ಸೀನು ರಾಮಸ್ವಾಮಿ ನಿರ್ದೇಶನದ ‘ಕೋಳಿಪಣ್ಣೈ ಚೆಲ್ಲದುರೈ’ ತಮಿಳು ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಈಗನ್‌, ಬ್ರಿಗಿಡಾ, ಯೋಗಿ ಬಾಬು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಈಗನ್ ಮತ್ತು ಬ್ರಿಗಿಡಾ ಸಾಗಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಕೋಳಿಪಣ್ಣೈ ಚೆಲ್ಲದುರೈ’ ತಮಿಳು ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರವನ್ನು ಸೀನು ರಾಮಸ್ವಾಮಿ ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಫಸ್ಟ್‌ಲುಕ್‌ ಫೊಸ್ಟರ್‌ನಲ್ಲಿ ಯೋಗಿ ಬಾಬು ಮತ್ತು ಏಗನ್‌ ಕಾಣಿಸಿಕೊಂಡಿದ್ದಾರೆ. ಐಶ್ವರ್ಯ ದತ್ತಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ‘ಇರವಿನ್ ನಿಜಲ್’ ಖ್ಯಾತಿಯ ಬ್ರಿಗಿಡಾ ಸಾಗಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದ ಪಾತ್ರವರ್ಗ ಮತ್ತು ಇತರ ವಿವರಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. Vision Cinema House ಬ್ಯಾನರ್‌ ಅಡಿಯಲ್ಲಿ ನಿರ್ಮಿಸಿರುವ ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ವಿಜೇತ ಶ್ರೀಕರ್ ಪ್ರಸಾದ್ ಸಂಕಲನ ನಿರ್ವಹಿಸುತ್ತಿದ್ದಾರೆ. ಎನ್ ಆರ್ ರಘುನಂದನ್ ಸಂಗೀತ ಸಂಯೋಜಿಸಿದ್ದು, ಅಶೋಕ್‌ರಾಜ್ ಛಾಯಾಗ್ರಹಣ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here