ಜೆ.ಚಂದ್ರಕಲಾ ನಿರ್ದೇಶನದ ‘ಆಶಿಕಿ’ ಸಿನಿಮಾ ತೆರೆಗೆ ಸಿದ್ಧವಾಗಿದೆ. ಆಡಿಯೋ ಬಿಡುಗಡೆಗೂ ಮುನ್ನ ‘ಯಾರಾ ಯಾರಾ’ ಹಾಡಿನ ವೀಡಿಯೋ ಟೀಸರ್‌ನೊಂದಿಗೆ ಪ್ರೊಮೋಷನ್‌ ಶುರು ಮಾಡಿದೆ ಚಿತ್ರತಂಡ. ಸಂದೀಪ್‌ ಕುಮಾರ್‌, ಐಶ್ವರ್ಯಾ ಸಿಂಧೋಗಿ, ಪ್ರದೀಪ್‌ ಕುಮಾರ್‌ ಚಿತ್ರದ ಪ್ರಮುಖ ಕಲಾವಿದರು.

‘ಕ್ವಾಟ್ಲೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದವರು ನಿರ್ದೇಶಕಿ ಜೆ.ಚಂದ್ರಕಲಾ. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಆಶಿಕಿ’ ಸಿನಿಮಾದ ಆಡಿಯೋ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇದಕ್ಕೂ ಮುನ್ನ ‘ಯಾರಾ ಯಾರಾ’ ಹಾಡಿನ ವೀಡಿಯೋ ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರೊಮೋಷನ್‌ ಶುರು ಮಾಡಿದೆ ಚಿತ್ರತಂಡ. ಲಿಯೋ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡಿಗೆ ಸ್ವತಃ ಚಿತ್ರದ ನಿರ್ದೇಶಕಿ ಚಂದ್ರಕಲಾ ಸಾಹಿತ್ಯ ಬರೆದಿದ್ದು ಅಶ್ವಿನ್ ಶರ್ಮಾ ದನಿಯಾಗಿದ್ದಾರೆ. ತ್ರಿಕೋನ ಪ್ರೇಮಕಥೆಯ ಮ್ಯೂಸಿಕಲ್ ಸಿನಿಮಾ ‘ಆಶಿಕಿ’ಯಲ್ಲಿ ಪತ್ರಕರ್ತ ಸಂದೀಪ್ ಕುಮಾರ್ ನಾಯಕರಾಗಿ ಅಭಿನಯಿಸಿದ್ದು ನಾಯಕಿಯಾಗಿ ಐಶ್ವರ್ಯ ಸಿಂಧೋಗಿ ಇದ್ದಾರೆ. ಇನ್ನೊಬ್ಬ ನಾಯಕನ ಪಾತ್ರದಲ್ಲಿ ಪ್ರದೀಪ್ ಕುಮಾರ್ ನಟಿಸಿದ್ದು ಗುರುಪ್ರಸಾದ್, ಸುಚೇಂದ್ರ ಪ್ರಸಾದ್, ತುಳಸಿ ಶಿವಮಣಿ, ಪ್ರಮೋದಿನಿ ಇತರೆ ಪ್ರಮುಖ ತಾರಾಬಳಗದಲ್ಲಿದ್ದಾರೆ. ಇತ್ತಿಚೆಗಷ್ಟೆ ಸೆನ್ಸಾರ್ ಮುಗಿಸಿರುವ ‘ಆಶಿಕಿ’ ದಸರಾದಲ್ಲಿ ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದ್ದು ಇದೇ ತಿಂಗಳಲ್ಲಿ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿವೆ. ಕುಲು ಮನಾಲಿ, ಕೇರಳ, ಆಂಧ್ರಪ್ರದೇಶ, ಪಂಜಾಬ್, ಚಂಡೀಗಡ, ಚಿಕ್ಕಮಗಳೂರು, ಆಗ್ರಾ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಚಿತ್ರೀಕರಣ ನಡೆದಿದೆ. ಜಿ.ಚಂದ್ರಶೇಖರ್ ನಿರ್ಮಾಣದ ಚಿತ್ರಕ್ಕೆ ರಾಜರತ್ನ, ನಿತಿನ್ ಅಪ್ಪಿ ಛಾಯಾಗ್ರಾಹಣ, ನಾಗೇಂದ್ರ ಅರಸ್ ಸಂಕಲನವಿದೆ.

Previous articleಕನ್ನಡ ರಂಗಭೂಮಿಯಲ್ಲಿ ಮೊದಲ ಬಾರಿಗೆ ಇಮ್ಮೆರ್ಸೀವ್‌ ಥಿಯೇಟರ್ ಪ್ರೊಡಕ್ಷನ್ IC 47
Next articleಹಳೆಯ ಸಮಸ್ಯೆಯ ಹೊಸತನದ ನಿರೂಪಣೆ ‘ಡಾರ್ಲಿಂಗ್ಸ್’

LEAVE A REPLY

Connect with

Please enter your comment!
Please enter your name here