‘ಲೂಸಿಯಾ’, ‘ಯೂ ಟರ್ನ್‌’ ಸಿನಿಮಾಗಳ ನಿರ್ದೇಶಕ ಪವನ್‌ ಕುಮಾರ್‌ ಅವರ ‘ಧೂಮಂ’ ಸಿನಿಮಾ ನಾಳೆ (ಜೂನ್‌ 23) ತೆರೆಕಾಣುತ್ತಿದೆ. ಕನ್ನಡದ ಹೊಂಬಾಳೆ ಫಿಲಂಸ್‌ ನಿರ್ಮಾಣದ ಸಿನಿಮಾ ಮೂಲ ಮಲಯಾಳಂ ಭಾಷೆಯದ್ದು. ನಿರ್ಮಾಪಕರು ರಾಜ್ಯದಲ್ಲಿ ಕನ್ನಡ ಅವತರಣಿಕೆಯನ್ನು 150ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲಿದ್ದಾರೆ.

ಹೊಂಬಾಳೆ ಫಿಲಂಸ್‌ ಬ್ಯಾನರ್‌ ನಿರ್ಮಾಣದ ಚೊಚ್ಚಲ ಮಲಯಾಳಂ ಸಿನಿಮಾ ‘ಧೂಮಂ’ ನಾಳೆ ತೆರೆಕಾಣುತ್ತಿದೆ. ಪವನ್‌ ಕುಮಾರ್‌ ಕತೆ, ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಮಿಸ್ಟರಿ – ಡ್ರಾಮಾ ಇದು. ಕೇರಳದಲ್ಲಿ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ರಾಜ್ಯದಲ್ಲಿ ಕನ್ನಡ ಅವತರಣಿಕೆಯನ್ನು 150ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್‌ ಮಾಡುವುದು ಹೊಂಬಾಳೆ ಫಿಲಂಸ್‌ ಯೋಜನೆ. ಫಹಾದ್‌ ಫಾಸಿಲ್‌, ಅಪರ್ಣಾ ಬಾಲಮುರಳಿ, ಅಚ್ಯುತ್‌ ಕುಮಾರ್‌, ರೋಷನ್‌ ಮ್ಯಾಥ್ಯೂ, ವಿನೀತ್‌ ರಾಧಾಕೃಷ್ಣನ್‌, ಜಾಯ್‌ ಮ್ಯಾಥ್ಯೂ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ, ಸುರೇಶ್ ಸಂಕಲನ ಮತ್ತು ಪ್ರೀತಾ ಜಯರಾಮನ್ ಛಾಯಾಗ್ರಹಣ ಚಿತ್ರಕ್ಕಿದೆ.

‘ಧೂಮಂ’ ಪವನ್‌ ಕುಮಾರ್‌ ಅವರ ಒಂದೂವರೆ ದಶಕದ ಕನಸು. ‘ಲೂಸಿಯಾ’ ಸಿನಿಮಾ ನಂತರದ ದಿನಗಳಲ್ಲಿ ಅವರ ನಿರ್ದೇಶನದಲ್ಲಿ ‘C10H14N2’ ಘೋಷಣೆಯಾಗಿತ್ತು. ಇದೇ ಈಗ ‘ಧೂಮಂ’ ಶೀರ್ಷಕೆಯಡಿ ಸಾಕಾರಗೊಂಡಿದೆ. ಮೂಲ ಮಲಯಾಳಂ ಸಿನಿಮಾ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಿಗೆ ಡಬ್‌ ಆಗಿ ಬಿಡುಗಡೆಯಾಗುತ್ತಿದೆ. ‘ಫಹಾದ್‌ ಫಾಸಿಲ್‌ ಪ್ರಯೋಗಶೀಲ ಕತೆಗಳನ್ನು ಹುಡುಕುತ್ತಾ ಹೊರಡುತ್ತಾರೆ. ಅವರಿಗೆ ದೊಡ್ಡ ಫ್ಯಾನ್‌ ಬೇಸ್‌ ಇದೆ. ಆದಾಗ್ಯೂ ಅವರು ಇಮೇಜಿನ ಹಂಗು ತೊರೆದು ಎಕ್ಸ್‌ಪೆರಿಮೆಂಟಲ್‌ ಪ್ರಾಜೆಕ್ಟ್‌ಗಳನ್ನು ಮಾಡುತ್ತಾರೆ. ಸಿನಿಮಾದಲ್ಲಿನ ಅವರ ಉಪಸ್ಥಿತಿಯಿಂದ ನಾನು ಕತೆ ಹೇಳುವುದು ಸುಲಭವಾಯ್ತು’ ಎನ್ನುವುದು ಪವನ್‌ ಕುಮಾರ್‌ ಮಾತು.

LEAVE A REPLY

Connect with

Please enter your comment!
Please enter your name here