸಿಕೊಂಡಿದೆ. ಕೋಲಾರ ಕ್ವೀನ್ಸ್ ತಂಡದ ಆಟಗಾರ್ತಿ ಹೇಮಾ ಟೂರ್ನಿಯ ಶ್ರೇಷ್ಠ ಆಟಗಾರ್ತಿಯಾಗಿ ಹೊರಹೊಮ್ಮಿದರೆ, ಬೆಂಗಳೂರು ಕ್ವೀನ್ಸ್ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ. ಬೆಳಗಾವಿ ಕ್ವೀನ್ಸ್‌ನ ಕವಿತಾ ಗೌಡ ಅತ್ಯುತ್ತಮ ಬ್ಯಾಟ್ಸ್‌ಮೆನ್‌ ಸ್ಥಾನ ಪಡೆದರೆ ಬೆಂಗಳೂರು ಕ್ವೀನ್ಸ್‌ನ ಅನುಪಮಾ ಗೌಡ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಸರಣಿ ಆಟಗಾರ ಪ್ರಶಸ್ತಿಯನ್ನು ಕೋಲಾರ ಟೀಂನ ಹೇಮಾ ತಿಮ್ಮಯ್ಯ ಪಡೆದುಕೊಂಡರೆ, ಗ್ರೀಷ್ಮಾ ಗೌಡ ಪಂದ್ಯದ ಅಂತಿಮ ಆಟಗಾರ ಪ್ರಶಸ್ತಿ ಪಡೆದುಕೊಂಡರು.

ಕೋಲಾರ ತಂಡವು 5 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 88 ರನ್ ಗಳಿಸಿತ್ತು. ಈ ಮೊತ್ತಕ್ಕೆ ಉತ್ತರವಾಗಿ ಬೆಂಗಳೂರು ತಂಡವು ಐದು ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 53 ರನ್‌ ಗಳಿಸಿ ಹೋರಾಟ ಮುಗಿಸಿತು. ಕೋಲಾರ ಕ್ಲೀನ್ಸ್ ತಂಡವು ಅಕರ್ಷಕ ಟ್ರೋಫಿಯೊಂದಿಗೆ 6 ಲಕ್ಷ ಬಹುಮಾನವನ್ನು ತನ್ನದಾಗಿಸಿಕೊಂಡಿತು. ರನ್ನರ್ ಅಪ್ ಬೆಂಗಳೂರು ಕ್ಲೀನ್ಸ್ ತಂಡವು 3 ಲಕ್ಷ ಬಹುಮಾನ ಪಡೆಯಿತು. ಕ್ರಿಯೇಟೀವ್‌ ಫ್ರೆಂಡ್ಸ್‌ ಸಂಸ್ಥೆ ಆಯೋಜಿಸಿದ್ದ ಪಂದ್ಯಾವಳಿ ಇದು. ಪಂದ್ಯಾವಳಿ ಸಂಘಟಕ ಮಹೇಶ್‌ ಗೌಡ ಅವರು ಮಾತನಾಡಿ, ‘ಟೂರ್ನಿಯನ್ನು ಮತ್ತಷ್ಟು ದೊಡ್ಡ ಮಟ್ಟದಲ್ಲಿ ಮಾಡಲು ಬೇರೆ ಬೇರೆ ರಾಜ್ಯಗಳ ತಂಡಗಳನ್ನೂ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಐಪಿಎಲ್ ಮಟ್ಟಕ್ಕೆ ಬೆಳೆಸುವುದು ನಮ್ಮ ಗುರಿ’ ಎಂದಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಮೋದ್ ಶೆಟ್ಟಿ, ಭವ್ಯಾ ಗೌಡ, ಪ್ರೇಮ್ ಮಾಲೂರ್, ಸ್ವಸ್ತಿಕ್ ಆರ್ಯಾ, ಚೇತನ್ ಪಾರೀಕ್, ಸಂತೋಷ್ ಬಿಲ್ಲವ, ಸಚಿನ್ ಮಹಾದೇವ, ರೂಪಿಕಾ ಉಪಸ್ಥಿತರಿದ್ದರು. ಟೂರ್ನಿಯಲ್ಲಿ ಕಿರುತೆರೆ ಹಾಗೂ ಹಿರಿತೆರೆ ಕಲಾವಿದೆಯರ ಜೊತೆಯಲ್ಲಿ ನಿರೂಪಕಿಯರು, ರೂಪದರ್ಶಿಯರು ಭಾಗವಹಿಸಿದ್ದರು. ಟೂರ್ನಿಯಲ್ಲಿ ಒಟ್ಟು ಹತ್ತು ತಂಡಗಳು ಸೆಣಸಾಡಿದವು. ಕ್ವೀನ್ ಪ್ರೀಮಿಯರ್ ಲೀಗ್‌ನಿಂದ ಸಂಗ್ರಹವಾದ ಹಣವನ್ನು ‘ರಂಗಸೌರಭ’ ರಂಗತಂಡದ ಚಟುವಟಿಕೆಗಳಿಗೆ ನೀಡಲಾಗುತ್ತದೆ.

LEAVE A REPLY

Connect with

Please enter your comment!
Please enter your name here