ಶಾರುಖ್‌, ಕಾಜೋಲ್‌ ಮತ್ತು ರಾಣಿ ಮುಖರ್ಜಿ ಅಭಿನಯದ ‘ಕುಚ್‌ ಕುಚ್‌ ಹೋತಾ ಹೈ’ ಸಿನಿಮಾ ತೆರೆಕಂಡು ಈ ಹೊತ್ತಿಗೆ 25 ವರ್ಷ. ಈ ಸಂಭ್ರಮಾಚರಣೆಯ ನಿಮಿತ್ತ ನಿರ್ಮಾಪಕರು ಚಿತ್ರವನ್ನು ಅಕ್ಟೋಬರ್‌ 15ರಂದು ಮರುಬಿಡುಗಡೆ ಮಾಡುತ್ತಿದ್ದಾರೆ. ಮುಂಬೈನ ವಾರ್ಸೋವಾ PVRನಲ್ಲಿ 25 ರೂಪಾಯಿ ಟಿಕೆಟ್‌ ದರ ನಿಗದಿಗೊಳಿಸಿ ಚಿತ್ರವನ್ನು ಸ್ಕ್ರೀನಿಂಗ್‌ ಮಾಡಲಾಗುತ್ತಿದೆ.

ಶಾರುಖ್​ ಖಾನ್​, ಕಾಜೋಲ್​ ಹಾಗೂ ರಾಣಿ ಮುಖರ್ಜಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ‘ಕುಚ್​ ಕುಚ್​ ಹೋತಾ ಹೈ’ ಸಿನಿಮಾ 1998ರಲ್ಲಿ ಬಿಡುಗಡೆಯಾಗಿತ್ತು. ಕರಣ್​ ಜೋಹರ್​ ನಿರ್ದೇಶಿಸಿದ್ದ ಆ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಈಗ ಸಿನಿಮಾಗೆ 25 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮರುಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಈ ಚಿತ್ರದ ಟಿಕೆಟ್​ ಬುಕಿಂಗ್​ ಪ್ರಾರಂಭವಾದ 25 ನಿಮಿಷಗಳಲ್ಲಿ ಟಿಕೆಟ್‌ಗಳು ಸೋಲ್ಡ್​ ಔಟ್​ ಆಗಿವೆ. ಇದು 25ನೇ ವರ್ಷದ ಸಂಭ್ರಮಾಚರಣೆ ಆಗಿರುವುದರಿಂದ​ 25 ರೂಪಾಯಿಗೆ ಟಿಕೆಟ್​ ಮಾರಾಟ ಮಾಡಲಾಗಿದೆ. ಶಾರುಖ್​ ಖಾನ್​ ಅಭಿಮಾನಿಗಳು ‘ಕುಚ್​ ಕುಚ್​ ಹೋತಾ ಹೈ’ ಚಿತ್ರವನ್ನು ಮತ್ತೊಮ್ಮೆ ದೊಡ್ಡ ಪರದೆಯಲ್ಲಿ ನೋಡಲು ಉತ್ಸುಕರಾಗಿದ್ದಾರೆ. ಚಿತ್ರಕ್ಕೆ 25 ವರ್ಷಗಳ ಬಳಿಕವೂ ಪ್ರೇಕ್ಷಕರು ಅದೇ ಒಲವು ತೋರಿಸುತ್ತಿರುವುದು ವಿಶೇಷ.

ಕಳೆದ ಮೂರು ದಶಕಗಳಿಂದಲೂ ಶಾರುಖ್‌ ಖಾನ್​ ಬಾಲಿವುಡ್​ನ ಜನಪ್ರಿಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಅವರ ಸಿನಿಮಾಗಳಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಈ ವರ್ಷ ಅವರ ‘ಪಠಾಣ್​’ ಮತ್ತು ‘ಜವಾನ್’ ಸಿನಿಮಾಗಳು ಒಂದೂವರೆ ಸಾವಿರ ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿವೆ. ಹೊಸ ಸಿನಿಮಾಗಳಷ್ಟೇ ಅಲ್ಲದೇ ಶಾರುಖ್​ ಖಾನ್​ ನಟನೆಯ ಹಳೇ ಸಿನಿಮಾಗಳು ಅಷ್ಟೇ ಜನಪ್ರಿಯತೆ ಹೊಂದಿವೆ. ಅಕ್ಟೋಬರ್​ 15ರಂದು ಮುಂಬೈನ ವರ್ಸೋವಾದಲ್ಲಿರುವ PVR ಮಲ್ಟಿಪ್ಲೆಕ್ಸ್​ನಲ್ಲಿ ಈ ಸಿನಿಮಾಗೆ ಎರಡು ಶೋ ನಿಗದಿ ಆಗಿದೆ. ಒಂದು ಪರದೆಯಲ್ಲಿ ಸಂಜೆ 7 ಗಂಟೆಗೆ ಹಾಗೂ ಇನ್ನೊಂದು ಪರದೆಯಲ್ಲಿ ಸಂಜೆ 7.15ಕ್ಕೆ ಶೋ ಇರಲಿದೆ.

LEAVE A REPLY

Connect with

Please enter your comment!
Please enter your name here