‘ಸೂಫಿಯುಂ ಸುಜಾತಯುಂ’, ‘‌ಹೋಮ್’, ‘ಅಂಗಮಲೇ ಬಾಯ್ಸ್’ನಂತಹ ಯಶಸ್ವೀ ಮಲಯಾಳಂ ಚಿತ್ರಗಳನ್ನು ನೀಡಿರುವ Friday Film Houseನೊಂದಿಗೆ ‘ಪಡಕ್ಕಲಂ’ ಮಲಯಾಳಂ ಚಿತ್ರಕ್ಕಾಗಿ KRG ಕೈಜೋಡಿಸಿದೆ. ಈ ಚಿತ್ರಕ್ಕೆ ಮನು ಸ್ವರಾಜ್ ಚಿತ್ರಕಥೆ ಬರೆದು ನಿರ್ದೇಶಿಸಲಿದ್ದಾರೆ.

ಕನ್ನಡದ ಮುಂಚೂಣಿ ಚಿತ್ರನಿರ್ಮಾಣ ಮತ್ತು ವಿರತಣೆ ಸಂಸ್ಥೆ KRG Studios ತಮಿಳು ಮತ್ತು ಮಲಯಾಳಂ ಚಿತ್ರರಂಗಗಳಿಗೆ ಕಾಲಿಟ್ಟಿದೆ. ‘ಸೂಫಿಯುಂ ಸುಜಾತಯುಂ’, ‘‌ಹೋಮ್’, ‘ಅಂಗಮಲೇ ಬಾಯ್ಸ್’ನಂತಹ ಯಶಸ್ವೀ ಮಲಯಾಳಂ ಚಿತ್ರಗಳನ್ನು ನೀಡಿರುವ Friday Film Houseನೊಂದಿಗೆ ‘ಪಡಕ್ಕಲಂ’ ಮಲಯಾಳಂ ಚಿತ್ರಕ್ಕಾಗಿ KRG ಕೈಜೋಡಿಸಿದೆ. ಈ ಚಿತ್ರಕ್ಕೆ ಮನು ಸ್ವರಾಜ್ ಚಿತ್ರಕಥೆ ಬರೆದು ನಿರ್ದೇಶಿಸಲಿದ್ದಾರೆ. ಬೇಸಿಲ್ ಜೋಸೆಫ್‌ನಂತಹ ಖ್ಯಾತ ನಿರ್ದೇಶಕರೊಂದಿಗೆ ಸಹಾಯಕ ನಿರ್ದೇಶಕನಾಗಿ ಕಾರ್ಯನಿರ್ವಹಿಸಿರುವ ಖ್ಯಾತಿ ಇವರದ್ದು. KRG Studios ಮತ್ತು Friday Film House ಸಹಯೋಗದಲ್ಲಿ ಈಗಾಗಲೇ ಮೂಡಿಬಂದಿರುವ ‘ಅಬ್ಬಬ್ಬ’ ಹಾಸ್ಯ ಚಿತ್ರ ‘ವಾಲಟಿ’ ಮಲಯಾಳಂ ಚಿತ್ರದ ಕನ್ನಡ ರೀಮೇಕ್‌.

ಹೆಸರಾಂತ ಹಿಂದಿ ಚಿತ್ರ ನಿರ್ಮಾಣ ಸಂಸ್ಥೆಯಾದ TVFನೊಂದಿಗೆ KRG Studios ‘ಪೌಡರ್’ ಕನ್ನಡ ಚಿತ್ರ ನಿರ್ಮಿಸುತ್ತಿದೆ. ಇದಲ್ಲದೆ ‘Bangalore Days’, ‘ಉಸ್ತಾದ್ ಹೊಟೇಲ್’ ಖ್ಯಾತಿಯ ಅಂಜಲಿ ಮೆನನ್ ನಿರ್ದೇಶನದಲ್ಲಿ ತಮಿಳು ಚಿತ್ರವೊಂದನ್ನು ನಿರ್ಮಿಸುವ ಮೂಲಕ ತಮಿಳು ಚಿತ್ರರಂಗಕ್ಕೂ ಕಾಲಿಡಲಿದೆ. ನವೀನ ಕಥಾವಸ್ತುಗಳನ್ನು ಚಿತ್ರರಂಗಕ್ಕೆ ಪರಿಚಯಿಸುವ ಉದ್ದೇಶ KRG ಅವರದ್ದು. ಈ ಮೂಲಕ ಕನ್ನಡ ಚಿತ್ರಗಳ ಮಾರ್ಕೆಟಿಂಗ್ ವ್ಯಾಪ್ತಿಯನ್ನು ಹೊರ ರಾಜ್ಯಗಳಲ್ಲಿ ವಿಸ್ತರಿಸಲು ಹೊರಟಿದೆ. ಸದ್ಯ ಕೆಆರ್‌ಜಿ ಬ್ಯಾನರ್‌ನಡಿ ಪೌಡರ್, ಉತ್ತರಕಾಂಡ, ಕಿರಿಕೆಟ್ 11, KK ಚಿತ್ರಗಳು ತಯಾರಾಗುತ್ತಿವೆ.

LEAVE A REPLY

Connect with

Please enter your comment!
Please enter your name here